ಶೋಭಾ ರಮೇಶ ದೇಸಳ್ಳಿ ನೇಮಕ

ಶಿರಹಟ್ಟಿ 10: ತಾಲೂಕಿನ ಬೆಳ್ಳಟ್ಟಿ ಗ್ರಾಮದ ಶೋಭಾ ರಮೇಶ ದೇಸಳ್ಳಿ ಇವರನ್ನು ಶಿರಹಟ್ಟಿ ತಾಲೂಕಾ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಹಾಗೂ ಎಲ್ಲ ನೀತಿ ನಿಯಮಗಳನ್ನು ಪಾಲಿಸಬೇಕು ಎಂದು ಗದಗ ಜಿಲ್ಲಾ ಮಹಿಳಾ ಕಾಂಗ್ರೇಸ್ ಸಮಿತಿ ಅಧ್ಯಕ್ಷೆ ನೀಲಮ್ಮ ಸಿ ಬೋಳನವರ ಆದೇಶ ಹೊರಡಿಸಿದ್ದಾರೆ.