ಖನ್ನೂರ ವಿದ್ಯಾನಿಕೇತನ ವಿದ್ಯಾರ್ಥಿಗಳ ಸಾಧನೆ
Achievements of Khannur Vidyaniketan students
ರಾಣೆಬೆನ್ನೂರು 18: ಇತ್ತೀಚೆಗೆ ಕರ್ನಾಟಕ ರಾಜ್ಯ ಅಂಡರ್-9 ಚಾಂಪಿಯನ್ಶಿಪ್ ಚೆಸ್ ಪಂದ್ಯಾವಳಿ ನಡೆಯಿತು. ಅತೀ ಸ್ಪರ್ಧಾತ್ಮಕವಾಗಿ ಸದರಿ ಚೆಸ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಇಲ್ಲಿನ ಖನ್ನೂರ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಸ್ಪರ್ಧಾತ್ಮಕ ಸಾಧನೆ ಮೆರೆದು ಶಾಲೆಗೆ ಹಾವೇರಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಶಾಲೆಯ ಶ್ರೇಯಾಂಕ್ ದಾಸ್ ಸತತ ಎರಡನೇ ಬಾರಿಗೆ ರಾಜ್ಯ ಅಂಡರ್ -9 ಓಪನ್ ಚಾಂಪಿಯನ್ಶಿಪ್ ಆಗಿ ಹೊರಹೂಮ್ಮಿದ್ದಾರೆ. ಒಟ್ಟು ಒಂಬತ್ತು ಸುತ್ತುಗಳಲ್ಲಿ 8 ಗೆಲುವು ಮತ್ತು 1 ಡ್ರಾ ದಾಖಲಿಸಿ ಒಟ್ಟು 8.5 ಅಂಕಗಳನ್ನು ಗಳಿಸಿರುವ ಅವರು, ಟೋನಿಯುದ್ಧಕ್ಕೂ, ಅಜೇಯರಾಗಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿನಿಯರ ವಿಭಾಗದಲ್ಲಿ ಶಾಲೆಯ ವಿದ್ಯಾರ್ಥಿನಿ ದಿಶಾನಿ ಅತ್ಯುತ್ತಮ ಪ್ರದರ್ಶನ ನೀಡಿ ರನ್ನರ್ -ಅಪ್ ಸ್ಥಾನವನ್ನು ಪಡೆದಿದ್ದಾರೆ. ದಿಶಾನಿ -9 ಸುತ್ತುಗಳಲ್ಲಿ 7 ಗೆಲುವು ಹಾಗೂ 2 ಸೋಲುಗಳೊಂದಿಗೆ 7 ಅಂಕಗಳನ್ನು ಗಳಿಸಿ ತಮ್ಮ ಪ್ರತಿಭೆ ಮತ್ತು ಕೊನೆಯವರೆಗೂ ಹೋರಾಟದ ಮನೋಭಾವವನ್ನು ಪ್ರದರ್ಶಿಸಿದ್ದಾರೆ.
ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಖನ್ನೂರ ವಿಧಾನಕೇತನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರವೀಣ್ ಎಂ. ಖನ್ನೂರ, ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ಶೈಲ ಶ್ರೀ ಪಿ. ಖನ್ನೂರ, ಕ್ರೀಡಾ ಸಂಯೋಜಕ ಡಾ. ಅನುರಾಗ ಪಿ.ಖನ್ನೂರ, ಪ್ರಾಚಾರ್ಯರಾದ ಸುಬ್ಬರಾವ್, ಮನಿಷ ಐರೆಠಲ್ ದೈಹಿಕ ತರಬೇತಿದಾರರು ಸೇರಿದಂತೆ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ, ಮತ್ತು ಪೋಷಕರು, ಜಿಲ್ಲೆಯ ಕ್ರೀಡಾ ಸಂಘ ಸಂಸ್ಥೆಗಳು ಹಾರ್ದಿಕವಾಗಿ ಅಭಿನಂದಿಸಿ, ಶುಭ ಹಾರೈಸಿದ್ದಾರೆ.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 