ಕೆರೆ ಸಂರಕ್ಷಣೆಗೆ ಒತ್ತಾಯಿಸಿ ಮನವಿ
Appeal demanding lake conservation
ತಾಳಿಕೋಟೆ 20: ಪಟ್ಟಣದ ಸರ್ವೆ ನಂಬರ್ 204ರಲ್ಲಿರುವ 11 ಎಕರೆ 03 ಗುಂಟೆ ಮುಪತ್ ಗಾಯರುಣ ಕೆರೆಯನ್ನು ಸಂರಕ್ಷಣೆ ಮಾಡಿ, ಅದರ ಅಭಿವೃದ್ಧಿಯನ್ನು ಮಾಡುವಂತೆ ಒತ್ತಾಯಿಸಿ ಕೆರೆಯ ಅಭಿವೃದ್ಧಿ ಸಾಮಾಜಿಕ ಹೋರಾಟಗಾರರಾದ ಸಿದ್ದಾರ್ಥ ಕಟ್ಟಿಮನಿ, ನಾಗಪ್ಪ ದಂಡಿನವರ, ಮಡಿವಾಳಪ್ಪ ಲಾಳಸಂಗಿ ಹಿರೂರ ಅವರು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕೆರೆಯ ಹೊರಗಿನ ಸರಹದ್ದಿನಿಂದ 30 ಮೀಟರ್ ಒಳಗೆ ಅಕ್ರಮ ಮತ್ತು ಅನಧಿಕೃತವಾಗಿ ನಿರ್ಮಾಣವಾಗಿರುವ ಮನೆಗಳು, ವಾಣಿಜ್ಯ ಸಂಕೀರ್ಣಗಳನ್ನು ತೆರವುಗೊಳಿಸಿ ಪರಿಸರ ದೃಷ್ಟಿಯಿಂದ ಕೆರೆಯನ್ನು ಉಳಿಸಿಕೊಡುವಂತೆ ಅವರು ಮನವಿಯಲ್ಲಿ ಕೋರಿದ್ದಾರೆ. ಪುರಸಭೆ ಹಾಗೂ ಜಿಲ್ಲಾಡಳಿತ ಸೇರಿ ಕೆರೆಯ ಅಭಿವೃದ್ಧಿ ಹಾಗೂ ಹೂಳು ತೆಗೆಯುವ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು.
ಬ್ರಿಟೀಷರ ಕಾಲದಿಂದಲೂ ಈ ಕೆರೆಯು ಸಂಪೂರ್ಣವಾಗಿ ನೀರಿನಿಂದ ತುಂಬಿತ್ತು. ನಮ್ಮ ಪೂರ್ವಿಕರು ಜನ-ಜಾನುವಾರುಗಳಿಗಾಗಿ ಕೆರೆ, ಭಾವಿಗಳನ್ನು ತೋಡಿ ಜಲ ಸಂರಕ್ಷಣೆ ಮಾಡುತ್ತಿದ್ದರು. ಇದರಿಂದ ಮಳೆ ನೀರು ಸಂಗ್ರಹವಾಗಿ ಅಂತರಜಲ ಹೆಚ್ಚುತ್ತದೆ. ದನಕರು, ಪಕ್ಷಿಗಳಿಗೆ ಕುಡಿಯುವ ನೀರಿನ ಸೌಕರ್ಯವಾಗುತ್ತದೆ ಆದ್ದರಿಂದ ಕೆರೆಯ ಸುತ್ತ ಬೇಲಿಯನ್ನು ನಿರ್ಮಿಸಬೇಕು, ಗಿಡಮರ ಉದ್ಯಾನ ನಿರ್ಮಿಸಬೇಕು. ಸಾರ್ವಜನಿಕ ಬಳಕೆಗೆ ಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವಂತೆ ಅವರು ಮನವಿ ಮಾಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 