ಬಣವೆಗಳಿಗೆ ಕಿಡಿ ತಗುಲಿ ಸಾವಿರಾರು ರೂ. ಮೌಲ್ಯದ ಹುಲ್ಲು ಭಸ್ಮ: ರೈತರಿಗೆ ಭಾರೀ ನಷ್ಟ
Thousands of rupees worth of grass burnt to ashes after a fire broke out in the haystacks: Huge los
ಮುಂಡಗೋಡ 11 : ಮುಂಡಗೋಡದಿಂದ ಹಿಯಲ್ಲಾಪುರ ಕಡೆಗೆ ಹೋಗುವ ರಸ್ತೆ ಪಕ್ಕದ ದೊಡ್ಡ ಕೆರೆಯ ಎಡಭಾಗದಲ್ಲಿರುವ ಮಲ್ಲೇಶಪ್ಪ ಹುದ್ಲಮನಿ ಅವರ ಹೊಲದಲ್ಲಿ ಸಂಗ್ರಹಿಸಿದ್ದ ಹುಲ್ಲಿನ ಬಣವೆಗಳಿಗೆ ಆಕಸ್ಮಿಕವಾಗಿ ಕಿಡಿ ತಗುಲಿ ಬೆಂಕಿ ಕಾಣಿಸಿಕೊಂಡ ಘಟನೆ ಬುಧವಾರ ಬೆಳಿಗ್ಗೆ 10.30ರಿಂದ 11 ಗಂಟೆಯೊಳಗೆ ನಡೆದಿದೆ. ಇದೇ ಸ್ಥಳದಲ್ಲಿ ಗಂಗಯ್ಯ ಹಿರೇಮಠ ಅವರಿಗೆ ಸೇರಿದ ಹುಲ್ಲಿನ ರೋಲ್ಗಳೂ ಬೆಂಕಿಗಾಹುತಿಯಾಗಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಉಂಟಾದ ಕಿಡಿಗಳು ಹುಲ್ಲಿನ ರಾಶಿಗೆ ತಗುಲಿದ ಪರಿಣಾಮ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದೆ. ಸ್ಥಳದಲ್ಲಿದ್ದ ಸುಮಾರು 200ಕ್ಕೂ ಹೆಚ್ಚು ಹುಲ್ಲಿನ ರೋಲ್ಗಳು ಹಾಗೂ ಪೆಂಡಿಗಳು ಸುಟ್ಟು ಕರಕಲಾಗಿವೆ.
ಗಂಗಯ್ಯ ಹಿರೇಮಠ ಅವರಿಗೆ ಸೇರಿದ ಸಂಗ್ರಹಿತ ಹುಲ್ಲಿನ ರೋಲ್ಗಳೂ ಸಂಪೂರ್ಣವಾಗಿ ನಾಶವಾಗಿವೆ. ಬೇಸಿಗೆ ಸಮಯದಲ್ಲಿ ಧನ- ಕರುಗಳಿಗೆ ಮೇವುಗಾಗಿ ಸಂಗ್ರಹಿಸಿಟ್ಟಿದ್ದ ಹುಲ್ಲು ಸುಟ್ಟು ಹೋದ ಕಾರಣ ರೈತರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಒಟ್ಟು ಸುಮಾರು 40,000 ರಿಂದ 50,000ರವರೆಗೆ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಪ್ರತಿ ಹುಲ್ಲಿನ ರೋಲ್ಗೆ ಸುಮಾರು 200 ವೆಚ್ಚವಾಗುತ್ತದೆ ಎಂದು ರೈತರು ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸಂಪೂರ್ಣವಾಗಿ ನಂದಿಸಿದರು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 