ಪತ್ರಿಕೋದ್ಯಮ, ರಂಗಭೂಮಿ, ಸಾಂಸ್ಕೃತಿಕ ಸಾಧನೆಗೆ 50 ವರ್ಷ: ರಮೇಶ್ ಸುವೇಗೆ ‘ಸುವರ್ಣ ಮಹೋತ್ಸವ’ ಅಭಿನಂದನೆ
50 Years of Achievements in Journalism, Theatre, and Culture: ‘Golden Jubilee’ Felicitations to Rame
ಕೊಪ್ಪಳ, ಆ.14: ಪತ್ರಿಕೋದ್ಯಮ, ರಂಗಭೂಮಿ, ಸಾಹಿತ್ಯ, ಚಲನಚಿತ್ರ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಐದು ದಶಕಗಳಿಂದ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಕೊಪ್ಪಳದ ಪ್ರತಿಭಾವಂತ ಬಹುಮುಖ ವ್ಯಕ್ತಿತ್ವದ ರಮೇಶ್ ಸುವೇ9 ಅವರ 50 ವರ್ಷಗಳ ಸಾಧನೆಯನ್ನು ಗೌರವಿಸಲು ಆಗಸ್ಟ್ 16ರಂದು ಕೊಪ್ಪಳದಲ್ಲಿ ‘ಸುವರ್ಣ ಮಹೋತ್ಸವ’ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.
ರಮೇಶ್ ಸುವೇ9 ಅವರು ಬಾಲ್ಯದಲ್ಲೇ ಸಾಂಸ್ಕೃತಿಕ ಚಟುವಟಿಕೆ, ನಾಟಕ ಮತ್ತು ಸಾಹಿತ್ಯ ಕ್ಷೇತ್ರಗಳತ್ತ ಆಸಕ್ತಿ ಬೆಳೆಸಿಕೊಂಡು ವಿವಿಧ ನಾಟಕ ಕಂಪನಿಗಳಲ್ಲಿ ನಟ ಹಾಗೂ ರಂಗಕರ್ಮಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ಬೆಂಗಳೂರಿಗೆ ತೆರಳಿ ಪತ್ರಿಕೋದ್ಯಮ, ಚಲನಚಿತ್ರ, ಸಾಂಸ್ಕೃತಿಕ ಸಂಘಟನೆ ಹಾಗೂ ಸಾಮಾಜಿಕ ಹೋರಾಟಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
‘ಸುವೇ9 ಪತ್ರಿಕೆ’, ‘ಇಂಜಿನಿಯರ್ಸ್ ಡೈರಿ’, ‘ಸುವೇ9 ನ್ಯೂಸ್ ಸೋರ್ಸ’ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿರುವ ಅವರು, ವಿಶ್ವೇಶ್ವರಯ್ಯ ಪ್ರತಿಷ್ಠಾನ ಮತ್ತು ಸುವೇ ಕಲ್ಚರಲ್ ಅಕಾಡೆಮಿ ಮೂಲಕ ಕರ್ನಾಟಕದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ್ದಾರೆ. 500ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳಿಗೆ ವಿಶ್ವೇಶ್ವರಯ್ಯ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಿರುವುದು ಅವರ ಸಾಂಸ್ಕೃತಿಕ ಸೇವೆಯ ಪ್ರಮುಖ ಸಾಧನೆಯಾಗಿದೆ.
ಅವರ ನೇತೃತ್ವದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ, ಕವಿ ಸಮ್ಮೇಳನ, ರಾಷ್ಟ್ರೀಯ ನಾಟಕ ಮೇಳ, ಕಲಾ ಪ್ರತಿಭೋತ್ಸವ, ವಿಚಾರ ಸಂಕಿರಣ ಹಾಗೂ ಪ್ರಶಸ್ತಿ ಪ್ರದಾನ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದಿವೆ. ಇದುವರೆಗೆ 250ಕ್ಕೂ ಹೆಚ್ಚು ನಾಟಕಗಳು, 18 ನಾಟಕೋತ್ಸವಗಳು ಮತ್ತು ರಾಷ್ಟ್ರಮಟ್ಟದ ರಂಗಭೂಮಿ ಕಲಾವಿದರ ಸಮಾವೇಶಗಳನ್ನು ಸಂಘಟಿಸಿರುವ ಹೆಗ್ಗಳಿಕೆ ಅವರದು.
ಸಾಹಿತ್ಯ ಕ್ಷೇತ್ರದಲ್ಲೂ ಸಕ್ರಿಯರಾಗಿರುವ ರಮೇಶ್ ಸುವೇ9 ಅವರು 16ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ಮಂದಾಕಿನಿ’ ಸೇರಿದಂತೆ ಚಲನಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ವಿಕ್ರಮ್ ಐಎಎಸ್’ ಚಿತ್ರಕ್ಕೂ ಚಿತ್ರಕಥೆ, ಸಂಭಾಷಣೆ, ಗೀತೆ ಮತ್ತು ನಿರ್ಮಾಣದ ಜವಾಬ್ದಾರಿ ನಿರ್ವಹಿಸಿದ್ದಾರೆ.
ಪತ್ರಿಕೋದ್ಯಮ ಹಾಗೂ ಸಂಘಟನಾ ಕ್ಷೇತ್ರದ ಸೇವೆಗಾಗಿ ಅವರಿಗೆ 52 ರಾಜ್ಯಮಟ್ಟದ ಹಾಗೂ 8 ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿವೆ. 120ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 