ಕಾರವಾರ

ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಕಾರವಾರ  21:  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಅಂಬಿಗರ ಚೌಡಯ್ಯ ಜಯಂತಿಯನ್ನು ಕಾರವಾರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ಆಚರಿಸಲಾಯಿತು.   ಕುಮಟಾದ ಹೊನ್ನಾಳಿ ಶಾಲೆಯ ಮುಖ್ಯೋದ್ಯಾಪಕ ಎಸ್‌. ಕೆ ಅಂಬಿಗ ಅವರು ನಿಜಶರಣ ಅಂಬಿಗರ ಚೌಡಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿ , 12 ಶತಮಾನದ ಉಳಿದ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದಾಗಿದ್ದು, ನೇರ ಮತ್ತು ನಿಷ್ಠುರವಾದಿಗಳಾಗಿದ್ದರು.

ಮೇಲ್ವರ್ಗದವರಿಂದ ಶೋಷಣೆಗೆ ಒಳಗಾದ ಕೆಳವರ್ಗದವರ ಪರ ನಿಂತವರು. ಮುಚ್ಚುಮರೆಯಿಲ್ಲದೆ ಬಿಚ್ಚು ಮನಸ್ಸಿನ; ಕಂಡದ್ದನ್ನು ಕಂಡಂತೆ ನೇರ ನುಡಿಯ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಧ್ವನಿ ಎತ್ತಿದ ನಿಜ ಶರಣ ಅಂಬಿಗರ ಚೌಡಯ್ಯ , ಗುರಿ ಮುಟ್ಟುವ ತನ್ನಕ ಪ್ರಯತ್ನ ಬಿಡಬೇಡಿ ಎಂದು ವಚನಗಳ ಮೂಲಕ ಸಾರಿದ್ದಾರೆ. ಮೇಲು ಕೀಲು ಮೌಢ್ಯ, ಭೇಧ ಭಾವಗಳನ್ನು ಹೋಗಲಾಡಿಸಲು ಹೋರಾಡಿದ್ದು, ಇವರನ್ನು ಒಂದು ಸಮುದಾಯಕ್ಕೆ ಸೀಮಿತಗೋಳಿಸದೇ, ಪ್ರತಿಯೊಬ್ಬರೂ ಅವರ ನಡೆ ನುಡಿಗಳನ್ನು ಪಾಲಿಸಬೇಕು ಎಂದರು.   

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಚುನಾವಣೆ ವಿಭಾಗದ ತಹಶೀಲ್ದಾರ ಪ್ರಮೋದ ನಾಯ್ಕ, ಸಮಾಜದ ಹಿರಿಯರಾದ ಬಾಬು ಅಂಬಿಗ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಸಮಾಜದ ಮುಖಂಡರು ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ವೆಂ ನಾಯ್ಕ ಸ್ವಾಗತಿಸಿದರು. ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಾದ ಸ್ಮಿತಾ ಕೆ. ಗೌಡ ನಿರೂಪಿಸಿದರು. ಶೃತಿ ವಂದಿಸಿದರು.  



ಸುದ್ದಿ ಓದಿ