ಶರಣರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಿ: ಅಗಸರ

ಸಿಂದಗಿ 10: ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಳೆಗಾಗಿ ಸಮಾನತೆಯನ್ನು ಬಯಸಿದ ಶಿವ ಶರಣರ  ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳು ಸತತ ಓದುವ ಮೂಲಕ ಅವರ  ತತ್ವ ಆದರ್ಶಗಳು  ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಆದರ್ಶ ವ್ಯಕ್ತಿಯಾಗಿ ಬಾಳಬೇಕು ಎಂದು  ಹಿರಿಯವೈದ್ಯ ಜಾನಪದ ಸಾಹಿತಿ ಡಾ. ರಾಮಲಿಂಗಪ್ಪ ಅಗಸರ  ಹೇಳಿದರು. 

ತಾಲೂಕಿನ ಬಂದಾಳ ಗ್ರಾಮದ ಹುಡೇದ ಲಕ್ಷ್ಮೀ ದೇವಿ ಜಾತ್ರಾ ನಿಮಿತ್ಯ ಹಮ್ಮಿಕೊಂಡ ಸಜ್ಜಲ ಗುಡ್ಡದ ಶರಣಮ್ಮನವರ ಪುರಾಣ ಪ್ರವಚನದಲ್ಲಿ ಅವರು ಮಾತನಾಡಿ, ತಾಲೂಕಿನ ಬಂದಾಳ ಗ್ರಾಮದ ಹುಡೇದ ಲಕ್ಷ್ಮೀ ದೇವಿ ಜಾತ್ರಾ ನಿಮಿತ್ಯ ಹಮ್ಮಿಕೊಂಡ ಸಜ್ಜಲ ಗುಡ್ಡದ ಶರಣಮ್ಮನವರ ಪುರಾಣ ಪ್ರವಚನದಲ್ಲಿ ಅವರು ಮಾತನಾಡಿ  ಸಜ್ಜಲಗುಡ್ಡದ ಶರಣಮ್ಮ ತಾಯಿಯವರು ಭಕ್ತರ ಬಾಳಿಗೆ ಜ್ಯೋತಿಯಾಗಿ, ಶಿವಯೋಗಿಗಳ ಅಂತರಂಗದ  ತಾಯಿಯಾಗಿದ್ದಾರೆ. ಅವರ ನಡೆ  ನುಡಿಗಳು   ಜೀವನದಲ್ಲಿ ರೂಡಿಸಿ ಕೊಂಡು  ಶರಣರ ಆಚಾರ ವಿಚಾರಗಳು  ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಜೀವನ ನಮ್ಮದಾಗುತ್ತದೆ ಎಂದರು. 

ಗದಗದ  ಶಲವಡಿ ಗ್ರಾಮದ ಪುರಾಣ ಪ್ರವಚನಕಾರರಾದ ವೀರಯ್ಯ ಶಾಸ್ತ್ರೀಗಳು  ಮಾತನಾಡಿ, ಶರಣರ ವಿಚಾರದಾರೆಗಳು ಹಾಗೂ ಅವರ ತತ್ವ ಆದರ್ಶಗಳು ಜೀವನದಲ್ಲಿ ರೂಡಿಸಿಕೊಂಡು ಉತ್ತಮ ಸನ್ಮಾರ್ಗದಲ್ಲಿ ನಡೆಯಬೇಕು. ಸಜ್ಜಲಗುಡ್ಡದ ಶರಣಮ್ಮ ತಾಯಿಯವರು ಭಕ್ತರ ಬಾಳಿಗೆ ಜ್ಯೋತಿಯಾಗಿ, ಶಿವಯೋಗಿಗಳ ಅಂತರಂಗದ  ತಾಯಿಯಾಗಿದ್ದಾರೆ. ಅವರ ನಡೆ  ನುಡಿಗಳು   ಜೀವನದಲ್ಲಿ ರೂಡಿಸಿ ಕೊಂಡು  ಶರಣರ ಆಚಾರ ವಿಚಾರಗಳು  ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಜೀವನ ನಮ್ಮದಾಗುತ್ತದೆ. ಕಾಯಕದಲ್ಲಿ ನಿರಂತರವಾಗಬೇಕು ದುಡಿಯುವ ಪದ್ದತಿ ಜೀವನದಲ್ಲಿ ಅಳವಡಿಸಿ ಕೊಂಡು .ಶರಣರ ಸಂತರ ಹಾಗೆ ಜೀವನ ನಡೆಸಬೇಕು. ದುಶ್ಚಟಗಳು ಬಿಟ್ಟು  ಕುಟುಂಬದಲ್ಲಿ ಸಾತ್ವೀಕ ಜೀವನ ನಡೆಸಬೇಕು .ಗುರುವಿನ ಮೇಲೆ ಅಪಾರ ಪ್ರೀತಿ ಇರಬೇಕು .ಗುರು ತೋರಿರುವ ಉತ್ತಮ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.  

ವೇದಿಕೆ ಮೇಲೆ ದೇವಾಲಯದ ಅರ್ಚಕ  ಕುಮಾರ ನಂದಯ್ಯ ಹಿರೇಮಠ ಸೇರಿದಂತೆ ಗ್ರಾಮದ ಸರ್ವ ಭಕ್ತರು ಉಪಸ್ಥಿತರಿದ್ದರು. ಅಂಬ್ರೇಶ ನಗನೂರ ಹಾಗೂ ಯಮನೂರ​‍್ಪ ಪೂಜಾರಿ ದೇವರಮನಿ ಸಂಗೀತ ಕಾರ್ಯಕ್ರಮ ನೆರವೇರಿಸಿದರು.