ದಾಖಲೆ ಇಲ್ಲದ 1.72 ಲಕ್ಷ ಹಣ ವಶಕ್ಕೆ

ಬಾಗಲಕೋಟೆ 19: ತೇರದಾಳ ಕಾಲುವೆ ನಂ4ರ ಹತ್ತಿರವಿರುವ ಚೆಕ್‌ಪೋಸ್ಟನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.72 ಲಕ್ಷ ರೂ.ಗಳ ಜೊತೆಗೆ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಸಹಾಯಕ ಚುನಾವಣಾಧಿಕಾರಿ ಸಾಜಿದ ಅಹಮದ ಅವರ ನೇತೃತ್ವದಲ್ಲಿ ವಾಹನೊಂದರ ತಪಾಸಣೆ ವೇಳೆಯಲ್ಲಿ ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1,72,900 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ತಪಾಸಣೆ ವೇಳೆಯಲ್ಲಿ ರಬಕವಿ-ಬನಹಟ್ಟಿ ತಹಶೀಲ್ದಾರ ಗೀರೀಶ ಸವದಿ, ತೇರದಾಳ ತಹಶೀಲ್ದಾರ ವಿಜಯಕುಮಾರ ಕಡಕೋಳ ಸೇರಿದಂತೆ ಇತರರು ಇದ್ದರು.