ನಿವೃತ್ತಿ ಹೊಂದಿದ ಮುಖ್ಯಗುರು ರಾಘವೇಂದ್ರಗೆ ಅದ್ಧೂರಿ ಬೀಳ್ಕೊಡಿಗೆ
A grand farewell to retired headmaster Raghavendra
ಕಂಪ್ಲಿ 30: ಪಟ್ಟಣದಲ್ಲಿರುವ ಹಂಪಿ ಗುರುಕುಲ ಸರ್ಕಾರಿ ತೆಲುಗು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಯೋ ನಿವೃತ್ತಿ ಹೊಂದಿದ ಮುಖ್ಯಗುರು ರಾಘವೇಂದ್ರ ಇವರನ್ನು ಅದ್ಧೂರಿಯಾಗಿ ಸನ್ಮಾನಿಸಿ ಸೋಮವಾರ ಬೀಳ್ಕೊಡಲಾಯಿತು.
ನಂತರ ಸನ್ಮಾನ ಸ್ವೀಕರಿಸಿ ರಾಘವೇಂದ್ರ ಅವರು ಮಾತನಾಡಿ, ಇಲ್ಲಿನ ತೆಲುಗು ಶಾಲೆಯಲ್ಲಿ ಸತತ 31 ವರ್ಷ ಸೇವೆ ಸಲ್ಲಿಸುವ ಮೂಲಕ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲಾಯಿತು. ಅನೇಕ ಏಳುಬೀಳುಗಳ ನಡುವೆ ಶಾಲೆಯನ್ನು ಮುನ್ನೆಡಿಸಿ, ಈಗ ವಯೋ ನಿವೃತ್ತಿ ಹೊಂದಿರುವೆ. ಪ್ರತಿಯೊಬ್ಬರ ಸಹಕಾರದಿಂದ ಸೇವೆ ಸಲ್ಲಿಸಲು ಸಾಧ್ಯವಾಯಿತು ಎಂದರು.
ನಂತರ ನಿವೃತ್ತಿ ಹೊಂದಿದ ರಾಘವೇಂದ್ರ ಹಾಗೂ ಅವರ ಧರ್ಮಪತ್ನಿ ಸುಜಾತ ಇವರಿಗೆ ಶಿಕ್ಷಕ ವೃಂದದವರು ಸನ್ಮಾನಿಸಿ ಗೌರವಿಸಿ, ಮುಂದಿನ ವಯೋ ನಿವೃತ್ತಿ ಬದುಕು ಸುಮಧುರವಾಗಿರಲೆಂದು ಹಾರೈಯಿಸಿದರು. ಈ ಸಂದರ್ಭದಲ್ಲಿ ಇಸಿಒ ರೇವಣ್ಣ, ಸಿಆರ್‌ಪಿಗಳಾದ ರೇಣುಕಾರಾಧ್ಯ, ಭೂಮೇಶ್ವರ, ಹಾಗೂ ಮಹಾಭಲೇಶ್ವರಗೌಡ, ಜಗನ್ನಾಥ, ಮಲ್ಲಿಕಾರ್ಜುನ, ಮುರಳಿಧರ್, ಸುಬ್ಬಾರಾವ್, ಹುಲಿಕುಂಟಾಚಾರ್, ಮಂಜುನಾಥ ಸೇರಿದಂತೆ ಇತರರು ಇದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 