ದೇವರಹಿಪ್ಪರಗಿಯಲ್ಲಿ ಬಾರ್, ಲಾಡ್ಜ್‌ ಸ್ಥಳಾಂತರಕ್ಕೆ ಒಪ್ಪಿಗೆ

ದೇವರಹಿಪ್ಪರಗಿಯಲ್ಲಿ ಬಾರ್, ಲಾಡ್ಜ್‌ ಸ್ಥಳಾಂತರಕ್ಕೆ ಒಪ್ಪಿಗೆ  Approval granted for relocation of bar and lodge in Devarahipparagi

ಲೋಕದರ್ಶನ ವರದಿ 

ದೇವರಹಿಪ್ಪರಗಿ 05: ಪಟ್ಟಣದ ಐತಿಹಾಸಿಕ ಮಲ್ಲಯ್ಯನ ದೇವಸ್ಥಾನದ ಸಮೀಪದಲ್ಲಿರುವ ಬಾರ್ ಹಾಗೂ ಲಾಡ್ಜ್‌ ಸ್ಥಳಾಂತರಿಸುವ ಕುರಿತು ಚರ್ಚಿಸಲು ಪಟ್ಟಣ ಪಂಚಾಯಿತಿಯಲ್ಲಿ ಸರ್ವ ಸದಸ್ಯರ ತುರ್ತು ಸಭೆ ನಡೆಯಿತು.  ಪಟ್ಟಣದ ಪ.ಪಂ ಸಭಾಭವನದಲ್ಲಿ ಅಧ್ಯಕ್ಷರ ಅನುಮತಿ ಮೇರೆಗೆ ಶನಿವಾರ ಮಧ್ಯಾಹ್ನ ತುರ್ತು ಸಭೆ ನಡೆಯಿತು.  ದೇವಸ್ಥಾನದ ಸುತ್ತಮುತ್ತಲಿನ ಧಾರ್ಮಿಕ ವಾತಾವರಣ, ಸಾರ್ವಜನಿಕರ ಭಾವನೆ ಹಾಗೂ ಸ್ಥಳೀಯರ ಹಿತದೃಷ್ಟಿಯಿಂದ ಬಾರ್ ಮತ್ತು ಲಾಡ್ಜ್‌ಗಳ ಸ್ಥಳಾಂತರದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸದಸ್ಯರಾದ ಕಾಸಪ್ಪ ಜಮಾದಾರ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ಸದಸ್ಯರು ಸ್ಥಳಾಂತರಕ್ಕೆ ಒಮ್ಮತದಿಂದ ಕೈ ಎತ್ತುವ ಮೂಲಕ ಅಂಗೀಕರಿಸಲಾಯಿತು. 

ಇದೇ ಸಂದರ್ಭದಲ್ಲಿ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷರಾದ ರಮೇಶ ಮಸಿಬಿನಾಳ,  ಪ.ಪಂ ಮುಖ್ಯಾಧಿಕಾರಿ ಅಪ್ರೋಜ ಅಹ್ಮದ ಪಟೇಲ, ಸದಸ್ಯರುಗಳಾದ ಕಾಸುಗೌಡ ಜಲಕತ್ತಿ,  ಬಸೀರ ಅಹ್ಮದ್ ಬೇಪಾರಿ,  ಕಾಸಪ್ಪ ಜಮಾದಾರ, ಉಮೇಶ ರೂಗಿ,  ಕಾಸಪ್ಪ ಭಜೆಂತ್ರಿ,  ಶಾಂತಯ್ಯ ಜಡಿಮಠ,  ಡಾ.ಗುರುರಾಜ ಗಡೇದ, ಮಂಗಳೇಶ್ವರ ಕಡ್ಲೆವಾಡ, ಸಿಂಧೂರ ಡಾಲೇರ, ರತ್ನವ್ವ ದೇವೂರ, ಸುಮಂಗಲಾ ಸೇಬೆನವರ, ಶೋಭಾ ಮಲ್ಹಾರಿ, ದಾನಾಬಾಯಿ ಚವ್ಹಾಣ, ನಾಮ ನಿರ್ದೇಶಿತ ಸದಸ್ಯರುಗಳಾದ ರಾಜು ಮೇಟಗಾರ, ಸುನೀಲ ಕನಮಡಿ, ಹುಸೇನ ಕೊಕಟನೂರ, ಕಿರಿಯ ಅಭಿಯಂತರರಾದ ಗುರುರಾಜ ಬಿರಾದಾರ, ಸಿಬ್ಬಂದಿಗಳಾದ ಮುತ್ತುರಾಜ ಹಿರೇಮಠ, ಸೋಮು ಭೋವಿ, ಸತ್ಯಪ್ಪ ಪೂಜಾರಿ ಸೇರಿದಂತೆ ಪ.ಪಂ ಸಿಬ್ಬಂದಿ ವರ್ಗ ಹಾಗೂ ಕಾರ್ಮಿಕರು ಇದ್ದರು.