ಆತ್ಮ ನಿರ್ಭರ ಭಾರತವಾಗಲು ಸ್ವದೇಶಿ ವಸ್ತುಗಳನ್ನೇ ಬಳಸಿ
Use indigenous materials to become a self-reliant India
ಸವದತ್ತಿ 04: ದೇಶ ಆತ್ಮ ನಿರ್ಭರ ಭಾರತವಾಗಬೇಕಾದರೆ ನಾವು ಸ್ವದೇಶಿ ನಿರ್ಮಿತ ವಸ್ತುಗಳನ್ನೆ ಬಳಸಬೇಕು. ಇದರಿಂದ ಭಾರತದ ಆರ್ಥಿಕ ಸಂಪತ್ತು ಭಾರತದಲ್ಲೇ ಉಳಿಯುತ್ತದೆ ಎಂದು ವೈದ್ಯರು ಹಾಗೂ ಭಾರತೀಯ ಜನತಾ ಪಕ್ಷದ ಬೆಳಗಾವಿ ಜಿಲ್ಲಾ ಗ್ರಾಮಾಂತರ ಮಹಿಳಾ ಮೋರ್ಚಾದ ಅಧ್ಯಕ್ಷರು ಡಾ.ನಯನಾ ಭಸ್ಮೆ ಹೇಳಿದರು.
ಇಲ್ಲಿನ ಬೆಳ್ಳುಬ್ಬಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಐಕ್ಯೂಎಸಿ ಪ್ರೇರಿತ ಎನ್.ಎಸ್.ಎಸ್.ಘಟಕ ಆಯೋಜಿಸಿದ ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಏರಿ್ಡಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ ವೈವಿಧ್ಯಮಯ ಆಹಾರ, ವೇಷಭೂಷಣ, ಭಾಷೆ ಮತ್ತು ಜೀವನ ಪದ್ಧತಿಗಳು ಇವೆ. ಇವೆಲ್ಲವೂ ಆಯಾ ಪ್ರದೇಶದ ವಾತಾವರಣಕ್ಕೆ ಅನುಗುಣವಾಗಿ ರೂಪುಗೊಂಡಿರುತ್ತವೆ. ಇವೆಲ್ಲವುಗಳು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಬಹಳಷ್ಟು ಪ್ರಯೋಜನಕಾರಿಯಾಗಿವೆ ಎಂದರು.
ಡಾ.ಶೋಭಾ ನಿಸ್ಸಮಗೌಡ ಅವರು ಮಾತನಾಡಿ ನಾವು ಪಾಶ್ಚಾತ್ಯ ಜೀವನ ಶೈಲಿಗೆ ಮಾರುಹೋಗಿದ್ದೇವೆ. ಇಂದು ನಮ್ಮ ಆರೋಗ್ಯವೆಂಬುದು ಹದಗೆಡುತ್ತಿದೆ. ಚಿಕ್ಕವರಿರುವಾಗ ಹಲ್ಲುಜ್ಜಬೇಕಾದರೆ ಬೇವಿನ ಕಡ್ಡಿ ಅಥವಾ ಇದ್ದಿಲನ್ನು ಬಳಸುತ್ತಿದ್ದೆವು. ಇಂದು ಇವೆಲ್ಲವುಗಳನ್ನು ಬಿಟ್ಟು ಟೂಥ್‌ಪೇಸ್ಟ್ಗೆ ಮಾರುಹೋಗಿದ್ದೇವೆ. ಇದು ಒಂದು ಉದಾಹರಣೆ. ಇಂತಹ ಅನೇಕ ಉದಾಹರಣೆಗಳು ನಮಗೆ ಸಿಗುತ್ತವೆ. ಆದರೆ ನಾವು ನಮ್ಮ ಸ್ವದೇಶಿ ಪರಂಪರೆಯನ್ನು ಉಳಿಸಿ ಬೆಳೆಸುವ ಕಡೆ ಸಾಗಬೇಕಾಗಿದೆ ಎಂದರು.
ನರಸಿಂಹ ಕುಲಕರ್ಣಿ, ಪ್ರಾಚಾರ್ಯ ಡಾ.ಎನ್.ಆರ್.ಸವತಿಕರ, ರಾಜೇಶ್ವರಿ ಸಾಲಗಟ್ಟಿ, ಮೋಹನ್ ಬೆಣಚಮರ್ಡಿ, ಚೈತ್ರಾ ಸೊಟ್ನಾಳ, ಸಹನಾ ಬಾರ್ಕಿ, ಶ್ವೇತಾ ಕಾರಜೋಳ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 