ಅಸುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ರಾಣೇಬೆನ್ನೂರು 01:  ವಿಜ್ಞಾನ ನಿಂತ ನೀರಲ್ಲ ಅದು ಸದಾ ಹರಿಯುವ ಗಂಗೆಯಂತೆ, ಇಂದಿನ ವಿದ್ಯಾರ್ಥಿಗಳಲ್ಲಿ  ಬಹುತೇಕ ವೈಜ್ಞಾನಿಕ ವಿಚಾರಗಳು ಸರಾಗವಾಗಿ ಹರಿಯುತ್ತದೆ ಇದು ದೇಶದ ವೈಜ್ಞಾನಿಕ ಅಭಿವೃದ್ಧಿಯ ಸಂಕೇತವಾಗಿದೆ ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರ​‍್ಪ ಕಳ್ಳಿಮನಿ ಹೇಳಿದರು.ಅವರು, ಬ್ಯಾಡಗಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

ಗ್ರಾಮ ಪಂಚಾಯತಿ ಅಧ್ಯಕ್ಷ ಲೀಲಾ ಹಲಗೇರಿ ಅವರು, ಸಿ.ವಿ. ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಪಿಡಿಒ ನವೀನ್ ಹಾಗೂ ಬಿ ಆರ್ ಪಿ. ನಾಗರಾಜ್ ಎನ್‌.ಅವರು, ಪ್ರಸ್ತುತ ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ವಿಜ್ಞಾನಿಗಳ ಪಾತ್ರ ಕುರಿತು ಉಪನ್ಯಾಸ ನೀಡಿದರು. ವಿಜ್ಞಾನ ಶಿಕ್ಷಕಿ ವನಿತಾ ಕುದರಿ ಅವರ ಮಾರ್ಗದರ್ಶನದಲ್ಲಿ ನೂರಾರು ವಿದ್ಯಾರ್ಥಿಗಳು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಅನೇಕ ಮಾದರಿಗಳನ್ನು ಪ್ರದರ್ಶಿಸಿ, ಗ್ರಾಮಸ್ಥರ ಗಮನ ಸೆಳೆದರು. ಮಕ್ಕಳ ಹಸ್ತ ಪ್ರತಿ" ಹಿನ್ನೊಟ ದರ​‍್ಣ "" ಪುಸ್ತಕ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಗಣೇಶ ದೊಡ್ಡ ಬೂದಿಹಾಳ, ಹನುಮಂತಪ್ಪ ಅಳಲಗೇರಿ, ದ್ಯಾಮಣ್ಣ ಬಾರ್ಕಿ, ಮಂಜುನಾಥ ಮಡಿವಾಳರ, ಗುಡ್ಡಪ್ಪ ಕಂಬಳಿ, ಸೇರಿದಂತೆ, ಶಾಲಾ ಶಿಕ್ಷಕರು ಇತರ ಗಣ್ಯರು ಉಪಸ್ಥಿತರಿದ್ದರು. ಕವಿತಾ ಸಂಗಡಿಗರು ಪ್ರಾರ್ಥಿಸಿದರು. ಪ್ರಧಾನ ಗುರು ಮಂಜುನಾಥ ಕೊರವರ, ಸ್ವಾಗತಿಸಿ ನಿರೂಪಿಸಿದರು. ಸಿ ಆರ್ ಪಿ ಕುಮಾರ್ ವಂದಿಸಿದರು.