ಇಂಚಲ ಗ್ರಾಮದಲ್ಲಿ ಕಾಮಗಾರಿ ವೇಳೆ ಪತ್ತೆಯಾದ 800 ವರ್ಷಗಳ ಹಳೆಯ 14 ಚಿನ್ನದ ನಾಣ್ಯಗಳು

ಇಂಚಲ ಗ್ರಾಮದಲ್ಲಿ ಕಾಮಗಾರಿ ವೇಳೆ ಪತ್ತೆಯಾದ 800 ವರ್ಷಗಳ ಹಳೆಯ 14 ಚಿನ್ನದ ನಾಣ್ಯಗಳು  14 gold coins dating back 800 years discovered during construction work in Inchal village


ಸವದತ್ತಿ 05  : ತಾಲೂಕಿನ ಇಂಚಲ ಗ್ರಾಮದ ಬಿ.ಸಿ.ಎಂ. ಹಾಸ್ಟೆಲ್ ಸಮೀಪ ವಿಬಿಜಿ ರಾಮ್ಜಿ ಯೋಜನೆಯಡಿ ಕಾಮಗಾರಿ ನಡೆಯುತ್ತಿದ್ದ ವೇಳೆ ಕೂಲಿಕಾರರಿಗೆ ನಿಧಿ ರೂಪದಲ್ಲಿ ಚಿನ್ನದ ನಾಣ್ಯಗಳು ದೊರೆತಿದ್ದು, ಅವುಗಳನ್ನು ಕೂಲಿಕಾರರು ಯಾವುದೇ ಪ್ರಲೋಭನೆಗೆ ಒಳಗಾಗದೆ ಪ್ರಾಮಾಣಿಕವಾಗಿ ಗ್ರಾಮ ಪಂಚಾಯಿತಿ ಕಚೇರಿಗೆ ಒಪ್ಪಿಸಿ ಮಾದರಿಯಾಗಿದ್ದಾರೆ.ಇಲ್ಲಿನ ತಹಶೀಲ್ದಾರ ಕಾರ್ಯಾಲಯದಲ್ಲಿ  ಶುಕ್ರವಾರ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಈ ನಾಣ್ಯಗಳನ್ನು ವಶಕ್ಕೆ ಪಡೆಯಲಾಯಿತು. ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ, ಇಂಚಲ ಗ್ರಾಮದ ಸರ್ವೇ ನಂಬರ್ 820ರ ಗಾಯರಾಣ ಜಮೀನಿನಲ್ಲಿ ಈ ನಾಣ್ಯಗಳು ಪತ್ತೆಯಾಗಿವೆ.  

ಈ ಕುರಿತು ಜಿಲ್ಲಾಧಿಕಾರಿ ಮಹಮ್ಮದ ರೋಷನ್ ಹಾಗೂ ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರವೀಣ ಜೈನ ಅವರಿಗೆ ದೂರವಾಣಿ ಮೂಲಕ ಸಮಗ್ರ ಮಾಹಿತಿ ನೀಡಲಾಗಿದ್ದು, ವರದಿ ಸಲ್ಲಿಸಿ ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಇಓ ಬಸವರಾಜ ಅಯ್ಯನಗೌಡ್ರ, ಪೌರಾಯುಕ್ತ ಸಂಗನಬಸಯ್ಯ ಗದಿಗಿಮಠ, ಮುನ್ನ ಅಪರಾಧ ವಿಭಾಗದ ಪಿಎಸ್‌ಐ ಲಕ್ಷ್ಮಣ ಗೌಡಿ, ಸಿಡಿಪಿಓ ಅಮೃತ ಸಾಣಿಕೊಪ್ಪ, ಶಿರಸ್ತೆದಾರ ಶಶಿರಾಜ ವನಕಿ, ಮಲ್ಲಿಕಾರ್ಜುನ ಕಂಬಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.