ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೆ ಹಲ್ಲೆ: 1 ವರ್ಷ ಸಾದಾ ಕಾರಾಗೃಹ ಶಿಕ್ಷೆ
Assault on forest department staff: 1 year simple imprisonment
ಕೆಳ ನ್ಯಾಯಾಲಯದ ತೀರ್ಪು : ಭಾಗಶಃ ಬದಲಾವಣೆ ಜೊತೆಗೆ ತೀರ್ಪು ಪುರಸ್ಕರಿಸಿದ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ
ಕಾರವಾರ 17: ಮುಂಡಗೋಡ ಚೌಡಳ್ಳಿಯಲ್ಲಿ ಅರಣ್ಯ ಇಲಾಖೆಯ ವಸತಿ ಗೃಹಕ್ಕೆ ನುಗ್ಗಿ ಸಿಬ್ಬಂದಿಗೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಮೊದಲ ಮತ್ತು ಎರಡನೇ ಅಪರಾಧಿಗಳಿಗೆಕೆಳ ನ್ಯಾಯಾಲಯ ನೀಡಿದ ತೀರ್ುನ್ನು ಭಾಗಶಃ ಬದಲಾವಣೆ ಜೊತೆಗೆ ಶಿರಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಪುರಸ್ಕರಿಸಿದ್ದಾರೆ.ಅಪರಾಧಿ ಗೋವಿಂದ ರಾಠೋಡ್ ಮಾಡಿದ ತೀರ್ು ಪುನರ್ ಪರೀಶೀಲನಾ ಅರ್ಜಿಯನ್ನು ಹೆಚ್ಚವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ್ ಕಿಣಿ ತಿರಸ್ಕರಿಸಿದ್ದಾರೆ. ಮುಂಡಗೋಡ ಜೆಎಂಎಫ್ ಸಿ ನೀಡಿದ ತೀರ್ುನ ದಂಡದ ಮೊತ್ತವನ್ನು ರೂ. 4500 ರಿಂದ 2500 ರೂ.ಗೆ ಇಳಿಸಿದ್ದಾರೆ.ಮೂರನೇ ಆರೋಪಿ ಘಟನೆ ನಡೆದಾಗ ಅಪ್ರಾಪ್ತ ನಿದ್ದ ಕಾರಣಕ್ಕೆ ಬಾಲ ನ್ಯಾಯಾಲಯಕ್ಕೆ ಮುಂದಿನ ವಿಚಾರಣೆ ಗೆ ಶಿಫಾರಸ್ಸು ಮಾಡಲಾಗಿದೆ.2016 ರಲ್ಲಿ ಮುಂಡಗೋಡ ಠಾಣೆಯಲ್ಲಿ 241/2016 ದಾಖಲಾಗಿತ್ತು. ಆರೋಪಿ ಗೋವಿಂದ ಹಾಗೂ ಆತನ ಪತ್ನಿ ಶಾರದಾ ಸೇರಿಅರಣ್ಯ ಸಿಬ್ಬಂದಿ ಅರುಣ್ ಕುಮಾರ್ ಸೀತಾರಾಂ ಕಾಶಿ ಹಾಗೂ ಆತನ ಪತ್ನಿ ಮೇಲೆ ಹಲ್ಲೆ ಮಾಡಿದ್ದರು . ಕರ್ತವ್ಯಕ್ಕೆ ಅಡ್ಡಪಡಿಸಿ, ಹಲ್ಲೆಮಾಡಿ ಗಾಯಗೊಳಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದರು. ಇವರಿಗೆ ಮುಂಡಗೋಡ ಜೆಎಂಎಫ್ ಸಿಯಲ್ಲಿ 1 ವರ್ಷ ಸದಾ ಸಜೆ, ದಂಡ 4500 ರೂ ಹಾಗೂ ದೂರುದಾರರಿಗೆ ತಲಾ ಹತ್ತು ಸಾವಿರ ಪರಿಹಾರ ನೀಡುವಂತೆ ತೀರ್ು ನೀಡಿ ಆದೇಶಿಸಿತ್ತು. ಇದರ ವಿರುದ್ಧ ಅಪಾದಿತರು ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಕೆಳ ನ್ಯಾಯಾಲಯ ದ ತೀರ್ುನ್ನು ಭಾಗಶಃ ಎತ್ತಿ ಹಿಡಿದಿದೆ. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ.ಮಳಗೀಕರ್ ವಾದಿಸಿದ್ದರು....
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 