ಗೋಸ್ವಾಮಿ ನಾಗರಾಜ ಮಹಾಸ್ವಾಮಿಗಳ 5ನೇ ವರ್ಷದ ಪಾದಯಾತ್ರೆ
5th Annual Padayatra of Goswami Nagaraja Mahaswamy
ಬಳ್ಳಾರಿ 10: ನಗರದ ಕನಕದುರ್ಗಮ್ಮ ದೇವಸ್ಥಾನದಲ್ಲಿ 9ರಂದು ಭಾನುವಾರ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ ಕನಕ ದುರ್ಗಮ್ಮ ದೇವಸ್ಥಾನದಿಂದ ಜಾಲಿಬೆಂಚಿ ಗ್ರಾಮದ ಕೋದಂಡರಾಮ ದೇವಸ್ಥಾನದವರೆಗೆ 5ನೇ ವರ್ಷದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು.ಈ ಪಾದಯಾತ್ರೆಯಲ್ಲಿ ನೂರಾರು ಭಕ್ತಾದಿಗಳೊಂದಿಗೆ ತಾಳ ಮೇಳ ಭಜನೆಗಳ ವಾದ್ಯಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಗ್ರಾಮದೊಳಗೆ ತೆರಳಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಿದರು. ಹಮ್ಮಿಕೊಂಡ ವೇದಿಕೆ ಕಾರ್ಯಕ್ರಮದಲ್ಲಿ ಗೋಸ್ವಾಮಿ ನಾಗರಾಜ ಮಹಾಸ್ವಾಮಿಗಳವರಿಂದ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ 2025ನೇ ವರ್ಷದ ಕ್ಯಾಲೆಂಡರ್‌ನ್ನು ಬಿಡುಗಡೆ ಮಾಡಿದರು.
ಈ ವೇಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗೋಸ್ವಾಮಿ ನಾಗರಾಜ ಮಹಾಸ್ವಾಮಿಗಳವರು ಗ್ರಾಮಗಳಲ್ಲಿ ಸಕಲ ಕಾಲಕ್ಕೂ ಮಳೆ ಬೆಳೆ ಚೆನ್ನಾಗಿ ಬಂದು ರೈತರು ಎಲ್ಲೆಡೆ ಸಂತೋಷದಿಂದ ಇದ್ದು ಜನರು ನೆಮ್ಮದಿ ವಾತಾವರಣದಿಂದ ಬದುಕಲಿ ಎಂದು ಆಶೀರ್ವದಿಸಿದರು. ಮತ್ತು ಜಾಲಿಬೆಂಚಿ ಗ್ರಾಮವನ್ನು ಬಂಗಾರದ ಬೆಂಚೆ ಮಾಡುತ್ತೇನೆ ಎಂದು ಹೇಳಿದರು.
ಅದಕ್ಕಾಗಿ ಪ್ರತಿ ವರ್ಷ ಪಾದಯಾತ್ರೆ ಮೂಲಕ ಗ್ರಾಮಕ್ಕೆ ಆಗಮಿಸಿ ಸುತ್ತಮುತ್ತಲಿನಿಂದ ಗ್ರಾಮಗಳಿಂದ ಆಗಮಿಸುವ ಭಕ್ತಾದಿಗಳಿಗೆ ಆಶೀರ್ವದಿಸಿ ಶುಭ ಹಾರೈಸುತ್ತೇನೆ ಎಂದು ವೇದಿಕೆ ಮೇಲೆ ಸ್ವಾಮಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಸೈಯದ್ ಮಾನಸ ವಲಿ ಖಾದ್ರಿ ಹುಳುಕಲ್ಲು, ಸೈಯದ್ ಅಜರತ್ ಮೋಷನ್ ಖಾದ್ರಿ, ಮುತವಲ್ಲಿ ಸಜ್ಜದ ನಾಸಿನ್, ಹಜರತ್, ನರೇಂದ್ರಸ್ವಾಮಿ ಬಳ್ಳಾರಿ, ಬೆಂಗಳೂರು ಶಿವಲಿಂಗ ಎಲೆಕ್ಟ್ರಿಕಲ್, ಶಾಪುರ ಮಾಂತೇಶ ಉಲ್ಲೂರು, ತೆಕ್ಕಲಕೋಟೆ ಅಂಜಿನಪ್ಪ ಶರಣರು, ಹಾಗೂ ಊರಿನ ಮುಖಂಡರಾದ ಟಿ.ಮಲ್ಲಿಕಾರ್ಜುನ, ಬಾರಿಕರ ಹೊನ್ನೂರ ಸ್ವಾಮಿ, ನಾಗರೆಡ್ಡಿ, ಶೇಖಣ್ಣ, ರಾಧಾ ಗೌಡ, ತೋರಣಗಲ್ಲು ಗೋವಿಂದಪ್ಪ, ಸೇರಿದಂತೆ ಊರಿನ ಮುಖಂಡರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 