ಅಧಿಕಮಾಸ ಬಹಳ ಶ್ರೇಷ್ಠ ಮಾಸ: ಮಾತೋಶ್ರೀ ಮುದ್ದಮ್ಮ ತಾಯಿ
Adhikamasa is a very auspicious month: Matoshree Muddamma Mother
ಲೋಕದರ್ಶನ ವರದಿ
ಯರಗಟ್ಟಿ 08 : ಅಧಿಕ ಮಾಸ ಬಹಳ ಶ್ರೇಷ್ಠವಾದ ಮಾಸವಾಗಿದೆ. ದೇವರಿಗಾಗಿ ಮೀಸಲಿರುವ ಮಾಸವಾಗಿದೆ. ಈ ಮಾಸದಲ್ಲಿ ಪ್ರತಿಯೊಬ್ಬರು ದೇವರು, ಪೂಜೆ ಪುನಸ್ಕಾರದಂತಹ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರದ್ಧಾನಂದ ಆಶ್ರಮದ ಮಾತೋಶ್ರೀ ಮುದ್ದಮ್ಮತಾಯಿ ಹೇಳಿದರು. ಅವರು ಸಮೀಪದ ರೈನಾಪೂರ ಗ್ರಾಮದ ಶ್ರದ್ಧಾನಂದ ಆಶ್ರಮದಲ್ಲಿ ಅಧಿಕ ಮಾಸದ ನಿಮಿತ್ತ ಭಾನುವಾರ ನಡೆದ ಪುರಾಣ ಪ್ರವಚನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಪುರಾಣ ಪ್ರವಚನ ಕಾರ್ಯಕ್ರಮ ಆಲಿಸಬೇಕು. ಧಾರ್ಮಿಕ ಕಾರ್ಯಗಳಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು. ನಿತ್ಯ ದುಡಿಯುವ ಹಣದಲ್ಲಿ ಸ್ವಲ್ಪವಾದರೂ ಸಮಾಜ ಸೇವೆಗೆ ಮೀಸಲಿಡಬೇಕು ಎಂದರು.
ನಂತರ ಮಾನಾಡಿದ ಮಾತೋಶ್ರೀ ಪಾರ್ವತೆಮ್ಮತಾಯಿ ಅಧಿಕ ಮಾಸವನ್ನು "ಮಲಮಾಸ" ಅಥವಾ "ಪುರುಷೋತ್ತಮ ಮಾಸ" ಅಂತ ಕರೀತಾರೆ. ಇದು ಹಿಂದೂ ಚಾಂದ್ರಮಾನ ಪಂಚಾಂಗದಲ್ಲಿ ಸುಮಾರು 32 ತಿಂಗಳು 16 ದಿನಗಳಿಗೊಮ್ಮೆ ಬರುವ ಹೆಚ್ಚುವರಿ ತಿಂಗಳು. ಸೂರ್ಯಮಾನ ವರ್ಷ 365 ದಿನ, ಚಾಂದ್ರಮಾನ ವರ್ಷ 354 ದಿನ. ಈ 11 ದಿನಗಳ ವ್ಯತ್ಯಾಸವನ್ನು ಸರಿದೂಗಿಸಲು ಪ್ರತಿ 2.5 ರಿಂದ 3 ವರ್ಷಕ್ಕೊಮ್ಮೆ ಒಂದು ಚಾಂದ್ರಮಾಸ ಹೆಚ್ಚಿಗೆ ಸೇರಿಸುತ್ತಾರೆ. ಅದೇ ಅಧಿಕ ಮಾಸ. ಇದರಿಂದ ಹಬ್ಬಗಳು, ಋತುಗಳು ತಪ್ಪದೆ ಬರುತ್ತವೆ.
ಈ ಮಾಸಕ್ಕೆ ಯಾವ ದೇವತೆಯ ಅಧಿಪತ್ಯವೂ ಇಲ್ಲದ್ದರಿಂದ ಮಲಮಾಸ ಅನ್ನೋ ಹೆಸರು ಬಂತು. ಆಗ ಶ್ರೀಕೃಷ್ಣ ಈ ಮಾಸವನ್ನು ತನ್ನದೆಂದು ಸ್ವೀಕರಿಸಿ "ಪುರುಷೋತ್ತಮ ಮಾಸ" ಅಂತ ಕರೆದ. ಹಾಗಾಗಿ ಇದು ಪುಣ್ಯ ಮಾಸ ಆಯ್ತು. ಹಾಗೂ ಜಪ, ತಪ, ದಾನ, ಪೂಜೆಗೆ ಇತರ ಮಾಸಗಳಿಗಿಂತ ಹೆಚ್ಚು ಫಲ ಸಿಗುತ್ತೆ ಅನ್ನೋ ನಂಬಿಕೆ ಇದೆ. ವಿಶೇಷವಾಗಿ ವಿಷ್ಣು, ಶ್ರೀಕೃಷ್ಣನ ಆರಾಧನೆಗೆ ಶ್ರೇಷ್ಠ. ಉಪವಾಸ, ಭಾಗವತ ಪಾರಾಯಣ, ದೀಪದಾನ, ಅನ್ನದಾನ ಮಾಡಿದ್ರೆ ಸಾವಿರ ಪಟ್ಟು ಪುಣ್ಯ ಅಂತ ಹೇಳಿದರು.
ಈ ವೇಳೆ ಬಸಪ್ಪ ಸಿದ್ನಾಳ, ಸೋಮು ರೈನಾಪೂರ, ಗೋಪಾಲ ಕಡೇಮನಿ, ಪಾಂಡಪ್ಪ ಸಿದ್ನಾಳ, ಯಂಕಣ್ಣಾ ಹುರಕನ್ನವರ, ಗೋವಿಂದ ಕಡೇಮನಿ, ಫಕ್ಕೀರ್ಪ ಖಾಣ್ಣನವರ, ಚಂದ್ರ್ಪ ತೋರಣಗಟ್ಟಿ, ಈರ್ಪ ತೋರಣಗಟ್ಟಿ, ಮಲ್ಲಪ್ಪ ಹೂಗಾರ, ವೆಂಕ್ಕಪ್ಪಮಹಾರಾಜ ಹುರಕನ್ನವರ, ವಿನೋದ ಚುಳಕಿ, ವಿಕಾಸ ಕಳ್ಳಿಗುದ್ದಿ, ಉಮೇಶ ಕಳ್ಳಿಗುದ್ದಿ, ಶ್ರೀನಿವಾಸ ಸಿದ್ನಾಳ, ರತ್ನಾ ಸಿದ್ನಾಳ, ಮಂಜುಳಾ ಕುಂಬಾರಗೇರಿಮಠ, ಶೀಲ್ಪಾ ವಾಲಿ, ದೀಪಾ ಗೊರವನಕೋಳ, ಗೀತಾ ಹಟ್ಟಿ, ಪ್ರೇಮಾ ಜೂಗನ್ನವರ, ಲಕ್ಷ್ಮವ್ವ ಬಾಗೋಡಿ ಸೇರಿದಂತ ಶ್ರದ್ಧಾನಂದ ಆಶ್ರಮದ ಭಕ್ತರು ಹಾಗೂ ಗ್ರಾಮಸ್ಥರು ಇದ್ದರು.
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 