ಬೆಳಗಾವಿ

ಶಿಕ್ಷಣ, ಸಂಘಟನೆ ಮತ್ತು ಒಗ್ಗಟ್ಟಿನಿಂದ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ

ಶಿಕ್ಷಣ, ಸಂಘಟನೆ ಮತ್ತು ಒಗ್ಗಟ್ಟಿನಿಂದ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ

ಸವದತ್ತಿ  03: ನಗರದ ಧಾರವಾಡ ಬೈಪಾಸ್ ರಸ್ತೆ ಮಾರ್ಗದಲ್ಲಿರುವ ನೂತನವಾಗಿ ಆಯೋಜಿಸಲಾಗಿದ್ದ ಕೊರವರ ಸಮಾಜದ ಸಂಘದ ಉದ್ಘಾಟನಾ ಸಮಾರಂಭವನ್ನು ಸ್ಥಳೀಯ ಶಾಸಕ ವಿಶ್ವಾಸ ವೈದ್ಯ ಅವರು ಉದ್ಘಾಟಿಸಿ ಮಾತನಾಡಿದರು.ಸಮಾಜದ ಸಂಘಟನೆಯು ಯಾವುದೇ ಸಮುದಾಯದ ಪ್ರಗತಿಗೆ ಬುನಾದಿಯಾಗಿದೆ. ಪ್ರತಿಯೊಬ್ಬರೂ ಶಿಕ್ಷಣ, ಸಂಘಟನೆ ಮತ್ತು ಹಕ್ಕುಗಳ ಹೋರಾಟದ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದ ಅವರು, ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಹಾಗೂ ಸಮಾಜದ ಬಡತನ ಮತ್ತು ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದರು.

ಅಲ್ಲದೆ, ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಕಡೆಯಿಂದ ಹಾಗೂ ಸರ್ಕಾರದ ವತಿಯಿಂದ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ಮತ್ತು ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಸಂಗನಬಸಯ್ಯ ಗದಗಿಮಠ, ಹೆಸ್ಕಾಂ ಅಧಿಕಾರಿ ವಿಶಾಪೂರಕರ, ಅಕ್ಬರಹುಸೇನ ಮಕಾನದಾರ, ಪ್ರಮುಖ ಮುಂಖಡರಾದ ಬಿ.ಎನ್‌. ಪ್ರಭುನವರ, ಬಸವರಾಜ ಅರಮನಿ, ಮೌಲಾಸಾಬ ತಬ್ಬಲಜೀ, ಅಮೀರ ಗೋರಿನಾಯ್ಕ್‌, ಪಕ್ರುಸಾಬ ದೊಡಮನಿ ಸೇರಿದಂತೆ ಸಮಾಜದ ಪ್ರಮುಖರು ಹಾಗೂ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ