ಕಲಬುರಗಿಯಲ್ಲಿ ಕೊರೊನಾ ಸೋಂಕಿನಿಂದ 13 ಜನ ಗುಣಮುಖ
ಕಲಬುರಗಿ, ಮೇ 11, ಕೊರೊನಾ ಸೋಂಕಿನಿಂದ ಕಲಬುರಗಿ ನಗರದ 12 ಮತ್ತು ಆಳಂದ ಪಟ್ಟಣದ 65 ವರ್ಷದ ವೃದ್ಧೆ ಸೇರಿ ಒಟ್ಟು 13 ಜನ ಕೋವಿಡ್-19 ಪೀಡಿತರು ಸೋಂಕಿನಿಂದ ಗುಣಮುಖರಾಗಿ ರವಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾದ ನಂತರ ರವಿವಾರ ಪ್ರಥಮ ಬಾರಿಗೆ ಒಂದೇ ದಿನ ಇಷ್ಟೊಂದು ಗರಿಷ್ಠ ಪ್ರಮಾಣದಲ್ಲಿ ರೋಗಿಗಳು ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದರು.
ಜಿಲ್ಲೆಯ ಆಳಂದ ಪಟ್ಟಣದ 65 ವರ್ಷದ ವೃದ್ಧೆ (ರೋಗಿ ಸಂಖ್ಯೆ-502), ಕಲಬುರಗಿ ನಗರದ ಖಮರ್ ಕಾಲೋನಿಯ 7 ವರ್ಷದ ಬಾಲಕ(ರೋಗಿ ಸಂಖ್ಯೆ-503) ಮತ್ತು 40 ವರ್ಷದ ಯುವತಿ (ರೋಗಿ ಸಂಖ್ಯೆ-517) ಹಾಗೂ ಇಸ್ಲಾಮಾಬಾದ ಕಾಲೋನಿಯ 43 ವರ್ಷದ ಪುರುಷ (ರೋಗಿ ಸಂಖ್ಯೆ-517) ಮತ್ತು 28 ವರ್ಷದ ಯುವತಿ (ರೋಗಿ ಸಂಖ್ಯೆ-518) ಗುಣಮುಖರಾಗಿದ್ದಾರೆ.
ಅದೇ ರೀತಿ ಕಲಬುರಗಿಯ ಮೋಮಿನಪುರ ಪ್ರದೇಶದ 45 ವರ್ಷದ ಯುವತಿ (ರೋಗಿ ಸಂಖ್ಯೆ-519), 22 ವರ್ಷದ ಯುವತಿ (ರೋಗಿ ಸಂಖ್ಯೆ-520), 28 ವರ್ಷದ ಯುವಕ (ರೋಗಿ ಸಂಖ್ಯೆ-526), 14 ವರ್ಷದ ಬಾಲಕಿ (ರೋಗಿ ಸಂಖ್ಯೆ-527), 22 ವರ್ಷದ ಯುವಕ (ರೋಗಿ ಸಂಖ್ಯೆ-528), 20 ವರ್ಷದ ಯುವತಿ (ರೋಗಿ ಸಂಖ್ಯೆ-530), 17 ವರ್ಷದ ಬಾಲಕಿ (ರೋಗಿ ಸಂಖ್ಯೆ-531) ಹಾಗೂ 12 ವರ್ಷದ ಬಾಲಕಿ (ರೋಗಿ ಸಂಖ್ಯೆ-532) ಕೊರೊನಾ ಸೋಂಕಿನ ವಿರುದ್ಧ ಹೋರಾಡಿ ಚೇತರಿಕೆ ಕಂಡವರು ಎಂದು ಮಾಹಿತಿ ನೀಡಿದರು.ಇದರಿಂದ ಜಿಲ್ಲೆಯಲ್ಲಿ ಕೊರೊನಾ ಪೀಡಿತ 71 ರೋಗಿಗಳಲ್ಲಿ 44 ರೋಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 6 ಜನ ನಿಧನರಾಗಿದ್ದು, ಉಳಿದಂತೆ 21 ರೋಗಿಗಳಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 