ಕೆ ಪಿ ಮಗೆಣ್ಣವರ್ ಲಕ್ಷ್ಮೀ ಕ್ರೆಡಿಟ್ ಸೌಹಾರ್ದ ಸಹಕಾರಿಗೆ 7.27 ಕೋಟಿ ಲಾಭ

ಮಾಂಜರಿ 11: ಈ ಭಾಗದ ಜನರ ಆರ್ಥಿಕ ಸುಧಾರಣೆಗೆ ಕಳೆದ ಮೂರು ದಶಕಗಳ ಹಿಂದೆ ಜನ್ಮ ತಳೆದ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಕೆ ಪಿ ಮಗೆಣ್ಣವರ್ ಲಕ್ಷ್ಮೀ ಕ್ರೆಡಿಟ್  ಸೌಹಾರ್ದ ಸಹಕಾರಿ ಸಂಘ ಇಂದು ಹೆಮ್ಮರವಾಗಿ ಬೆಳೆದಿದ್ದು ಕಳೆದ ಆರ್ಥಿಕ ವರ್ಷದಲ್ಲಿ ?7.27 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಸಂಸ್ಥಾಪಕ ಸದಲಗಾ ಮಾಜಿ ಶಾಸಕ ಹಾಗೂ ಶಿರುಗುಪ್ಪಿ ಶುಗರ್ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಕೆ ಪಿ ಮಗೆಣ್ಣವರ್ ಹೇಳಿದರು. 

 ಮಾಂಜರಿ  ಗ್ರಾಮದ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಧುನಿಕ ಸೌಲಭ್ಯಗಳೊಂದಿಗೆ ಗ್ರಾಹಕ-ಸದಸ್ಯರಿಗೆ ತ್ವರಿತಗತಿಯಲ್ಲಿ ಸೇವೆ ಸಲ್ಲಿಸಲಾ ಗುತ್ತಿದೆ. ಈ ಮೂಲಕ ಸಹಕಾರಿ ಸಂಸ್ಥೆ ಪ್ರಗತಿಯತ್ತ ಸಾಗಿ ಜನಸ್ನೇಹಿ ಆಡಳಿತಕ್ಕೆ ಹೆಸರುವಾಸಿಯಾಗಿದೆ ಎಂದರು. 

ಸಹಕಾರಿ ಸಂಸ್ಥೆಗೆ  ಒಟ್ಟು 11161 ಜನ ಸದಸ್ಯರನ್ನು ಹೊಂದಿದ್ದು ಪ್ರಧಾನ ಕಚೇರಿ ಸೇರಿ ಒಟ್ಟು 30 ಶಾಖೆಗಳಿವೆ. ಒಟ್ಟು ?3701463757 ಕೋಟಿ ವಹಿವಾಟು ನಡೆಸಿದ್ದು. ?8 ಕೋಟಿ 52 ಲಕ್ಷ ರೂಪಾಯಿ  ಶೇರು ಬಂಡವಾಳವಿದೆ. 329806609ಕೋಟಿ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳಿದ್ದು ? ?3701463757 ಕೋಟಿ ದುಡಿಯುವ ಬಂಡವಾಳವಿದೆ. ರೂಪಾಯಿ 162 ಕೋಟಿ 42 ಲಕ್ಷ ರೂಪಾಯಿ   ಸಾಲ ವಿತರಿಸಲಾಗಿದ್ದು, ?1733 ಕೋಟಿ79 ಲಕ್ಷ ರೂಪಾಯಿ  ಗುಂತಾವಣೆಗಳಿದ್ದು, ಈ ಆರ್ಥಿಕ ವರ್ಷದ 31 ಮಾರ್ಚ್‌ 2024ರವರೆಗೆ ಸುಮಾರು 72 ಕೋಟಿ 71 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದರು. 

ಪ್ರಧಾನ ಕಾರ್ಯದರ್ಶಿ ಪ್ರದೀಪ್ ಮಗೆನವರ್ ಮಾತನಾಡಿ, ಗ್ರಾಹಕ ಸದಸ್ಯರು-ಆಡಳಿತ ಮಂಡಳಿ ಸಿಬ್ಬಂದಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಗ್ರಾಹಕರೇ ಬ್ಯಾಂಕಿನ ಆಧಾರಸ್ತಂಭ ಎಂದು ತಿಳಿಸಿದರು. 

ಸಂಸ್ಥೆಯ ಈ ವರ್ಷ ನೂರಕ್ಕೆ ನೂರರಷ್ಟು ಸಾಲು ವಸೂಲಾತಿಯಿದ್ದು ಈ ಆರ್ಥಿಕ ಸಾಲಿನಲ್ಲಿ ಹೆಚ್ಚಿನ ಆದಾಯ ಗಳಿಸಿದ ಮಾಂಜರಿ ಕಾಗವಾಡ ಹಾಗೂ ಹಾರೂಗೇರಿ ಶಾಖೆಯ ಶಾಖಾ ವ್ಯವಸ್ಥಾಪಕ ಹಾಗೂ ನೂರಕ್ಕೆ ನೂರು ಸಾಲ ವಸೂಲಾತಿ ಮಾಡಿದ ಮೂರು ಶಾಖೆಗಳ ಶಾಖಾ ವ್ಯವಸ್ಥಾಪಕ ಹಾಗೂ ಎಲ್ಲ ಶಾಖೆಯ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. 

ಸಂಸ್ಥೆಯ ಅಧ್ಯಕ್ಷ ಸತೀಶ್ ಮಗೆನವರ್ ಉಪಾಧ್ಯಕ್ಷ ಸದಾಶಿವ ಮರ್ಜಿ ನಿರ್ದೇಶಕರಾದ ಜಿನ್ನಪ್ಪ ಶೇಡಬಾಳೆ,  ಅಶೋಕ್ ಚಿಮಾಯಿ, ಭೀಮು  ಬೋಲೇ, ನೇಮಿನಾಥ ಪಟ್ಟಣಕೊಡಿ, ಅಪ್ಪಸಾಹೇಬ್ ಜಮದಾಡೇ, ಸುಭಾಷ್ ಮಗೆನವರ್, ಸಂಜಯ್ ಪಾಟೀಲ್, ವಿಲಾಸ್ ಚೌಹಾಣ್, ಇಲ್ಯಾಸ್ ಮುಲ್ಲಾ, ದತ್ತಾ ಬಾನೆ,  ಎನ್‌.  ಡಿ. ಪಾಟೀಲ್ ಸಂಸ್ಥೆಯ ಸಿಇಓ ಸಾಗರ್ ಮಂಗಸುಳೆ ಹಾಗೂ ಇನ್ನಿತರ ಸದಸ್ಯರು ಸಲಹಾ ಸಮಿತಿ ಸದಸ್ಯರು ಮತ್ತು ಕಾರ್ಮಿಕರು ಹಾಜರಿದ್ದರು. 

ಶೇ.99 ರಷ್ಟು ಸಾಲ ವಸೂಲಾತಿಯಾಗಿದ್ದು ಶೇ.25 ರಷ್ಟು ಲಾಭಾಂಶ ವಿತರಿಸಲಾಗಿದೆ. ಸಹಕಾರಿ ಕ್ಷೇತ್ರದೊಂದಿಗೆ ಸಹಕಾರಿ ಸಂಸ್ಥೆಯು ಶೈಕ್ಷಣಿಕ, ಸಾಮಾಜಿಕ ರಂಗದಲ್ಲಿಯೂ ಅನನ್ಯ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಜೊತೆಗೆ ಅನೇಕ ಜನಪರ, ಸದಸ್ಯ-ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿದೆ. ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ ಮತ್ತು ಸಿಬ್ಬಂದಿ ದಕ್ಷ, ಪ್ರಾಮಾಣಿಕ ಸೇವೆಯಿಂದ ಸಹಕಾರಿ ಸಂಸ್ಥೆ ಪ್ರಗತಿಯತ್ತ ಸಾಗಿದೆ. 

ಸತೀಶ್ ಮಗೆನ್ನವರ್ 

ಕೆ ಪಿ ಮಗ್ಗೆನ್ನವರ್ ಲಕ್ಷ್ಮಿ  ಸೌಹಾರ್ದ ಸಹಕಾರಿ ಸಂಸ್ಥೆಯ  ಅಧ್ಯಕ್ಷರು.