ವಿಜಯಪುರ ಜಿಲ್ಲೆಯ 16367.83ಕೋಟಿ ರೂಪಾಯಿಗಳ ವಾರ್ಷಿಕ ಸಾಲ ಯೋಜನೆ ಕೃಷಿ ಮತ್ತು ಉದ್ಯಮಿ ವಲಯಕ್ಕೆ ಹೆಚ್ಚಿನ ಒತ್ತು
Annual loan scheme of Rs 16367.83 crore in Vijayapura district with greater emphasis on agriculture
ಲೋಕದರ್ಶನ ವರದಿ
ವಿಜಯಪುರ 29 : ಜಿಲ್ಲೆಯ ಆರ್ಥಿಕ ಪ್ರಗತಿಗೆ ಪೂರಕವಾಗಿರುವ 2026-2027ನೇ ಹಣಕಾಸು ವರ್ಷದ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಬುಧವಾರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು. ಜಿಲ್ಲೆಯ ಅಗ್ರಣೀಯ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಈ ಸಾಲಿನ ವಾರ್ಷಿಕ ಸಾಲ ಯೋಜನೆ ಕೈಪಿಡಿ ಬಿಡುಗಡೆಗೊಳಿಸಿದರು. ಪ್ರಸಕ್ತ ವರ್ಷದ ಸಾಲ ಯೋಜನೆಯ 16367.83 ಕೋಟಿ ರೂ. ವಿತರಣೆಯ ಗುರಿಯನ್ನು ಹೊಂದಿದೆ .
ಇದು ಕಳೆದ ವರ್ಷದ ವಾರ್ಷಿಕ ಸಾಲ ಯೋಜನೆ ಯ ಶೇಕಡಾ 10.90 ಪಟ್ಟು ಹೆಚ್ಚಿನ ಗುರಿಯಾಗಿದೆ. ಆದ್ಯತಾ ವಲಯಕ್ಕೆ : ಒಟ್ಟು ಯೋಜನೆ ಶೇ:69.59 ರಷ್ಟು ಅಂದರೆ ರೂ11389.96 ಕೋಟಿ ಮೀಸಲಿಡಲಾಗಿದೆ. ಕೃಷಿ ವಲಯಕ್ಕೆ : ಒಟ್ಟು ಯೋಜನೆ ಶೇ: 51.46 ರಷ್ಟು ಅಂದರೆ 8422.71 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಉದ್ಯಮಿ ವಲಯಕ್ಕೆ: ಒಟ್ಟು ಯೋಜನೆ ಯೋಜನೆಯ ಶೇ:16.90 ಅಂದರೆ ರೂ2765.48 ಕೋಟಿ ಮೀಸಲಿಡಲಾಗಿದೆ. ಶಿಕ್ಷಣ ಸಾಲ ರೂ 53.43 ಕೋಟಿ, ವಸತಿ ಸಾಲ ರೂ 94.07 ಕೋಟಿ ಮತ್ತು ಇತರೆ ಸಾಲ ರೂ 28.84 ಕೋಟಿ ಸಾಲದ ಗುರಿ ಹೊಂದಲಾಗಿದೆ.
ಈ ಸಮಯದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಬ್ಯಾಂಕುಗಳು ಸಕಾಲದಲ್ಲಿ ಮೇಲಾಧಾರ ರಹಿತ ಸಣ್ಣ ಸಾಲುಗಳನ್ನು ನಿರುದ್ಯೋಗಿಗಳಿಗೆ ಕೊಟ್ಟರೆ, ನಿರುದ್ಯೋಗ ನಿರ್ಮೂಲನೆಗೆ ಸಹಕಾರಿ ಯಾಗುವದು ಎಂದು ತಿಳಿಸಿದರು. ಕಳೆದ ಸಾಲಿನ ವಾರ್ಷಿಕ ಯೋಜನೆಯ ಪ್ರಗತಿಯ ಅಂಕಿ ಅಂಶಗಳನ್ನು ಅಗ್ರಣಿ ಬ್ಯಾಂಕ್ ಮುಖ್ಯ ಪ್ರಬಂಧಕರಾದ ಕೆ ಸಿದ್ದಯ್ಯ ಅವರು ವಿವರವಾಗಿ ತಿಳಿಸಿದರು. ಸಾಲ ಮತ್ತು ಠೇವಣಿಯ ಅನುಪಾತ ಶೇಕಡಾ 106 ಆಗಿದ್ದು, ಅತ್ಯುತ್ತಮ ಗುರಿ ಸಾಧನೆ ಎಂದು ಅವರು ತಿಳಿಸಿದರು.
ಈ ವೇಳೆ ನಾಬಾರ್ಡ್ ಡಿಡಿ ಎಂ ಶ ವಿಕಾಸ ರಾಠೋಡ, ಕೆನರಾ ಬ್ಯಾಂಕ್ ವಿಭಾಗಿಯ ಪ್ರಬಂಧಕ ದೀಪಕ್ ಕುಮಾರ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಅಶೋಕ ಸೋಂಗರಿ ಮುಖ್ಯ ವ್ಯವಸ್ಥಾಪಕ ವಿ ಬಿ ಕುಲಕರ್ಣಿ, ಎಸ್ ಬಿ ಐ ಮುಖ್ಯವಸ್ಥಾಪಕ ಹರೀಶ್ ನಾಯಕ ವಿನೋದ್ ಮಾದರ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಬಂಧಕ ಅನಿಲ ಮಹಾಠಾಳಿ, ಡಿಸಿಸಿ ಬ್ಯಾಂಕ್ ಪ್ರಬಂಧಕ ರಮೇಶ್ ಹಿಟ್ಟನಹಳ್ಳಿ, ಐಸಿಐಸಿಐ ಬ್ಯಾಂಕ್ ಪ್ರಬಂಧಕ ಶಿವಪುತ್ರ ನಿಂಬಾಳ, ಸೂರ್ಯೋದಯ ಎ???ಫ ಬಿ ಪ್ರಬಂಧಕ ಪ್ರದೀಪ್, ಕೋಟಕ್ ಮಹೀಂದ್ರಾ ಬ್ಯಾಂಕ್ ಪ್ರಬಂಧಕ ರವೀಂದ್ರ ಅಂಗಡಿ ಸೇರಿದಂತೆ ವಿವಿಧ ಬ್ಯಾಂಕುಗಳ ಜಿಲ್ಲಾ ಸಂಯೋಜಕರು ಮತ್ತು ಲೈನ್ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 