ಪ್ರತಿಶೋಧ ಹೆಸರಿನ ನಾಟಕ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ಪ್ರದರ್ಶನ

ಪ್ರತಿಶೋಧ ಹೆಸರಿನ ನಾಟಕ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ಪ್ರದರ್ಶನ A play titled Pratishodha was performed at Karnataka Vidyavardhaka Sangha, Dharwad.

ಧಾರವಾಡ 08 ; ಕಲಾವಿದರ ಮನೋಜ್ಞ ಅಭಿನಯದ ಪ್ರತಿಶೋಧ ನಾಟಕ ಪ್ರತಿಶೋಧ ಹೆಸರೇ ಸೂಚಿಸುವಂತೆ ಶೋಧನೆ ಮಾಡುವುದು ಮತ್ತೇ ಶೋಧನೆ ಮಾಡುವುದು. ಸತ್ಯವನ್ನು ಹುಡುಕಾಡುವುದು ಎಂಬರ್ಥ. ಪ್ರತಿಶೋಧ ಹೆಸರಿನ ನಾಟಕ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ಇತ್ತೀಚಿಗೆ ಪ್ರದರ್ಶನ ಕಂಡಿತು. ರಂಗಾಯಣದ ರೆಪರ್ಟರಿ ಕಲಾವಿದರು ಅಬಿನಯಿಸಿದ ನಾಟಕ ಇದಾಗಿತ್ತು. ಎರಡು ಗಂಟೆಯ ನಾಟಕ ಇದಾಗಿತ್ತು. ಭರ್ತಿ ಎರಡು ಗಂಟೆಗಳ ಕಾಲ ಪ್ರೇಕ್ಷಕರು ಅತ್ಯಂತ ಕುತೂಹಲದಿಂದ ನಾಟಕವನ್ನು ನೋಡುವಂತೆ ಮಾಡಿದ್ದು ಗಟ್ಟಿಯಾದ ಕಥಾವಸ್ತು . ಎಲ್ಲಾ ಕಲಾವಿದರ ಮನೋಜ್ಞ ಅಭಿನಯ ಎಂದರೆ ತಪ್ಪಾಗದು. ಈ ನಾಟಕವನ್ನು ರಂಗಾಯಣದ ನಿರ್ದೇಶಕರಾದ ರಂಗಕರ್ಮಿ ಝಾಕೀರಹುಸೇನ ನದಾಫರವರು. ಪ್ರತಿಶೋಧ ನಾಟಕದ ಕಥಾವಸ್ತು ಈ ರೀತಿ ಇದೆ. ಒಂದು ತುಂಬು ಕುಟುಂಬ . ಆ ಮನೆಯಲ್ಲಿ ಒಬ್ಬ ಹಿರಿಯ ಮನುಷ್ಯ . ಆಗೊಮ್ಮೆ ಈಗೊಮ್ಮೆ ಬಂದು ಕಿರಿಯರಿಗೆ ಬುದ್ದಿವಾದ ಹೇಳುವ ಮುದುಕಿಯ ಪಾತ್ರ. ಆ ಹಿರಿಯರಿಗೆ ಮೂವ್ವರು ಗಂಡು ಮಕ್ಕಳು. ಇಬ್ಬರು ಉದ್ಯೋಗಸ್ಥರು.

ಇಬ್ಬ ನಿರುದ್ಯೋಗಿ. ಮೂವ್ವರಲ್ಲಿ ಇಬ್ಬರಿಗೆ ಮದುವೆಯಾಗಿದೆ. ಕಿರಿಯವನಿಗೆ ಮದುವೆಯಾಗಿಲ್ಲ. ಮನೆಯ ಕೆಲಸ ಮಾಡಲು ಗೌರಿ ಎಂಬ ಕೆಲಸದಾಕೆಯನ್ನು ನೇಮಿಸಿಕೊಂಡಿರುತ್ತಾರೆ. ನಡುವಿನ ಮಗ ಆತನ ಹೆಂಡತಿ ನಡುವೆ ಜಗಳವಾಗುತ್ತದೆ. ಮರುದಿನ ಆಕೆಯ ಹೆಣ ಊರ ಹೊರಗಿನ ಹಳ್ಳದ ದಂಡೆಯ ಮೇಲೆ ಸಿಗುತ್ತದೆ. ಅದು ಆತ್ಮಹತ್ಯೆ ಎಂದು ಮನೆಯವರ ವಾದ. ಅದು ಆತ್ಮಹತ್ಯೆಯಲ್ಲ ಕೊಲೆ ಎಂದು ಸಾಬೀತು ಆಗುತ್ತದೆ. ಆ ಕೊಲೆಯನ್ನು ಯಾರು ಮಾಡಿದರೂ ಯಾಕೆ ಮಾಡಿದರೂ ಎಂದು ತಿಳಿಯಲು ನಾಟಕ ನೋಡಲೇಬೇಕು. ನಾಟಕದ ಆರಂಭದಿಂದ ಕೊನೆಯವರೆಗೆ ಆ ಯಮನಾಳ ಕೊಲೆ ಯಾರು ಮಾಡಿದರು ಎಂದು ನೋಡುಗರಿಗೆ ತಿಳಿಯುವದಿಲ್ಲ. ಅಷ್ಟು ತಿರುವುಗಳನ್ನು ಕಥಾವಸ್ತು ಹೊಂದಿದೆ. ಪ್ರೇಕ್ಷಕರಿಗೆ ಹಲವು ಸನ್ನಿವೇಶಗಳಲ್ಲಿ ಹಲವು ಪಾತ್ರಗಳ ಯಮುನಾಳನ್ನು ಕೊಂದಿರಬಹುದು ಎಂದು ಅನಿಸುತ್ತದೆ. ಅಷ್ಟು ರಹಸ್ಯ ಹಾಗೂ ಗೌಪ್ಯತೆಯನ್ನು ಕಥಾ ವಸ್ತು ಹೊಂದಿದೆ.  

ಗಂಡ ಹೆಂಡತಿ ಜಗಳವಾದಾಗ ಗಂಡನಿಂದ ಹೊಡೆತ ತಿಂದ ಪರಿಣಾಮ ಗಂಡನೇ ಆಕೆಯನ್ನು ಕೊಂದಿರಬಹುದು ಎಂದು ಒಂದು ಸಾರಿ ಎನಿಸಿದರೆ ವಕೀಲ ಪಾತ್ರಧಾರಿ ತನ್ನ ಹೆಂಡಿತಿ ಬದಲಾಗಿ ತಮ್ಮನ ಹೆಂಡತಿ ಮೇಲೆ ಮಮತೆ ತೋರಿದ್ದರಿಂದ ಆಕೆಯೊಂದಿನ ಮಮತೆ ತನ್ನವಳಿಗೆ ತಿಳಿಯುವದೆಂದ ಅವರು ಕೊಂದಿರಬಹುದು ಎಂದು ಮತ್ತೊಮ್ಮೆ ಅನಿಸುತ್ತದೆ. ಪೋಲಿಸ್ ತನಿಖೆಯಲ್ಲಿ ಆಕೆ ನಿದ್ದೆ ಗುಳಿಗೆ ತೆಗೆದುಕೊಂಡು ಸತ್ತಿದ್ದರಿಂದ ಆ ಮನೆಯಲ್ಲಿ ನಿದ್ದೆ ಗುಳಿಗೆ ತೆಗೆದುಕೊಳ್ಳುವನು ನಿರುದ್ಯೋಗಿ ಪಾತ್ರಧಾರಿ. ಅವನು ಕೊಂದಿರಬಹುದು ಎಂದು ಒಂದೊಮ್ಮೆ ಎನಿಸಿದರೆ ಆಗೊಮ್ಮೆ ಈಗೊಮ್ಮೆ ಅವರ ಮನೆಗೆ ಬಂದು ಉಪನ್ಯಾಸಕನಿಂದ ಹಣ ಪೀಕುವ ಸಿಂಗಾರಿ ಕಂಡರೆ ಉಪನ್ಯಾಸಕನೇ ಕೊಂದಿರಬಹುದು ಎಂದು ಅನಿಸುತ್ತದೆ.

ಗೌರಿ ಹಾಗೂ ಸಿಂಗಾರಿ ನಡುವೆ ಸಂಬಂಧ ಇರುವುದರಿಂದ ಗೌರಿ ಆಕೆಯನ್ನು ಕೊಂದಿರಬಹುದು ಎಂದು ಮತ್ತೊಮ್ಮೆ ಎನಿಸುತ್ತದೆ. ಮನೆಯ ಯಜಮಾನರು ಗೌರಿಯ ಜೊತೆ ಆಪ್ತತೆ ಹೊಂದಿದರೆಂದು ಯಮುನಾ ಬೇಸತ್ತ ಕಾರಣ ಮನೆಯ ಯಜಮಾನರೇ ಆಕೆಯನ್ನು ಕೊಂದಿರಬಹುದು ಎಂದು ಎನಿಸುತ್ತದೆ. ಪ್ರತಿ ಸನ್ನಿವೇಶಕ್ಕೂ ಕೊಲೆಗಾರ ಇವರು ಇರಬಹುದು ಅವರು ಇರಬಹುದು ಎಂದು ಎನಿಸುತ್ತದೆ. ನಾಟಕದ ಕೊನೆಯವರೆಗೂ ಕೊಲೆಯೋ ? ಆತ್ಮಹತ್ಯೆಯೋ ತಿಳಿಯದು ಅಷ್ಟು ಪತ್ತೆಧಾರಿ ಕಥಾ ವಸ್ತು ಇದಾಗಿದೆ. ಇನ್ನು ಪ್ರತಿ ಪಾತ್ರವು ನಮ್ಮ ಬದುಕಿಗೆ ಒಂದೊಂದು ಸಂದೇಶ ನೀಡುತ್ತವೆ. ಬುದ್ದಿಮಾಂದ್ಯ ಗಣೇಶನ ಪಾತ್ರ ಮುಗ್ದತೆ ಪ್ರತೀಕ. ನಾವು ಸತ್ಯ ತಿಳಿಯಲು ಶೋಧನೆ ಅಗತ್ಯ ಎಂಬುದನ್ನು ಅರಿಯಬೇಕು. ನಿತ್ಯ ಜೀವನದಲ್ಲಿ ಕಣ್ಣಿಗೆ ಕಂಡಿದ್ದೆ ಸತ್ಯ ಎಂದು ತಿಳಿಯದೇ ಅದನ್ನು ಒರೆಗಲ್ಲಿಗೆ ಹಚ್ಚಿ ನೋಡಬೇಕು.