ಕಾರಂಜಿಮಠದಲ್ಲಿ 300ನೇ ವಿಶೇಷ ಶಿವಾನುಭವ ಕಾರ್ಯಕ್ರಮ

ಕಾರಂಜಿಮಠದಲ್ಲಿ 300ನೇ ವಿಶೇಷ ಶಿವಾನುಭವ ಕಾರ್ಯಕ್ರಮ 300th special Shivanubhav program at Karanji Math

ಲೋಕದರ್ಶನ ವರದಿ 

ಬೆಳಗಾವಿ 29: ಶಿವಬಸವನಗರ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ ಕಳೆದ 26 ವರ್ಷಗಳಿಂದ ಮಾಸಿಕವಾಗಿ ಜರುಗುತ್ತ ಬಂದ ಶಿವಾನುಭವ ಕಾರ್ಯಕ್ರಮದ 300ನೇ ವಿಶೇಷ ಕಾರ್ಯಕ್ರಮವು ಸೋಮವಾರ  1 ಜೂನ್ 2026ರಂದು ಸಾಯಂಕಾಲ 6 ಗಂಟೆಗೆ ಜರುಗುವುದು.  ಸಾನ್ನಿಧ್ಯವನ್ನು ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಸಭೆಯ ಅಧ್ಯಕ್ಷತೆಯನ್ನು ಖಡಕಲಾಟ ಕುಮಾರೇಶ್ವರ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳವರು ವಹಿಸುವರು. ಕಾರಂಜಿಮಠದ  ಗುರುಸಿದ್ದ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗುವುದು. ಯುವಯತಿಗಳೂ ವಾಗ್ನಿಗಳೂ ಆದ ತಾಳಿಕೋಟಿ ಖಾಸ್ಗತೇಶ್ವರಮಠದ ಉತ್ತರಾಧಿಕಾರಿ ಸಿದ್ಧಲಿಂಗ ದೇವರು ವಿಶೇಷ ಉಪನ್ಯಾಸ ನೀಡುವರು. ಕಾರಂಜಿಮಠದ ಕುಮಾರೇಶ್ವರ ಸಂಗೀತ ಪಾಠಶಾಲೆಯ ಮಕ್ಕಳಿಂದ ಪ್ರಾರ್ಥನೆ ಜರುಗುವುದು ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.