ಅವಳಿ ನಗರ ಪಲ್ಲಕ್ಕಿ ಬಸ್ ಸೇವೆ ಸ್ವಾಗತಾರ್ಹ
Twin city palanquin bus service welcomed
ಅವಳಿ ನಗರ ಪಲ್ಲಕ್ಕಿ ಬಸ್ ಸೇವೆ ಸ್ವಾಗತಾರ್ಹ
ಗದಗ 14 : ಇದೇ ಅಕ್ಟೋಬರ್ 17 ರಿಂದ ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಮುದ್ರಣ ನಗರಿ ಮಧ್ಯೆ ಹೈಟೇಕ್ ಸೌಲಭ್ಯಗಳನ್ನು ಹೊಂದಿರುವ ಪಲ್ಲಕ್ಕಿ ಬಸ್ ಸೇವೆ ಪ್ರತಿ ನಿತ್ಯ ಪ್ರಾರಂಭವಾಗಿರುವುದು ಸ್ವಾಗತಾರ್ಹ. ಜೊತೆಗೆ ಖಾಸಗಿ ಬಸಗಳು ಮನಸ್ಸೊ ಇಚ್ಚೆ ದರ ಬದಲಾವಣೆ ಬ್ರೇಕ್ ಹಾಕಲು ಕೊಂಚ ಮಟ್ಟಿಗೆ ಸಹಕಾರಿಯಾಗಲಿದೆ. ಆದರೇ ಗದಗ ಬೆಟಗೇರಿ ಅವಳಿ ನಗರದಲ್ಲಿ ಪ್ರಮುಖ ಸ್ಥಳವಾದ ರೈಲು ನಿಲ್ದಾಣದಿಂದ ನಗರ ಸಂಚಾರಕ್ಕೆ ಯಾವುದೇ ಬಸ್ ಸೇವೆಗಳು ಇಲ್ಲದಿರುವುದು ಖೇಧಕರ ಸಂಗತಿ. ದಿನವಿಡಿ ಗದಗ ರೈಲು ನಿಲ್ದಾಣಕ್ಕೆ ರಾಜ್ಯ, ಅಂತಾರಾಜ್ಯಗಳಿಂದ ಅನೇಕ ರೈಲುಗಳು ಬರುತ್ತವೆ ಆದರೆ ಖಾಸಗಿ ವಾಹನಗಳ ಸೌಲಭ್ಯವನ್ನು ಹೊರತು ಪಡಿಸಿ ಸರ್ಕಾರದ ನಗರ ಸಾರಿಗೆ ಸೇವೆ ಇಲ್ಲದಿರುವುದು ಪ್ರಯಾಣಿಕರ ಅನಾನುಕೂಲಕ್ಕೆ ಕಾರಣವಾಗಿದೆ. ಖಾಸಗಿ ವಾಹನಗಳ ಸೌಲಭ್ಯವಿದರು ಅದು ವಾಹನದಲ್ಲಿ ಪ್ರಯಾಣಿಸುವವರ ಪ್ರಯಾಣಿಕರ ಸಂಖ್ಯೆ ಮತ್ತು ಪ್ರಯಾಣದ ದರ ಅವರ ಇಚ್ಛೆಗೆ ಅನುಗುಣವಾಗಿ ನಡೆಯುತ್ತಿದೆ. ಇದು ಪ್ರಯಾಣಿಕರಿಗೆ ಆರ್ಥಿಕ ಹೊರೆಯಾಗಿದೆ. ಅವಳಿ ನಗರದಲ್ಲಿ ಸಂಚಾರಕ್ಕೆ ಕೆಲವೇ ಬಸ್ ಸೇವೆಗಳು ಲಭ್ಯವಿದ್ದು ಅದು ನಿರಂತರವಾಗಿ ಸಂಚರಿಸುವದಕ್ಕೆ ಇಲಾಖೆಯ ಸಹಕಾರ ಬೇಕಿದೆ. ರಾಜಧಾನಿ ಮಹಿಳೆಯರಿಗೆ ಸಿಗುವ “ಶಕ್ತಿ ಯೋಜನೆ” ಸೌಲಭ್ಯ ಸ್ಥಳೀಯ ಮಹಿಳೆಯರಿಗೆ ಸಂಪೂರ್ಣವಾಗಿ ಸಿಗದೆ ಇರುವುದು ಅಧಿಕಾರಿಗಳ ನಿಷ್ಕಾಳಜಿಗೆ ಕೈಗನ್ನಡಿಯಾಗಿದೆ. ಕೊಡಲೇ ಸಂಬಂಧಿಸಿದವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿ ಹಾಗೂ ಸಾರ್ವಜನಿಕ ಅನುಕೂಲ ಮಾಡಿ ಆರ್ಥಿಕ ಹೊರೆ ತಗ್ಗಿಸಲು ನಿರಂತರಾಗಬೇಕು ಎಂದು ಅರಿವು ಫೌಂಡೇಶನ್ ಅಧ್ಯಕ್ಷರಾದ ವಿಶ್ವನಾಥ ಶೀರಿ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 