ಕಡಲ್ಗಳ್ಳರಿಂದ 20 ಭಾರತೀಯರ ಅಪಹರಣ
ನವದೆಹಲಿ, ಡಿ 17: ವಾಣಿಜ್ಯ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದ 20 ಭಾರತೀಯರನ್ನು ಆಫ್ರಿಕಾದ ಪಶ್ಚಿಮ ಕರಾವಳಿ ತೀರದ ಬಳಿ ಕಡಲ್ಗಳ್ಳರು ಅಪಹರಣ ಮಾಡಿದ್ದಾರೆ.ಅಪಹೃತ ಒತ್ತೆಯಾಳುಗಳ ಬಿಡುಗಡೆಗೆ, ಸುರಕ್ಷತೆಗೆ ವಿಶೇಷ ಗಮನ ಹರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಈ ವಿಷಯವನ್ನು ಭಾರತ ಸರ್ಕಾರ ಕೂಡಲೇ ನೈಜೀರಿಯಾ ಸರ್ಕಾರದ ಗಮನಕ್ಕೆ ತಂದಿದೆ.ಹಾಂಕಾಂಗ್ ಮೂಲದ ಹಡಗಿನಲ್ಲಿದ್ದ 18 ಮಂದಿ ಭಾರತೀಯರನ್ನು ಕಡಲ್ಗಳ್ಳರು ನೈಜೀರಿಯಾ ಕರಾವಳಿಯಲ್ಲಿ ಅಪಹರಿಸಿದ 10 ದಿನಗಳಲ್ಲೇ ಮತ್ತೊಂದು ಕಹಿ ಘಟನೆ ವರದಿಯಾಗಿದೆ.ಇದೆ 15ರಂದು ಎಂಟಿ ಡ್ಯೂಕ್ ಹಡಗಿನಲ್ಲಿದ್ದ 20 ಮಂದಿ ಭಾರತೀಯ ಸಿಬ್ಬಂದಿಯನ್ನು ಕಡಲ್ಗಳ್ಳರು ಅಪಹರಣ ಮಾಡಿರುವುದು ಬಹಳ ಆತಂಕದ ಸಂಗತಿಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಇದು ಒಂದು ವರ್ಷದಲ್ಲಿ ಕಡಲ್ಗಳ್ಳರು ಭಾರತೀಯರನ್ನು ಗುರಿ ಮಾಡಿದ ಮೂರನೇ ಪ್ರಕರಣವಾಗಿದೆ. ಈ ವಿಚಾರವನ್ನು ಅಬುಜಾದಲ್ಲಿ ನೈಜೀರಿಯಾ ಅಧಿಕಾರಿಗಳು ಹಾಗೂ ಇತರ ನೆರೆ ರಾಷ್ಟ್ರಗಳ ಗಮನಕ್ಕೂ ತರಲಾಗಿದೆ. ಮೇಲಾಗಿ ಅಪಹೃತರ ಬಿಡುಗಡೆಗೆ, ಸುರಕ್ಷತೆಗೆ ಗಮನ ಕೊಡಲಾಗಿದೆ ಎಂದೂ ಹೇಳಿದ್ದಾರೆ .
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 