2ನೇ ರಾಜ್ಯ ಮಟ್ಟದ ಕನ್ನಡ ಸಮ್ಮೇಳನ ಹಾವೇರಿಯಲ್ಲಿ ಯಶಸ್ವಿ: ಎಸ್.ಡಿ. ಮುಡೆಣ್ಣವರಿಗೆ ಅಭಿನಂದನೆ
2nd State Level Kannada Conference Successful in Haveri: Congratulations to S.D. Mudenna
ಲೋಕದರ್ಶನ ವರದಿ
ಹಾವೇರಿ 08: ಇಲ್ಲಿನ ಡಾ.ಬಿ. ಆರ್ ಅಂಬೇಡ್ಕರ್ ಭವನದಲ್ಲಿ ಜರುಗಿದ 2ನೇ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಶಿಸ್ತು ಬದ್ಧವಾಗಿ ಹಾಗೂ ಎಲ್ಲ ಕನ್ನಡ ಪ್ರೇಮಿಗಳನ್ನು ಒಗ್ಗೂಡಿಸಿಕೊಂಡು ಯಶಸ್ವಿಗೊಳಿಸಲು ಶ್ರಮಿಸಿದ ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಂಸ್ಕ್ರತಿಕ ಬಳಗದ ರಾಜ್ಯಾಧ್ಯಕ್ಷರಾದ ಎಸ್.ಡಿ ಮುಡೆಣ್ಣವರ ಅವರಿಗೆ ಹಾಗೂ ಸಹಕಾರ ನೀಡಿದ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸಲಾಗುವುದು ಎಂದು 2ನೇ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿದ್ದ ಸಾಹಿತಿ ಜಿ.ಎಂ.ಓಂಕಾರಣ್ಣವರ ಹೇಳಿದರು.
ಹಾವೇರಿ ಜಿಲ್ಲಾ ಸಾಹಿತ್ಯ ಆಸಕ್ತ ಅಭಿಮಾನಿಗಳ ಬಳಗದ ವತಿಯಿಂದ ಮುಂಡಗೋಡ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ ಕರ್ನಾಟಕ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ವತಿಯಿಂದ ಹಾವೇರಿಯಲ್ಲಿ ಎರಡನೇ ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿದ್ದಕ್ಕೆ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಎಸ್.ಡಿ ಮುಡೆಣ್ಣವರ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂಡಗೋಡದಿಂದ ಎಸ್.ಡಿ.ಮುಡೆಣ್ಣವರ ಅವರು ತಮ್ಮ ಬಳಗದೊಂದಿಗೆ ಆಗಮಿಸಿ ಹಾವೇರಿಯಲ್ಲಿ ಹಲವು ಕಷ್ಟಗಳು ಅನುಭವಿಸಿ ಅತ್ಯಂತ ಸುಂದರವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟದಕ್ಕೆ ನಾನು ತುಂಬಾ ಆಭಾರಿಯಾಗಿದ್ದೇನೆ.ನನ್ನನ್ನು ಸರ್ವಾಧ್ಯಕ್ಷನಾಗಿ ಆಯ್ಕೆ ಮಾಡಿದ್ದಕ್ಕೆ ರಾಜ್ಯ ಸಮಿತಿ ಎಲ್ಲ ಸದಸ್ಯರಿಗೆ ಧನ್ಯವಾದಗಳು ಅರ್ಿಸುತ್ತೇನೆ ಎಂದರು.
ಮಾಜಿಶಾಸಕರಾದ ವಿ ಎಸ್ ಪಾಟೀಲ ಮಾತನಾಡಿ ಹಾವೇರಿಯಲ್ಲಿ ಕನ್ನಡ ಸಮ್ಮೇಳನ ಬಹಳ ಅಚ್ಚುಕಟ್ಟಾಗಿ ಮತ್ತು ಕನ್ನಡದ ಭಾಷೆಯ ಸೊಗಡು ಬಿಂಬಿಸುವ ಇದೊಂದು ಮಾದರಿ ಸಮ್ಮೇಳನವಾಗಿದೆ ಎಂದರು.ಮುಖಂಡರಾದ ಎಸ್ ಫಕ್ಕೀರ್ಪ,ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀಮತಿ ಸುಮಾ ಜಿ,ಮುಂಡಗೋಡ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಸಂತ ಕೊಣಸಾಲಿ.ಡಾ.ಪಿ.ಪಿ.ಛಬ್ಬಿ,ಉಡಚಪ್ಪ. ಮಾಳಗಿ,ಎಸ್.ಎಲ್.ಕಾಡದೇವರಮಠ ಮಾತನಾಡಿದರು.ಶ್ರೀ ಜಂಪಾ ಲೋಕ್ಸನ್ ಗುರೂಜಿ ಅವರು ಕನ್ನಡ ಭಾಷೆಯಲ್ಲಿ ಮಾತನಾಡಿ ಸಾಹಿತ್ಯದ ಕಾರ್ಯಕ್ರಮಗಳಿಗೆ ನಾನು ಭಾಗವಹಿಸುತ್ತೇನೆ.ಕನ್ನಡ ಭಾಷೆ ಬೆಳೆಯಲು ಕೆಲಸ ಮಾಡೋಣ ಎಂದರು.
ಬರಹಗಾರರಾದ ಗುಳಪ್ಪ ಅರಳಿಕಟ್ಟಿ ಪ್ರಾಸ್ತವಿಕ ಮಾತನಾಡಿದರು.ಪತ್ರಕರ್ತರಾದ ನಿಂಗಪ್ಪ ಆರೇರ ಕಾಐರ್ಕ್ರಮದ ಕೇಂದ್ರ ಬಿಂದು ಎಸ್.ಡಿ.ಮುಡೆಣ್ಣವರ ಪರಿಚಯ ಹಾಗ ಅವರ ಸಾಧನೆ ಕುರಿತು ಮಾತನಾಡಿದರುಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಾರುತಿ ಶಿಡ್ಲಾಪುರ ಮಾತನಾಡಿ ಹಾವೇರಿಯ ಸಮ್ಮೇಳನವು ರಾಜ್ಯಮಟ್ಟದ ಯಾವ ಸಮ್ಮೇಳನಕ್ಕೂ ಕಡಿಮೆ ಇರಲಿಲ್ಲ.ಬಳಗದ ಪ್ರಯಾಣ ಹೀಗೆ ಮುಂದುವರೆಯಲಿ.ಎಸ್.ಡಿ ಮುಡೆಣ್ಣವರ ಅವರಿಗೆ ಅಭಿನಂದನೆ ಸಲ್ಲಿಸಿ ಅವರ ಈ ಕನ್ನಡ ಸೇವೆಗೆ ನಾವು ಬೆಂಬಲವಾಗಿರುತ್ತೇವೆ ಎಂದರು
ರಾಜ್ಯಾಧ್ಯಕ್ಷರಾದ ಎಸ್.ಡಿ ಮುಡಣ್ಣವರ ಮತ್ತು ವೈಶಾಲಿ ಮುಡಣ್ಣವರ ದಂಪತಿಗಳಿಗೆ ಹಾವೇರಿ ಜಿಲ್ಲಾ ಸಾಹಿತ್ಯ ಆಸಕ್ತ ಅಭಿಮಾನಿಗಳ ಬಳಗದ ವತಿಯಿಂದ ಗೌರವಿಸಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.ನಂತರ ವಿವಿಧ ಸಂಘಟನೆ,ಹಿತೈಷಿಗಳು ಗೌರವಿಸಿದರು.ನಂತರ ರಾಜ್ಯಾಧ್ಯಕ್ಷರಾದ ಎಸ್.ಡಿ ಮುಡಣ್ಣವರ ಅವರು ಎಲ್ಲರ ಸಹಕಾರ ಸ್ಮರಿಸಿ,ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿ ಟಿ ಕಡೆಮನಿ, ಹುಲಗಪ್ಪ ಬೋವಿ ವಡ್ಡರ್,ಮಂಜುನಾಥ್ ಕಲಾಲ್,ಸುಭಾಷ್ ವಡ್ಡರ್ ವಾಸುದೇವ್ ಮಡ್ಲಿ,ಪಾಂಡುರಂಗ ಟಿಕ್ಕೋಜಿ,ರವಿ ಅಕ್ಕಿವಳ್ಳಿ,ಕೃಷ್ಣ ಗುಜಮಾಗಡಿ, ಸವಿತಾ ವರ್ಣೇಕರ್,ಮಧುಮತಿ ಹಿರೇಮಠ,ಜಗದೀಶ ಚಕ್ರಸಾಲಿ,ವಾಣಿಶ್ರೀ ನಾಗಮ್ಮನವರ,ನಟೇಶ್.ಬಿ.ಕೆ,ದುರ್ಗಪ್ಪ ಮುಡೇಣ್ಣವರ, ಶ್ರೀಮತಿ ಗಂಗಾ ಹೊಸಮನಿ,ಸ್ನೇಹ ಹಾಗೂ ಸಾನಿಯಾ ಪ್ರಣಮ್ಯಾ ಸೇರಿದಂತೆ ಅನೇಕರಿದ್ದರು..ಸಿ ಎನ್ ಸುರ್ಕೋಡ್ ಪ್ರಾರ್ಥಿಸಿದರು.ರಮೇಶ ಪವಾರ್ ಸ್ವಾಗತಿಸಿದರು ಬಾಲಚಂದ್ರ ಹೆಗಡೆ ನಿರೂಪಿಸಿದರು.ಯುವಸಾಹಿತಿ ಸಂತೋಷ ವಂದಿಸಿದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 