ಲೋಕದರ್ಶನ ವರದಿ
ಗಜೇಂದ್ರಗಡ 25: ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರು ರಚಿಸಿರುವ ಕೃತಿ ಅಮೂಲ್ಯವಾಗಿದ್ದು ಅದರಲ್ಲೂ ಹೇಮರೆಡ್ಡಿ ಮಲ್ಲಮ್ಮ ಕೃತಿ ವಿಶೇಷವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತ ತಾಲೂಕ ಅಧ್ಯಕ ಐಎ ರೇವಡಿ ಹೇಳಿದರು.
ಅವರು ಪಟ್ಟಣದ ಮೈಸೂರು ಮಠದಲ್ಲಿ ಜರುಗಿದ 154ನೇ ವಾರದ ಸಾಹಿತ್ಯ ಚಿಂತನಾಗೋಷ್ಠಿಯಲ್ಲಿ ಮಾತನಾಡುತ್ತಾ ಅಂಧ-ಅನಾಥರ ನೇರವಿಗಾಗಿಯೇ ಇದ್ದ ವೀರೇಶ್ವರ ಪುಣ್ಯಾಶ್ರಮದ ರೂವಾರಿಗಳಾಗಿ ಕಲೆ, ಸಾಹಿತ್ಯ, ಸಂಸ್ಕೃತಿಕ, ಸಂಗೀತ ಕ್ಷೇತ್ರಗಳನ್ನು ಉತ್ತರೋತ್ತರವಾಗಿ ಬೆಳಸಿ ಆ ಕಲಾವಿದರನ್ನು ನಾಡಿನಾದ್ಯಂತ ಪರಿಚಯಿಸಿದ ಕೀತರ್ಿ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಸಲ್ಲುತ್ತದೆ ಎಂದರು.
ಉಪನ್ಯಾಸವನ್ನು ಟಿಎಸ್. ರಾಜೂರ ನೀಡಿದರು. ಕಾರ್ಯಕ್ರಮದಲ್ಲಿ ಬಿ.ವಿ.ಮುನವಳ್ಳಿ, ಹೆಚ್. ಆರ್. ಭಜಂತ್ರೀ, ಮಹಾಂತೇಶ ಅಂಗಡಿ, ಕೆ.ಜಿ. ಸಂಗಟಿ, ಭೀಮಾಂಬಿಕಾ ನೂಲ್ವಿ, ಶೇಖರ ಅಂಗಡಿ, ಕೆ ಎಸ್ ಗಾರವಾಡಹಿರೇಮಠ, ಎಮ್.ಎಸ್. ಮಕಾನದಾರ, ಎಸ್.ಎಸ್. ನರೇಗಲ್,ಎಸ್. ಎಮ್. ಸಂಗಮದ, ಹುಚ್ಚಪ್ಪ ಹಾವೇರಿ, ಐ.ಆರ್. ಯಲಿಗಾರ ಸೇರಿದಂತೆ ಉಪಸ್ಥಿತರಿದ್ದರು.