ಸಪ್ತಗಿರಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಜನ ಸಭೆ
Annual General Meeting of Saptagiri Credit Cooperative Society
ಲೋಕದರ್ಶನ ವರದಿ
ಕಂಪ್ಲಿ, ಸೆ. 06: ಪಟ್ಟಣದ ಐತಿಹಾಸಿಕ ಸೋಮಪ್ಪ ದೇವಸ್ಥಾನದ ಬಳಿಯ ಗದ್ದೆ ಚೌಡೇಶ್ವರಿ ದೇವಿ ದೇವಸ್ಥಾನ ಆವರಣದಲ್ಲಿ ಸಪ್ತಗಿರಿ ಪತ್ತಿನ ಸಹಕಾರ ಸಂಘದ 13ನೇ ವಾರ್ಷಿಕ ಮಹಾಜನ ಸಭೆ ಭಾನುವಾರ ನಡೆಯಿತು.
ಸಂಘದ ಅಧ್ಯಕ್ಷ ಡಾ. ವೆಂಕಟೇಶ್ ಸಿ. ಭರಮಕ್ಕನವರ ವಾರ್ಷಿಕ ಮಹಾಜನ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಂಘವು ಪ್ರಸ್ತುತ 956 ಸದಸ್ಯರನ್ನು ಹೊಂದಿದ್ದು, ಸುಮಾರು 27.24 ಸಾವಿರ ರೂ.ಗಳ ಷೇರು ಬಂಡವಾಳ ಹೊಂದಿದೆ ಎಂದು ತಿಳಿಸಿದರು.
ಸಂಘವು ಸುಮಾರು 2 ಕೋಟಿ 97 ಲಕ್ಷ 58 ಸಾವಿರ ರೂ.ಗಳ ಠೇವಣಿ ಸಂಗ್ರಹಿಸಿದ್ದು, ವಾಹನ ಸಾಲ ಹಾಗೂ ಅಡಮಾನ ಸಾಲ ಸೇರಿದಂತೆ ಒಟ್ಟು 3 ಕೋಟಿ 29 ಲಕ್ಷ 53 ಸಾವಿರ ರೂ.ಗಳ ಸಾಲ ವಿತರಿಸಿದೆ. 2025-26ನೇ ಸಾಲಿನಲ್ಲಿ ಸಂಘವು ಸುಮಾರು 14 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅವರು ಹೇಳಿದರು.
ಸಹಕಾರ ಸಂಘದ ಮತ್ತಷ್ಟು ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಸದಸ್ಯರ ಹಿತಾಸಕ್ತಿ ಕಾಪಾಡುವುದರೊಂದಿಗೆ ಸಂಘವನ್ನು ಇನ್ನಷ್ಟು ಬಲಪಡಿಸಲು ಆಡಳಿತ ಮಂಡಳಿ ಹಾಗೂ ಸದಸ್ಯರ ಸಹಕಾರ ಅಗತ್ಯ ಎಂದು ಅಧ್ಯಕ್ಷರು ತಿಳಿಸಿದರು. ನಂತರ ಮುಖ್ಯ ಕಾರ್ಯನಿರ್ವಾಹಕ ಎಸ್.ಎಂ. ನಾಗರಾಜ್ ಅವರು ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಯು. ದೊಡ್ದಬಸಪ್ಪ, ನಿರ್ದೇಶಕರಾದ ವಿ. ಗೋವಿಂದಪ್ಪ, ಎನ್.ಬಿ. ಮಂಜುನಾಥ್, ಎನ್. ರಾಮಾಂಜಿನೇಯಲು, ಜಿ. ಫಕೀರ್ಪ, ಕೆ. ಪಾರ್ವತಿ ಕೋಟಿ, ಬಿ. ನಾರಾಯಣಪ್ಪ, ಜೆ. ವೆಂಕಟೇಶ್ ಶ್ರೇಷ್ಠಿ, ಓ.ಪಿ. ದಾದಾಖಲಂದರ್, ಎನ್. ವಿರೇಶ್, ಆನಂದ್ ಎಚ್. ಹುಲ್ಲೂರು, ಜೆ. ಲಕ್ಷ್ಮೀದೇವಿ, ವಿ. ಅನಿಲ್ ಕುಮಾರ್, ಆಕಾಶ್ ಭರಮಕ್ಕನವರ ಸೇರಿದಂತೆ ಸಂಘದ ಸಿಬ್ಬಂದಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳಾದ ಕನಕಪ್ಪ ಎನ್., ದಸ್ತಗಿರಿ, ಉಮಾ, ಹುಲಿಗೆಮ್ಮ, ಕೆ. ರಾಘವೇಂದ್ರ, ಬಸವರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 