ಶಿಕ್ಷಣ ದಾಸೋಹಿ ಬಸಪ್ಪ ವಿ. ಭೂಮರಡ್ಡಿ ಅವರ 141ನೇ ಜಯಂತಿ

ಶಿಕ್ಷಣ ದಾಸೋಹಿ ಬಸಪ್ಪ ವಿ. ಭೂಮರಡ್ಡಿ ಅವರ 141ನೇ ಜಯಂತಿ 141st birth anniversary of education activist Basappa V. Bhumaraddy

ಲೋಕದರ್ಶನ ವರದಿ 

ಹುಬ್ಬಳ್ಳಿ 21: ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಉದಾರ ದೇಣಿಗೆ ನೀಡಿದ ಬಸವಾದಿ ಶರಣರ ದಾಸೋಹ ಪರಂಪರೆಯನ್ನು ಅಳವಡಿಸಿಕೊಂಡಿದ್ದ ಶಿಕ್ಷಣ ದಾಸೋಹಿ ಬಸಪ್ಪ ವಿ. ಭೂಮರಡ್ಡಿ ಅವರ 141ನೇ ಜಯಂತಿ ನಿಮಿತ್ತ ಕೆ.ಎಲ್‌.ಇ ಸಂಸ್ಥೆಯ ಬಿ.ವಿ.ಭೂಮರಡ್ಡಿ ಮಹಾವಿದ್ಯಾಲಯದ ಆವರಣದಲ್ಲಿರುವ, ಶಿಕ್ಷಣ ಪ್ರೇಮಿಗಳು, ಶ್ರೇಷ್ಟ ದಾನಿಗಳು, ಖ್ಯಾತ ಆಯಿಲ್ ಕಿಂಗ್ ಎಂದೆ ಹೆಸರಾಗಿದ್ದ, ಉದ್ದಮಿಗಳು, ಪರಮಪೂಜ್ಯರಾದ ಬಸಪ್ಪ ವಿ. ಭೂಮರಡ್ಡಿ ಅವರ ಆತ್ಯಾಕರ್ಷಕವಾದ ಕಂಚಿನ ಪುತ್ಥಳಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಪುಷ​‍್ಾರೆ್ಪಣ  ಮಾಡುವ ಮೂಲಕ ಗೌರವ ಅರೆ​‍್ಣ ಮಾಡಿ, ನಮನಗಳನ್ನು ಸಲ್ಲಿಸಲಾಯಿತು.  

ಬಸಪ್ಪ ವಿ.ಭೂಮರಡ್ಡಿ ಅವರು ಮಾಡಿದ ಸೇವಾ ಕಾರ್ಯಗಳನ್ನು ಸ್ಮರಿಸಲಾಯಿತು. ಸುಜಯ್ ಸುರೇಶ್ ಹೊರಕೇರಿ, ಸೋಹನ್ ಸುರೇಶ್ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಗಣ್ಯರು, ಮುಂತಾದವರು ಉಪಸ್ಥಿತರಿದ್ದರು.