ಮಹಿಳಾ ಕೇಂದ್ರಿತ ಕವನಗಳಿಗೆ ಆಹ್ವಾನ
An invitation to women-centric poems
ವಿಜಯಪುರ 22: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 6 ರಿಂದ ಮಾರ್ಚ್ 8ರವರೆಗೆ “ಮಹಿಳಾ ಸಾಂಸ್ಕೃತಿಕ ಹಬ್ಬ-2025” ಹಮ್ಮಿಕೊಳ್ಳಲಾಗಿದೆ.
“ಮಹಿಳಾ ಸಾಂಸ್ಕೃತಿಕ ಹಬ್ಬ-2025”ದ ಅಂಗವಾಗಿ ಕವಿ-ಕವಿಯತ್ರಿಯರಿಂದ ಮಹಿಳಾ ಕೇಂದ್ರಿತ ಕವನಗಳನ್ನು ಆಹ್ವಾನಿಸಲಾಗಿದೆ. ಬಂದ ಕವನಗಳಲ್ಲಿ ಅತ್ತ್ಯುತ್ತಮ 3 ಕವನಗಳನ್ನು ಆಯ್ಕೆ ಮಾಡಿ, ರಚನೆ ಮಾಡಿದ ಕವಿಯತ್ರಿ/ಕವಿಗಳನ್ನು ಮಾರ್ಚ್ 8, 2025 ರಂದು ಓದಲು ಅವಕಾಶ ನೀಡಿ, ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು. ಆಸಕ್ತರು ದಿ. 25-02-2025ರೊಳಗಾಗಿ ತಮ್ಮ ಕವನಗಳನ್ನು ಪ್ರೊ. ಲಕ್ಷ್ಮಿದೇವಿ ವೈ., ನಿರ್ದೇಶಕರು, ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಜ್ಞಾನಶಕ್ತಿ ಆವರಣ, ತೊರವಿ, ಕ.ರಾ.ಅ.ಮ.ವಿವಿ, ವಿಜಯಪುರ-586108, ಮೊ.ಸಂ.9902234469 ಇವರಿಗೆ ತಲುಪುವಂತೆ ಹಾಗೂ ಸಾಫ್ಟ್ ಪ್ರತಿಯನ್ನು ಜಡಿಜಛಿಣಠಥಿಛಿಚಿತಿಣತಅರಟಚಿಟ.ಛಿಠ ಗೆ ಕಳುಹಿಸಬಹುದಾಗಿದೆ. ವಿಶ್ವವಿದ್ಯಾನಿಲಯದಿಂದ ಯಾವುದೇ ರೀತಿಯ ಪ್ರಯಾಣ ಭತ್ಯೆ, ದಿನ ಭತ್ಯೆ ಮತ್ತು ಸಂಭಾವನೆಯನ್ನು ನೀಡಲಾಗುವುದಿಲ್ಲ ಎಂದು ವಿವಿ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೋ.ಸಂ. 9845442828, 9481706330, 7975560095, 8861677052.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 