ಅಸ್ವಚ್ಛತೆಯ ಆಗರ ಬಸಾಪೂರ ಪ್ರಾಥಮಿಕ ಶಾಲಾ ಆವರಣ

ಸ್ವಚ್ಛಗೊಳಿಸದಿದ್ದರೆ ಉಗ್ರ ಹೋರಾಟದ ರೈತ ಸಂಘ ಎಚ್ಚರಿಕೆ 

ಚನ್ನಮ್ಮನ ಕಿತ್ತೂರ 19: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಹಾಗೂ ಶೌಚಾಲಯವನ್ನು ಸ್ವಚ್ಛಗೊಳಿಸಬೇಕೆಂದು ಅವರಾದಿ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕ ಘಟಕದ ಸದಸ್ಯರು ಆಗ್ರಪಡಿಸಿದರು. 

ಸಮೀಪದ ಅವರಾದಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಸಾಪೂರ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಅಕ್ಕಪಕ್ಕದಲ್ಲಿ ತ್ಯಾಜ್ಯ ವಸ್ತುಗಳಿಂದ ಕಸ ಕಂಟಿಗಳಿಂದ ಕಂಗೊಳಿಸುತ್ತಿದೆ ಇದರಿಂದ ಶಾಲಾ ಮಕ್ಕಳಿಗೆ ಆರೋಗ್ಯದ ಮೇಲೆ ಪರಿಣಾಮವಾಗುವ ಸಾಧ್ಯತೆ ಇರುತ್ತದೆ. ಮತ್ತು ಇಲ್ಲಿ ಮಳೆ ನೀರು ಸಂಗ್ರಹವಾಗಿ ರಸ್ತೆಯ ಮೇಲೆ ನಿಂತಿರುತ್ತದೆ ಅದು ಮುಂದೆ ಹೋಗುತ್ತಿಲ್ಲ ಅಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ ಮತ್ತು ಶೌಚಾಲಯವಂತೂ ಪಾರ್ಥೆನಿಯಂ ಕಸದಿಂದ ಮುಚ್ಚಿ ಹೋಗಿದೆ ಅಲ್ಲಿ ಹುಳ ಹುಪ್ಪಡಿಗಳ ಹಾವಳಿಯಾಗುತ್ತದೆ ಮಕ್ಕಳು ಶೌಚಕ್ಕೆ ಹೋಗಲು ಹಿಂಜರಿಯುತ್ತಿದ್ದಾರೆ ಅದನ್ನು ತುರ್ತಾಗಿ ಸ್ವಚ್ಚಗೊಳಿಸುವ ಕೆಲಸವನ್ನು ಮಾಡಬೇಕು ಒಂದು ವೇಳೆ ಸ್ವಚ್ಛಗೊಳಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಮಂಜುನಾಥ ಹುದಲಿ, ಮಡಿವಾಳಯ್ಯ ಕೆರಿಮಠ, ಅಶೋಕ ಬಬಲಿ, ಗದಗಯ್ಯ ಶಿವಪೂಜಿಮಠ, ಅಶೋಕ ಎಮ್ಮಿ, ನಾಗಪ್ಪ ಎಮ್ಮಿ, ಮಡಿವಾಳೆಪ್ಪ ಬಡೆಲ್ಲಪ್ಪನವರ, ಪರವಯ್ಯ ಕೆರಿಮಠ, ಈರ​‍್ಪ ಎಮ್ಮಿ, ಮುಂತಾದವರು ಆಗ್ರಹಪಡಿಸಿದರು.