ಅನ್ಮೋಲ್ ನೌಕಾಪಡೆಯ ಮಹಿಳಾ ಕ್ಯಾಪ್ಟನ್ ಹುದ್ದೆಗೆ ಆಯ್ಕೆ
ಮುಧೋಳ : ಸಮೀಪದ ಯಾದವಾಡ ಗ್ರಾಮದ ಅನ್ಮೋಲ್.ಎಸ್.ಇಟ್ನಾಳ ಅವರು ಭಾರತೀಯ ನೌಕಾದಳದ ಕ್ಯಾಪ್ಟನ್ ಎಂದು ಆಯ್ಕೆಯಾಗಿದ್ದಾರೆ. ಅನ್ಮೋಲ್ ಅವರು ಪ್ರತಿಜ್ಞಾ ವಿಧಿ ಸಮಾರಂಭ ಈಚೆಗೆ ಕೇರಳದ ನೌಕಾದಳದ ಕೇಂದ್ರ ಕಚೇರಿ ವಿಜಿಮಲಾದಲ್ಲಿ ನೆರವೇರಿತು.ಅನ್ಮೋಲ್ ಅವರ ತಂದೆ ಸುಧೀಂದ್ರ ಹನಮಂತರಾವ ಇಟ್ನಾಳ ಭಾರತೀಯ ಸೈನಿಕ ದಳದಲ್ಲಿ ಹಿರಿಯ ಬ್ರಿಗೇಡಿಯರ್ ಆಗಿ ಹೊಸದಿಲ್ಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅನ್ಮೋಲ್ ಅವರ ಅಣ್ಣ ಶ್ರೇಯಸ್ ಭಾರತೀಯ ಸೈನಿಕ ದಳದಲ್ಲಿ ಕ್ಯಾಪ್ಟನ್ ಆಗಿದ್ದಾರೆ. ತಂದೆ ಹಾಗೂ ಸಹೋದರನ ಸೇವೆಯಿಂದ ಪ್ರಭಾವಿತಳಾಗಿ ದೊಡ್ಡ ಸಂಬಳದ ಐಟಿ ಉದ್ಯೋಗ ಬಿಟ್ಟು ದೇಶಸೇವೆಗಾಗಿ ಅವರು ನೌಕಾದಳ ಸೇರಿರುವುದು ವಿಶೇಷವಾಗಿದೆ. ಬಿ.ಇ.ಕಂಪ್ಯೂಟರ್ ಪದವೀಧರರಾದ ಅವರು ವಿದ್ಯಾಥರ್ಿಯಾಗಿದ್ದಾಗಲೇ ಭಾರತೀಯ ಸೈನಿಕ ಸೇವೆ ಸೇರುವ ಆಸಕ್ತಿ ಹೊಂದಿದ್ದರು.ವಿಜಿಮಲಾದಲ್ಲಿ ನಡೆದ ಅನ್ಮೋಲ್ ಅವರ ಪಾಸ್ಸಿಂಗ್ ಔಟ್ ಪರೇಡ್ನಲ್ಲಿ ತಾಯಿ ಅಂಜಲಿ, ದೊಡ್ಡಪ್ಪ ರಮೇಶ ಮತ್ತು ಅವರ ಕುಟುಂಬದ ಸದಸ್ಯರು ಹಾಗೂ ರೈತ ಧುರೀಣ ಈಶ್ವರ ಕತ್ತಿ ಭಾಗವಹಿಸಿದ್ದರು
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 