ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮ
A felicitation program was organized for talented students of SSLC and PUC
ಲೋಕದರ್ಶನ ವರದಿ
ಶಿಗ್ಗಾವಿ 08 : ಸಹನಶೀಲತೆ ಇಲ್ಲದೇ ವಿದ್ಯೆಯ ಸಾಧನೆ ಅಸಾದ್ಯ, ಅರಿತು ಬಾಳುವ ಜ್ಞಾನವನ್ನ ತಿಳಿದು, ವಿದ್ಯಾ ಸಾಧನೆಯ ಸಂಪತ್ತನ್ನ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡು ಮುನ್ನಡೆಯಬೇಕು ಎಂದು ಶಿಗ್ಗಾವಿ ಎಸ್.ಆರ್.ಜೆ.ವಿ ಕಾಲೇಜಿನ ಉಪನ್ಯಾಸಕ ಶಿವಯ್ಯ ಪೂಜಾರ ಹೇಳಿದರು. ಪಟ್ಟಣದ ಕುಂಬಾರಗೇರಿ ಓಣಿಯ ವಿಶ್ವಭಂದು ಮರುಳಸಿದ್ದೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯ ಹಿಂದೂ ಸಾದರ ಸಮಾಜ ಸಂಘಟನೆಯ ತಾಲೂಕಾ ಘಟಕದ ವತಿಯಿಂದ ಸಮುದಾಯದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು,
ವಿದ್ಯೆಗೆ ವಿನಯವೇ ಭೂಷಣ, ಆ ಸಾಧನೆಯನ್ನ ತಮ್ಮದಾಗಿಸಿಕೊಳ್ಳಲು ಸಂಸ್ಕಾರಬೇಕು ಜೊತೆಗೆ ಸಾಧನೆ ಮಾಡಬೇಕಾದರೆ ವಿದ್ಯಾರ್ಥಿಗಳು ಗುರು ಮತ್ತು ಗುರಿಯನ್ನ ಬೆನ್ನತ್ತಬೇಕು, ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಜ್ಞಾನವನ್ನ ಪಾಲಕರು ಕೊಡಬೇಕು, ಕಷ್ಟ ಪಟ್ಟು ಕಲಿಸುವ ಪಾಲಕರಿಗೆ ಏನಾದರೂ ಕೊಡುಗೆ ಕೊಡುವಂತಹ ಮಕ್ಕಳಾಗಬೇಕು, ವಿದ್ಯಾರ್ಥಿಗಳಿಗೆ ಬಹಳಷ್ಟು ಅಭಾವ ಇರುತ್ತದೆ ಆದರೆ ಸ್ವಭಾವವನ್ನ ಬಿಡದೆ ಕಷ್ಟ ಪಟ್ಟರೆ ಸನ್ಮಾನ ಸಿಕ್ಕು ಮುಂದೋಂದು ದಿನ ಫಲ ಸಿಕ್ಕೆ ಸಿಗುತ್ತದೆ, ಜನ್ಮ ಕೊಟ್ಟ ತಂದೆ-ತಾಯಿಯನ್ನ ಕಷ್ಟು ಪಟ್ಟು ಕಾಪಾಡಿಕೊಳ್ಳಿ, ವಿದ್ಯಾರ್ಥಿಗಳಿಗೆ ಸಮಯ ಪ್ರಜ್ಞೆ ಇರಬೇಕು, ಓದಿನಲ್ಲಿ ತಲ್ಲೀನತೆ ಇರಬೇಕು, ಸ್ಪರ್ಧಾತ್ಮಕ ಜಗತ್ತು ಇದಾಗಿದೆ ಅದರ ಜೊತೆ ಎಷ್ಟೇ ಸಾಧನೆಯನ್ನ ಮಾಡಿದರೂ ಕಡಿಮೇಯೇ ಎಂದರು.
ಕರ್ನಾಟಕ ರಾಜ್ಯ ಹಿಂದೂ ಸಾದರ ಸಮಾಜದ ಸಂಘಟನೆಯ ಎಂ ಎಸ್ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿನ ಬದಲಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯ ಆಧಾರದ ಮೇಲೆ, ಸಾದರ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯಗಳು ಸಿಗಲು 2ಎ ಮೀಸಲಾತಿ ನೀಡಬೇಕು ಎಂಬುದು ಸಮುದಾಯದ ಪ್ರಮುಖ ಬೇಡಿಕೆಯಾಗಿದೆ, ಸಮುದಾಯದ ಬಹುಪಾಲು ಜನಸಂಖ್ಯೆಯು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಕೃಷಿ ಮತ್ತು ಸಣ್ಣಪುಟ್ಟ ಉದ್ಯೋಗಗಳನ್ನು ಅವಲಂಬಿಸಿದ್ದಾರೆ. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಲು 2ಎ ಮೀಸಲಾತಿ ಅತ್ಯಗತ್ಯ ಎಂದರು. ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು, ಶಿಕ್ಷಕ ಬಸವರಾಜ ಬಸರೀಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನ ಸನ್ಮಾನಿಸಲಾಯಿತು, ನಿವೃತ್ತ ಉಪನ್ಯಾಸಕ ಬಿ ಎಂ ಮುಳಗುಂದ, ಮುಖಂಡರಾದ ಜಗದೀಶ ಶೆಟೆಪ್ಪನವರ, ಕರಿಯಪ್ಪ ಬೆನಕಣ್ಣವರ, ಮಂಜುನಗೌಡ ಗೊಟಗೋಡಿ, ಪ್ರಕಾಶ ಹಾದಿ, ಪ್ರವೀಣ ಕಡಕೋಳ, ಬಸವರಾಜ ಗಂಜೀಗಟ್ಟಿ, ಉಳವಪ್ಪ ಗಂಜೀಗಟ್ಟಿ, ಶಿವಾನಂದ ತೊಂಡೂರ, ಸಿದ್ದನಗೌಡ ಹುತ್ತನಗೌಡ್ರ, ಮಲ್ಲೀಕಾರ್ಜು ಕೋಣನವರ ಸೇರಿದಂತೆ ಸಮುದಾಯ ಮುಖಂಡರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದರು, ಪ್ರಭುಗೌಡ ತೆಂಬದಮನಿ ಸ್ವಾಗತಿಸಿದರು, ರವಿ ಅರಗೋಳ ಪರಿಚಯಿಸಿದರು, ಸುರೇಶ ಮುದಕಣ್ಣವರ ಕಾರ್ಯಕ್ರಮ ನಿರ್ವಹಿಸಿದರು.
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 