ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಎ.ಎಂ.ಖಾಜಿ ಕಾಂಗ್ರೆಸ್ ಸೇರೆ್ಡ
ಬ್ಯಾಡಗಿ 06 : ಪಟ್ಟಣದ ಜೀವ ವಿಮಾನ ನಿಗಮದ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ ಎ ಎಂ ಖಾಜಿ ಅವರು ನಿನ್ನೆ ಬಾಗಲಕೋಟೆ ನಗರದ ಉಪಚುನಾವಣೆಯ ಪ್ರಚಾರಾರ್ಥ ಆಗಮಿಸಿದ್ದ ಕರ್ನಾಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ನವರ ಹಾಗೂ ಬ್ಯಾಡಗಿ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹಾಗೂ ಶಾಸಕರಾದ ಶ್ರೀ ಬಸವರಾಜ್ ಶಿವಣ್ಣನವರ್ ಮತ್ತು ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸಂಜೀವ್ ನೀರಲಗಿ ಇವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರೆ್ಡಗೊಂಡರು.ಸುಮಾರು ಮೂರು ದಶಕಗಳ ಕಾಲ ಜಿವ ವಿಮಾ ನಿಗಮದಲ್ಲಿ ಪ್ರತಿನಿಧಿಯಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿ, ಸಮಾಜದ ಕಳಕಳಿಯೊಂದಿಗೆ ಇನ್ನು ಹೆಚ್ಚಿನ ಸೇವೆ ಸಲ್ಲಿಸಲು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರೆ್ಡಗೊಂಡವರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಡಾ. ಎ.ಎಂ. ಸೌಧಾಗರ. ಆಶ್ರಯ ಕಮಿಟಿ ಅಧ್ಯಕ್ಷರಾದ ಅಬ್ದುಲ್ ಮುನಾಫ್ ಏರೀಸೀಮೆ. ಹಾಗೂ ಮುಖಂಡರಾದ ಮಜೀದ್ ಮುಲ್ಲಾ ಇನ್ನು ಅನೇಕರು ಉಪಸ್ಥಿತರಿದ್ದರು.