ಗ್ರಾಮದೇವಿ ಜಾತ್ರೆಯ ಬಳಿಕ 48 ದಿನಗಳ ವಿಶೇಷ ಪೂಜೆ ಸಂಪನ್ನ
48 days of special pujas complete after the Grama Devi Jatra
ಸವದತ್ತಿ : 45 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಅತ್ಯಂತ ಯಶಸ್ವಿಯಾಗಿ ಮೇ 4 ರಂದು ನೆರವೇರಿದ ಶ್ರೀ ದ್ಯಾಮವ್ವ ಮತ್ತು ದುರ್ಗವ್ವ ದೇವಿಯರ ಐತಿಹಾಸಿಕ ಗ್ರಾಮದೇವಿ ಜಾತ್ರಾ ಮಹೋತ್ಸವದ ಮುಕ್ತಾಯದ ಸಂಭ್ರಮದ ಅಂಗವಾಗಿ, ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ 48 ದಿನಗಳ ವಿಶೇಷ ಪೂಜಾ ಕಾರ್ಯಕ್ರಮಗಳು ಸೋಮವಾರ ಸಂಪನ್ನಗೊಂಡವು. ಈ ಧಾರ್ಮಿಕ ಕಾರ್ಯಕ್ರಮಗಳ ಸರಣಿಯ ಭಾಗವಾಗಿ ಶನಿವಾರ ದೇವಸ್ಥಾನದಲ್ಲಿ ವಿಶೇಷ ಹೋಮ ಮತ್ತು ಗೊಂಬಿ ಪೂಜೆಗಳನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶಾಸಕ ವಿಶ್ವಾಸ ವೈದ್ಯ ಅವರು ಪಾಲ್ಗೊಂಡು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ದಶಕಗಳ ನಂತರ ಅತ್ಯಂತ ವೈಭವೋಪೇತವಾಗಿ ನಡೆದ ಗ್ರಾಮದೇವಿ ಜಾತ್ರೆಯು ತಾಲೂಕಿನ ಸಮಸ್ತ ಭಕ್ತರ ಒಗ್ಗಟ್ಟಿನ ಪ್ರತೀಕವಾಗಿದೆ. ಇಂದು ನೆರವೇರಿದ ವಿಶೇಷ ಹೋಮ ಹಾಗೂ ಗೊಂಬಿ ಪೂಜೆಯು ದೇವಸ್ಥಾನದ ಪಾವಿತ್ರ್ಯತೆಯನ್ನು ಹೆಚ್ಚಿಸಿದೆ, ಎಂದರು.ತಾಯಿ ದ್ಯಾಮವ್ವ ಮತ್ತು ದುರ್ಗವ್ವ ದೇವಿಯ ದಿವ್ಯ ಅನುಗ್ರಹವು ತಾಲೂಕಿನ ಸಮಸ್ತ ಜನರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸಿದ ಅವರು, ನಾಡಿನಲ್ಲಿ ಸುಭಿಕ್ಷೆ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಹಾರೈಸಿದರು. ಅಶ್ವಥ್ ವೈದ್ಯ, ಭರಮಪ್ಪ ಅಣಿಗೇರಿ, ಶಿವಾನಂದ ಹೂಗಾರ, ಎನ್.ಸಿ.ಬೆಂಡಿಗೇರಿ,ಬಸವರಾಜ ಅರಮನಿ, ಮೈಲಾರ್ಪ ಹೊಸಮನಿ, ಮಂಜುನಾಥ ಪಾಚಂಗಿ, ಮಲ್ಲಿಕಾರ್ಜುನ ಬೇವೂರ,ಗೀರೀಶ್ ಮುನವಳ್ಳಿ, ಲಕ್ಷ್ಮಣ ಕುಲಕರ್ಣಿ, ಹಾಗೂ ಊರಿನ ಗಣ್ಯರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದರು.
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ
ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ಬಿಡುಗಡೆ; ಭರ್ಜರಿ ಆ್ಯಕ್ಷನ್ ಮತ್ತು ತೀವ್ರ ಕಥಾಹಂದರದ ಸುಳಿವು 