ವಾರ್ಷಿಕ ಪತ್ರಕರ್ತ ಪ್ರಶಸ್ತಿ ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮ
ಲೋಕದರ್ಶನ ವರದಿ
ಧಾರವಾಡ 11 : ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಇದೇ ದಿನಾಂಕ: 12-7-2026 ರಂದುರವಿವಾರ ಸಂಜೆ 6 ಗಂಟೆಗೆ ಮನೋಜ ಪಾಟೀಲ ದತ್ತಿ ಕಾರ್ಯಕ್ರಮದ ಅಂಗವಾಗಿ ‘ವಾರ್ಷಿಕ ಪತ್ರಕರ್ತ ಪ್ರಶಸ್ತಿ’ ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಧಾರವಾಡದ ಸಂಯುಕ್ತಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರಡಾ.ವಿಶ್ವನಾಥ ಕೋಟಿಯವರಿಗೆ ಮನೋಜ ಪಾಟೀಲ ದತ್ತಿ‘ವಾರ್ಷಿಕ ಪತ್ರಕರ್ತ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇವರಿಗೆ ಪ್ರಶಸ್ತಿ ಫಲಕ, ಶಾಲು, ಪುಷ್ಪಹಾರ ಜೊತೆಗೆ ಐದು ಸಹಸ್ರರೂಪಾಯಿ ನಗದು ನೀಡಲಾಗುವುದು. ಸುವರ್ಣ ನ್ಯೂಜ್ಟಿವಿಯ ಸಂಪಾದಕಅಜಿತ್ ಹನುಮಕ್ಕನವರ ಅವರು ಮುಖ್ಯಉಪನ್ಯಾಸಕರಾಗಿ ಆಗಮಿಸಲಿದ್ದು ‘ಇಂದಿನ ಪತ್ರಕರ್ತರು ಹಾಗೂ ಪತ್ರಿಕೋದ್ಯಮ’ದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಧಾರವಾಡಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷ ಬಂಡು ಕುಲಕರ್ಣಿ ಹಾಗೂ ಸಂಯುಕ್ತಕರ್ನಾಟಕ ಪತ್ರಿಕೆಯಕಾರ್ಯನಿರ್ವಾಹಕ ಸಂಪಾದಕ ಮೋಹನ ಹೆಗಡೆ ಆಗಮಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಕ.ವಿ.ವ. ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮನೋಜ ಪಾಟೀಲ ಅವರು ಉಪಸ್ಥಿತರಿರುವರು. ಕ.ವಿ.ವ.ಸಂಘದ ಆಶ್ರಯದಲ್ಲಿ ಪತ್ರಕರ್ತರಿಗೆ ಮೊದಲ ಬಾರಿ ‘ವಾರ್ಷಿಕ ಪತ್ರಕರ್ತ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತಿದೆ. ಸಾಹಿತಿಗಳು, ಚಿಂತಕರು, ಕಲಾವಿದರು, ವಿದ್ಯಾರ್ಥಿಗಳು, ತಾಯಂದಿರು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.