ಅಂತರ ರಾಜ್ಯದ ಕ್ಷೌರಿಕ ಉದ್ಯೋಗಿಗಳ ಅಂಗಡಿಗಳ ಹಾವಳಿ ತಡೆಗಟ್ಟಲು ಮನವಿ

ಶೇಡಬಾಳ 22:  ಕಾಗವಾಡ ತಾಲೂಕಿನಲ್ಲಿ ಅಂತರ ರಾಜ್ಯದ ಕ್ಷೌರಿಕ ಉದ್ಯೋಗಿಗಳ ಅಂಗಡಿಗಳ ಹಾವಳಿ ಅತಿಯಾಗುತ್ತಿದ್ದು, ಇದರಿಂದಾಗಿ ಸ್ಥಳೀಯ ಹಡಪದ ಹಾಗೂ ನಾವ್ಹಿ ಸಮಾಜದ ಕ್ಷೌರಿಕ ವೃತ್ತಿಯನ್ನೇ ನಂಬಿ  ತಮ್ಮ ಜೀವನವನ್ನು ಸಾಗಿಸುತ್ತಿರುವ ಸಮುದಾಯಕ್ಕೆ ಸಾಕಷ್ಟು ಆರ್ಥಿಕ ತೊಂದರೆ ಉಂಟಾಗುತ್ತಿದೆ. ಕಾರಣ ತಾಲೂಕಾಡಳಿತ ಹಾಗೂ ಸರ್ಕಾರ ಇದನ್ನು ತಡೆಗಟ್ಟುವಂತೆ ಕಾಗವಾಡ ತಾಲೂಕಾ ಹಡಪದ, ಕ್ಷೌರಿಕ  ಸಮಾಜದ ಅಧ್ಯಕ್ಷ ಅನಿಲ ಹೂವಣ್ಣ ನಾವಲಗೇರ ಮನವಿ ಪತ್ರ ಅರ​‍್ಿಸಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಮಂಗಳವಾರ ದಿ. 22 ರಂದು ಕಾಗವಾಡ ಚೆನ್ನಮ್ಮ ಸರ್ಕಲ್‌ದಲ್ಲಿ ಒಂದುಗೂಡಿದ ತಾಲೂಕಾ ಕ್ಷೌರಿಕರು ತಹಶೀಲ್ದಾರ ಕಾರ್ಯಾಲಯಕ್ಕೆ ತೆರಳಿ ಉಪತಹಶೀಲ್ದಾರ ಅಣ್ಣಾಸಾಬ ಕೋರೆಯವರಿಗೆ ಮನವಿ ಪತ್ರ ಅರ​‍್ಿಸಿದರು. ಮನವಿ ಪತ್ರ ಅರ​‍್ಿಸಿ ಅನಿಲ ನಾವಲಗೇರ ಮಾತನಾಡುತ್ತಾ ಕಾಗವಾಡ ತಾಲೂಕಿನ  ನಾವ್ಹಿ ಹಾಗೂ ಹಡಪದ ಸಮಾಜದವರು ತಲತಲಾಂತರದಿಂದ ಕ್ಷೌರಿಕ ವೃತ್ತಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಸಮಾಜದವರಿಗೆ ಬೇರೆ ಯಾವುದೇ ಆದಾಯ ಇಲ್ಲದೇ ಇರುವುದರಿಂದ ಕ್ಷೌರಿಕ ವೃತ್ತಿಯಿಂದ ಬಂದ ಹಣದಲ್ಲಿಯೇ ಹೆಂಡತಿ, ಮಕ್ಕಳು ಸಾಕಿ ಸಲುಹುವ ಗುರುತರವಾದ ಜವಾಬ್ದಾರಿ ಇವರ ಮೇಲಿದೆ. ಆದರೆ ಇತ್ತಿತ್ತಲಾಗಿ ಕಾಗವಾಡ ತಾಲೂಕಿನ ಗ್ರಾಮೀಣ ಭಾಗದಲ್ಲಿ ಉತ್ತರ ಭಾರತದಿಂದ ಬಂದು  ಕ್ಷೌರಿಕ ಅಂಗಡಿಗಳನ್ನು ತೆರೆದು ಸ್ಥಳೀಯ ಕ್ಷೌರಿಕರಿಗೆ ಸಾಕಷ್ಟು ಆರ್ಥಿಕ ತೊಂದರೆ ಉಂಟು ಮಾಡುತ್ತಿದ್ದಾರೆ. ಕಾರಣ ಸ್ಥಳೀಯ ಗ್ರಾಮ ಪಂಚಾಯತಿ, ಪುರಸಭೆ, ಪಟ್ಟಣ ಪಂಚಾಯತಿ, ತಾಲೂಕಾಡಳಿತ ಇತ್ತ ಕಡೆಗೆ ಗಮನ ಹರಿಸಿ ಕ್ಷೌರಿಕರ ಬದುಕನ್ನು ಸುಗಮಗೊಳಿಸುವಂತೆ ಒತ್ತಾಯಿಸಿದರು.  

ಉಪ ತಹಶೀಲ್ದಾರ ಅಣ್ಣಾಸಾಬ ಕೋರೆಯವರು ಮನವಿ ಸ್ವೀಕರಿಸಿ ಮೇಲಾಧಿಕಾರಿಗಳಿಗೆ ತಮ್ಮ ಬೇಡಿಕೆಯ ಪತ್ರವನ್ನು ರವಾನಿಸಲಾಗುವುದೆಂದು ಹೇಳಿದರು. 

ಈ ಸಮಯದಲ್ಲಿ ತಾಲೂಕಾಧ್ಯಕ್ಷ ಅನಿಲ ನಾವಲಗೇರ, ಶಿವಲಿಂಗ ಸಾವಳಗಿ, ಕಾಶಿನಾಥ ಕೋರೆ, ಸಂತೋಷ ನಾವಲಗೇರ, ಅಪ್ಪಾಸಾಬ ನಾವಲಗೇರ, ಪಾಂಡು ಜಾಧವ, ಅಜೀತ ಸೂರ್ಯವಂಶಿ, ಕುಮಾರ ಹಡಪದ, ಉತ್ತಮ ಸಂಕಪಾಳ, ರಾಜು ಕೋರೆ, ರವೀಂದ್ರ ಕೋರೆ, ಶಂಕರ ಕೋರೆ, ರಾಜು ಹಡಪದ, ರಘು ಹಡಪದ, ಪ್ರಶಾಂತ ನಾವ್ಹಿ, ಕುಮಾರ ಕೋರೆ, ಶಿವಾನಂದ ನಾವ್ಹಿ, ನಾಗು ನಾವ್ಹಿ, ದೀಲೀಪ ನಾವ್ಹಿ, ಪ್ರವೀಣ ನಾವಲಗೇರ, ಸಾಗರ ನಾವ್ಹಿ, ವಿನಾಯಕ ಹಡಪದ, ಮಹಾದೇವ ನಾವ್ಹಿ, ಹನಮಂತ ನಾವ್ಹಿ ಸೇರಿದಂತೆ ಕಾಗವಾಡ ತಾಲೂಕಿನ ಎಲ್ಲ ಹಡಪದ, ನಾವ್ಹಿ ಸಮಾಜದ ಕ್ಷೌರಿಕರು ಉಪಸ್ಥಿತರಿದ್ದರು.