ಮತದಾನಕ್ಕೆ ಬ್ಯಾಲೆಡ್ ಪೇಪರ್ ಬಳಕೆ ಬಗ್ಗೆ ಚಿಂತನೆ : ಸಚಿವ ಮಂಕಾಳು ವೈದ್ಯ
Thinking about using ballot paper for voting: Minister Mankalu Vaidya
ಕಾರವಾರ 17: ಮುಂಬರುವ ಜಿಲ್ಲಾ ಪಂಚಾಯತ ,ತಾಲೂಕು ಪಂಚಾಯತ, ಗ್ರಾಮ ಪಂಚಾಯತ್ ಚುನಾವಣೆ ಒಟ್ಟಿಗೆ ನಡೆಸುವ ವಿಚಾರವೂ ಇದೆ , ಹಾಗೆಯೇ ಮತದಾನಕ್ಕೆ ಬ್ಯಾಲೆಡ್ ಪೇಪರ್ ಬಳಸುವ ಮನಸು ಪಕ್ಷಕ್ಕೆ ಇದೆ ಎಂದು ಮೀನುಗಾರಿಕಾ ಮತ್ತು ಬಂದರು ಸಚಿವ ಮಂಕಾಳು ವೈದ್ಯ ಹೇಳಿದರು. ಕಾರವಾರದ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಜಿಲ್ಲಾ ಪಂಚಾಯತ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯುತ್ತದೆ.ಗ್ರಾಮ ಪಂಚಾಯತಿ ಚುನಾವಣೆಗೆ ಚಿಹ್ನೆ ಇರಲ್ಲ. ಚುನಾವಣೆಯಲ್ಲಿ ಈ ಸಮಸ್ಯೆ ಎದುರಾಗಲಿದೆ . ಈ ಬಗ್ಗೆ ಪಕ್ಷ ಚಿಂತನೆ ಮಾಡಲಿದೆ ಎಂದರು. ಎಲೆಕ್ಟ್ರಾನಿಕ್ ಮತಯಂತ್ರದ ಬಗ್ಗೆ ನಮಗೆ ಅಂದರೆ ಪಕ್ಷಕ್ಕೆ ಅಷ್ಟು ಒಲವು ಇಲ್ಲ. ಆದರೆ ಎಲೆಕ್ಟ್ರಾನಿಕ್ ಯಂತ್ರದ ಮೇಲೆ ಹಣ ಹಾಕಲಾಗಿದೆ.ಅವು ವೇಸ್ಟ ಆಗಲಿವೆ ಎಂಬ ವಾದವೂ ಇದೆ. ಬ್ಯಾಲೆಡ್ ಪತ್ರ ಉತ್ತಮ ಎಂಬುದು ಕಾಂಗ್ರೆಸ್ ಪಕ್ಷದ ಪಕ್ಕದ ನಿಲುವು ಎಂದು ವೈದ್ಯ ಹೇಳಿದರು. ಗ್ಯಾರಂಟಿ ಯೋಜನೆಗಳು ದೇಶ ವಿದೇಶಗಳಲ್ಲಿ ಹೆಸರು ಮಾಡಿವೆ. ಅವೇ ಗ್ಯಾರಂಟಿ ಯೋಜನೆ ನಮ್ಮ ಪ್ರಣಾಳಿಕೆ ಆಗಲಿವೆ ಎಂದರು.
ಅವುಗಳನ್ನು, ಸರ್ಕಾರದ ಸಾಧನೆ ಮುಂದಿಟ್ಟು ಜಿಲ್ಲಾಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗೆ ಹೋಗುತ್ತೇವೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆದ ವೈದ್ಯ ಹೇಳಿದರು. ಸಚಿವ ಸಂಪುಟ ಪುನರ್ ರಚನೆ ಹೈಕಮಾಂಡ್ ನಿರ್ಧಾರ :ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಮಾಧ್ಯಮದಲ್ಲಿ ಚರ್ಚೆ ನಡೆದಿದೆ. ನಮಗೆ ಮಾಹಿತಿ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದರು. ಜನ ಹಾಗೂ ಪಕ್ಷ ಸಚಿವ ಸ್ಥಾನ ಕೊಟ್ಟಿದ್ದಾರೆ. ಅವರು ಹೇಳಿದಂತೆ ಕೇಳುವೆ ಎಂದರು. ನನ್ನ ಮಗಳು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಕೆಗೆ ಇನ್ನು 25 ವರ್ಷ ಆಗಿಲ್ಲ.
ಆಗಿದ್ದರೆ ಚುನಾವಣಾ ನೋಡುತ್ತಿದ್ದಳು. ಜನ ಬಯಸಿದಲ್ಲಿ ಮುಂದೆ ರಾಜಕೀಯಕ್ಕೆ ಬರಬಹುದು ಎಂದು ವೈದ್ಯ ಹೇಳಿದರು. ನಮ್ಮ ರಾಜೀವ್ ಗಾಂಧಿ 18 ವರ್ಷಕ್ಕೆ ಮತದಾನ ಹಕ್ಕು ನೀಡಿದರು . ಬಿಜೆಪಿ ಯವರು 21 ವರ್ಷದವರು ಎಲೆಕ್ಷನ್ ನಿಲ್ಲಬಹುದು ಎಂದು ಮಾಡಲಿ. ಆಗ ನನ್ನ ಮಗಳು ಚುನಾವಣೆಗೆ ನಿಲ್ಲುತ್ತಾಳೆ ಎಂದರು.ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಜಿಪಂ ಸಿಇಒ ದೀಲೀಷ್ ಶಶಿ , ಸಚಿವ ವೈದ್ಯರ ಜೊತೆ ಇದ್ದರು.....
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 