ರಾಜ್ಯದಲ್ಲಿ 11 ಹೊಸ ಕೋವಿಡ್ ಪ್ರಕರಣ, 3 ಸಾವು, ಸೋಂಕಿತರ ಸಂಖ್ಯೆ 258ಕ್ಕೆರಿಕೆ
ಬೆಂಗಳೂರು, ಏ 14,ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 11 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮೂರು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 258ಕ್ಕೇರಿಕೆಯಾಗಿದ್ದು, 9 ಮಂದಿ ಮೃತಪಟ್ಟಂತಾಗಿದೆ. ಕಲಬುರಗಿಯ 55 ವರ್ಷದ ವೃದ್ಧ, ಬೆಂಗಳೂರು ನಗರದ 65 ವರ್ಷದ ವೃದ್ಧ, ವಿಜಯಪುರದ 69 ವರ್ಷದ ವೃದ್ಧ ಸೋಂಕಿಗೆ ಬಲಿಯಾಗಿದ್ದಾರೆ. ಬಾಗಲಕೋಟೆಯ 43 ವರ್ಷದ ಪುರುಷ ಮತ್ತು 32 ವರ್ಷದ ಮಹಿಳೆ, ಚಿಕ್ಕಬಳ್ಳಾಪುರದ 65 ವರ್ಷದ ವೃದ್ಧ, ಬಾಗಲಕೋಟೆಯ 39 ವರ್ಷದ ಮಹಿಳೆ, ಬೆಂಗಳೂರು ನಗರದ 65 ವರ್ಷದ ವೃದ್ಧ, ಹಿಂದುಪುರದಿಂದ ದ್ವಿಚಕ್ರವಾಹನದಲ್ಲಿ ಪ್ರಯಾಣ ಮಾಡಿದ ಬೆಂಗಳೂರಿನ 26 ವರ್ಷದ ವ್ಯಕ್ತಿ, ಕಲಬುರಗಿಯ 10 ವರ್ಷದ ಬಾಲಕಿ, 51ವರ್ಷದ ವೃದ್ಧ, 35 ವರ್ಷದ ಮಹಿಳೆ, ವಿಜಯಪುರದ 69 ವರ್ಷದ ವೃದ್ಧ, ಬೆಳಗಾವಿಯ 33 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದ ಬೆಂಗಳೂರು ನಗರದಲ್ಲಿ 80, ಮೈಸೂರಿನಲ್ಲಿ 48, ಬೆಳಗಾವಿಯಲ್ಲಿ 18, ಕಲಬುರಗಿಯಲ್ಲಿ 16 ಪ್ರಕರಣಗಳು ಪತ್ತೆಯಾಗಿವೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 