ಇಂದಿನಿಂದ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ

ಹೊಸಪೇಟೆ (ವಿಜಯನಗರ),ಜು.16: ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ವತಿಯಿಂದ ಜು.17ರಿಂದ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಕ್ರಮದ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಜಗದೀಶ್ ಪಾಟ್ನೆ ಅವರು ತಿಳಿಸಿದ್ದಾರೆ. 

ಜು.17ರ ಸೋಮವಾರದಂದು ಬೆಳಿಗ್ಗೆ 9.30ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಆವರಣದಲ್ಲಿ ಗಣ್ಯರಿಂದ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ನೇರವೇರಿಸಲಾಗುತ್ತದೆ. 

ಕಾರ್ಯಕ್ರಮದಲ್ಲಿ ಅಪಾಯದ ಅಂಚಿನಲ್ಲಿರುವ ಹಾಗೂ ದುರ್ಬಲ ವರ್ಗದ 2ಲಕ್ಷದ 93ಸಾವಿರದ 424 ಜನರನ್ನು ತಪಾಸಣೆ/ಪರೀಕ್ಷೆಗೆ ಒಳಪಡಿಸಲಾಗುವುದು. ಹಾಗೂ 93 ಮೇಲ್ವಿಚಾರಕರನ್ನೊಳಗೊಂಡಂತೆ 390 ತಂಡಗಳು ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.  

ಲೋಕಾಯುಕ್ತರ ಹೆಸರು ದುರ್ಬಳಕೆ: ಪ್ರಕರಣ ದಾಖಲು 

ಹೊಸಪೇಟೆ (ವಿಜಯನಗರ),ಜು.16: ಕೊಟ್ಟೂರು ತಾಲ್ಲೂಕಿನಲ್ಲಿ ಲೋಕಾಯುಕ್ತ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ಕುರಿತು ಪೊಲೀಸ್ ಉಪಾಧೀಕ್ಷಕ ರಾಜೇಶ್ ಲಮಾಣಿ ಅವರು ತಿಳಿಸಿದ್ದಾರೆ. 

ಕೊಟ್ಟೂರು ತಹಶೀಲ್ದಾರ್ ಕುಮಾರಸ್ವಾಮಿ ಅವರಿಗೆ ಲೋಕಾಯುಕ್ತ ಠಾಣೆಯ ಅಧಿಕಾರಿಗಳ ಹೆಸರಿನಲ್ಲಿ ಅನಾಮಧೇಯ ವ್ಯಕ್ತಿ ಕರೆ ಮಾಡಿ ಹಣ ಪಡೆಯಲು ಪ್ರಯತ್ನಿಸಿದ್ದು ಬೆಳಕಿಗೆ ಬಂದಿದೆ.  ಸಾರ್ವಜನಿಕರು ಅನಾಮಧೇಯ ಕರೆ ಮಾಡಿ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಸರು ಹೇಳಿ ಹಣಕ್ಕೆ ಬೇಡಿಕೆ ಇಟ್ಟರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬಹುದಾಗಿದೆ. 


ಕವಿಪ್ರನಿನಿ ಮಾರ್ಗದಲ್ಲಿ ವಿದ್ಯುತ್ ಪೂರೈಕೆ; ಸಾರ್ವಜನಿಕರು ಎಚ್ಚರದಿಂದಿರಲು ಸೂಚನೆ 

ಹೊಸಪೇಟೆ(ವಿಜಯನಗರ),ಜು.1:ಕೂಡ್ಲಿಗಿ ತಾಲ್ಲೂಕಿನ ಸರಹದ್ದಿನಲ್ಲಿ 220/66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸುಮಾರು 32.531 ಕಿ.ಮೀ. ಉದ್ದದ ಹೊಸ 220 ಕೆ.ವಿ ವಿದ್ಯುತ್ ಮಾರ್ಗವನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ನಿರ್ಮಾಣ ಮಾಡಿದ್ದು ಇದು ಬಡೆಲಡಕು, ಅಲಬೂರ, ಗಜಾಪುರ, ಕೋಗಳಿ, ಕಂದಗಲ್ಲು, ಕನ್ನೇಹಳ್ಳಿ, ತಿಮ್ಮಲಾಪುರ, ಇಟ್ಟಿಗಿ, ದೂಪದಹಳ್ಳಿ ಹಾಗೂ ಅಂಬಳಿ ಗ್ರಾಮದ ಸರಹದ್ದಿನಲ್ಲಿ ಹಾದುಹೋಗಿರುತ್ತದೆ. ಈ ಪ್ರಸರಣ ಮಾರ್ಗವನ್ನು ಜು.25 ರಂದು ಅಥವಾ ನಂತರದ ದಿನಗಳಲ್ಲಿ ವಿದ್ಯುದ್ದೀಕರಿಸಲಾಗುತ್ತದೆ. 

ಆದ್ದರಿಂದ ಸಾರ್ವಜನಿಕರು ಮಾರ್ಗದ ವಿದ್ಯುತ್ ಗೋಪುರಗಳನ್ನು ಹತ್ತುವುದಾಗಲೀ, ದನಕರುಗಳನ್ನು ಕಟ್ಟುವುದಾಗಲಿ, ಹಸಿರು ಬಳ್ಳಿ, ಗಿಡದ ಟೊಂಗೆಗಳನ್ನು ಅಥವಾ ಲೋಹದ ತಂತಿಗಳನ್ನು ಎಸೆಯುವುದಾಗಲಿ ಮಾಡಬಾರದು. 

ಇದರಿಂದ ಸಾರ್ವಜನಿಕರ ಆಸ್ತಿ-ಪಾಸ್ತಿ ಹಾಗೂ ಪ್ರಾಣಕ್ಕೆ ಹಾನಿಯಾಗುವ ಸಂಭವವಿರುತ್ತದೆ. ಹಾನಿಗೆ ಕೃತ್ಯಗಳನ್ನು ಎಸಗಿದವರೇ ಜವಾಬ್ದಾರರಾಗಿರುತ್ತಾರೆ ಎಂದು ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ. 

ಕವಿಪ್ರನಿನಿ ಮಾರ್ಗದಲ್ಲಿ ವಿದ್ಯುತ್ ಪೂರೈಕೆ; ಸಾರ್ವಜನಿಕರು ಎಚ್ಚರದಿಂದಿರಲು ಸೂಚನೆ 

ಹೊಸಪೇಟೆ(ವಿಜಯನಗರ),ಜು.15(ಕರ್ನಾಟಕ ವಾರ್ತೆ): ಕೂಡ್ಲಿಗಿ ತಾಲ್ಲೂಕಿನ ಬಡೆಲಡಕು ಗ್ರಾಮದ ಸರಹದ್ದಿನಲ್ಲಿ 220/66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಕೊಟ್ಟೂರು ಟ್ಯಾಪ್ ಪಾಯಿಂಟ್‌ವರೆಗೆ (ಸುಂಕದಕಲ್ಲು ಗ್ರಾಮ) ಸುಮಾರು 9.16 ಕಿ.ಮೀ. ಉದ್ದದ ಹೊಸ 66 ಕೆ.ವಿ 2ನೇ ಸಕ್ರ್ಯೂಟ್ ವಿದ್ಯುತ್ ಮಾರ್ಗವನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ನಿರ್ಮಾಣ ಮಾಡಿದ್ದು ಇದು ಬಡೆಲಡಕು, ತುಪ್ಪಕ್ಕನಹಳ್ಳಿ, ಗಂಗಮ್ಮನಹಳ್ಳಿ, ನಾಗಲಾಪುರ ಹಾಗೂ ಸುಂಕದಕಲ್ಲು ಸರಹದ್ದಿನಲ್ಲಿ ಹಾದುಹೋಗಿರುತ್ತದೆ. ಈ ಪ್ರಸರಣ ಮಾರ್ಗವನ್ನು ಜು.25 ರಂದು ಅಥವಾ ನಂತರದ ದಿನಗಳಲ್ಲಿ ವಿದ್ಯುದ್ದೀಕರಿಸಲಾಗುತ್ತದೆ. 

ಆದ್ದರಿಂದ ಸಾರ್ವಜನಿಕರು ಮಾರ್ಗದ ವಿದ್ಯುತ್ ಗೋಪುರಗಳನ್ನು ಹತ್ತುವುದಾಗಲೀ, ದನಕರುಗಳನ್ನು ಕಟ್ಟುವುದಾಗಲಿ, ಹಸಿರು ಬಳ್ಳಿ, ಗಿಡದ ಟೊಂಗೆಗಳನ್ನು ಅಥವಾ ಲೋಹದ ತಂತಿಗಳನ್ನು ಎಸೆಯುವುದಾಗಲಿ ಮಾಡಬಾರದು. 

ಇದರಿಂದ ಸಾರ್ವಜನಿಕರ ಆಸ್ತಿ-ಪಾಸ್ತಿ ಹಾಗೂ ಪ್ರಾಣಕ್ಕೆ ಹಾನಿಯಾಗುವ ಸಂಭವವಿರುತ್ತದೆ. ಹಾನಿಗೆ ಕೃತ್ಯಗಳನ್ನು ಎಸಗಿದವರೇ ಜವಾಬ್ದಾರರಾಗಿರುತ್ತಾರೆ ಎಂದು ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ. 

*-*-*-* 

ಗ್ರಾಮದಲ್ಲಿ ಸ್ವಚ್ಛತಾ ಆಂದೋಲನಾ ಕಾರ್ಯಕ್ರಮ 

ಹೊಸಪೇಟೆ(ವಿಜಯನಗರ),ಜು.16: ಹೊಸಪೇಟೆ ತಾಲ್ಲೂಕಿನ ಡಾಣಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸ್ವಚ್ಚ ಭಾರತ್ ಮಿಷನ್ (ಗ್ರಾಮೀಣ) ಹಾಗೂ ಬೆಂಗಳೂರಿನ ಅಆಆ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಐರಣ ಊಠಜ ಋಣಚಿಣತಜ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಕಾರ್ಯಕ್ರಮವನ್ನು ಡಾಣಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಇ.ಲಕ್ಷಿದೇವಿ ಅವರು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರು ಶೌಚಾಲಯ ಬಳಸಬೇಕು ಬಯಲು ಶೌಚದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪರಿಸರ ಆನೈರ್ಮಲ್ಯದಿಂದ ವಾಂತಿ ಬೇಧಿ ಪ್ರಕರಣಗಳು ಉಂಟಾಗುತ್ತಿವೆ, ಮನೆಯ ಕಸವನ್ನು ಅಲ್ಲಿಯೇ ಹಸಿ ಕಸ ಮತ್ತು ಒಣ ಕಸ ಎಂದು ಬೇರಿ​‍್ಡಸಿ ಕಾಂಪೋಸ್ಟ ಮಾಡಬೇಕು ಒಣ ಕಸವನ್ನು ಗ್ರಾಮ ಪಂಚಾಯತಿಯಿಂದ ಬರುವ ಸ್ವಚ್ಚತಾ ವಾಹಿನಿ ನೀಡಬೇಕು, ಜೊತೆಗೆ ಸಮುದಾಯ ಶೌಚಾಲಯ ನಿರ್ಮಾಣ ಮಾಡಬೇಕು, ಶಾಲಾ ವಿದ್ಯಾರ್ಥಿಗಳು ಮನೆಯಲ್ಲಿ ಪಾಲಕರಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವಂತೆ ತಿಳಿಸಿದರು .  

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸ್ವಚ್ಚ ಭಾರತ್ ಜಿಲ್ಲಾ ಎಂ.ಐ.ಎಸ್ ಸಮಾಲೋಚಕರು ಅಂಬೀಶ್ವರ, ಆರ್‌.ಕೆ.ರೂರ್ಬನ್, ಸಮಾಲೋಚಕರು ಶಿವಕುಮಾರ .ಎನ್, ಆರ್‌.ಎಲ್‌.ಎಮ್‌.ಪ್ರಸನ್ನಕುಮಾರ ಮತ್ತು ಅಆಆ ಸಂಸ್ಥೆಯವರು ಹಾಗೂ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಸೇರಿದಂತೆ ಇತರರು ಉಪಸ್ಥಿತರಿದ್ದರು.