ಡಾ.ಕೋಡಿಗೌಡರಿಗೆ ಗೌರವ ಸಮರೆ​‍್ಣ

ಡಾ.ಕೋಡಿಗೌಡರಿಗೆ ಗೌರವ ಸಮರೆ​‍್ಣ  A Tribute to Dr. Kodigowda

ತಾಳಿಕೋಟಿ 06 : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬೆಳಗಾವಿ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ.ಕೋಡಿಗೌಡ ಇವರನ್ನು ಎಪಿಎಂಸಿ ಕಾರ್ಯಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಬುಧವಾರ ಪಟ್ಟಣಕ್ಕೆ ಇಲಾಖೆಯ ಕಾರ್ಯ ನಿಮಿತ್ಯವಾಗಿ ಆಗಮಿಸಿದ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಆರ್ ಎಸ್ ರಾಠೋಡ ಅವರು ಡಾ.ಕೋಡಿಗೌಡರಿಗೆ ಈ ಸನ್ಮಾನವನ್ನು ನೀಡಿದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ವಿಜಯಪುರ ಜಿಲ್ಲೆಯಲ್ಲಿಯೇ ತಾಳಿಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಒಳ್ಳೆಯ ಹೆಸರನ್ನು ಹೊಂದಿದೆ. ಇದಕ್ಕಾಗಿ ನಾನು ಇಲ್ಲಿಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗಕ್ಕೆ ಅಭಿನಂದಿಸುತ್ತೇನೆ. ಅವರು ಇನ್ನೂ ಹೆಚ್ಚಿಗೆ ಉತ್ತಮ ಕಾರ್ಯವನ್ನು ಮಾಡಲಿ ಎಂದು ನಾನು ಈ ಸಂದರ್ಭದಲ್ಲಿ ಸಲಹೆ ನೀಡಲು ಬಯಸುತ್ತೇನೆ ಎಂದರು. ಈ ಸಮಯದಲ್ಲಿ ಮಾರುಕಟ್ಟೆ ಸಹಾಯಕಿ ಎಸ್ ಆರ್ ಮಠ, ರವಿ ರಾಠೋಡ ಹಾಗೂ ಅಮರೇಶ ಮಡಿವಾಳರ ಇದ್ದರು.