ರಾಜ್ಯ ಸರ್ಕಾರ ಶಿಗ್ಗಾವಿ ಕ್ಷೇತ್ರವನ್ನು ದತ್ತು ಪಡೆದು ಅಭಿವೃದ್ಧಿಗೆ ಸಾಕಷ್ಟು ಹಣ ನೀಡುತ್ತಿದೆ. ಶಾಸಕ ಪಠಾಣ
The state government has adopted the Shiggavi constituency and is providing a lot of money for its
ಲೋಕದರ್ಶನ ವರದಿ
ಶಿಗ್ಗಾವಿ 08 : ಪಟ್ಟಣದ ರಾಣಿಚನ್ನಮ್ಮ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಯಾಸೀರಖಾನ ಪಠಾಣ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇಂದಿನ ಬಜೇಟ್ನಲ್ಲಿ ಶಿಶುವಿನಹಾಳ ಪ್ರತಿಷ್ಠಾನವನ್ನು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಪಟಾಕ್ಷಿ ಸಿಡಿಸಿ, ರಾಣಿ ಚನ್ನಮ್ಮ ಮೂರ್ತಿಗೆ ಮಾಲಾರೆ್ಣ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದರು.
ಶಾಸಕ ಯಾಸೀರಖಾನ ಪಠಾಣ ಮಾತನಾಡಿ, ರಾಜ್ಯ ಸರ್ಕಾರವು ಶಿಗ್ಗಾವಿ ಕ್ಷೇತ್ರವನ್ನು ದತ್ತು ಪಡೆದುಕೊಂಡು ಅಭಿವೃದ್ಧಿಗಾಗಿ ಸಾಕಷ್ಟು ಹಣವನ್ನು ನೀಡುತ್ತಿದೆ. ಈ ಭಾಗದ ಬಹುದಿನದ ಬೇಡಿಕೆಯಾದ ಶಿಶುವಿನಹಾಳ ಪ್ರತಿಷ್ಠಾನವನ್ನು ರಚಿಸುವ ಮೂಲಕ ಭಾವೈಕ್ಯತೆಯ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ. 36 ವಸತಿ ಶಾಲೆಗಳಿಗೆ ಶಂತ ಶಿಶುನಾಳ ಶರೀಫರ ಹೆಸರನ್ನು ಇಡುವ ಮೂಲಕ ಅವರ ಕೀರ್ತಿಯನ್ನು ಹೆಚ್ಚಿಸಿದೆ.
ಒನ್ ಡಿಸ್ಟಿಕ್ ಒನ್ ಡೆಸ್ಟಿನೇಶನ್ ಯೋಜನೆಯಡಿ ಶಿಶುವಿನಹಾಳವನ್ನು ಆಯ್ಕೆ ಮಾಡಲಾಗಿದ್ದು 50 ಕೋಟಿ ಅನುಧಾನವನ್ನು ನೀಡಲಾಗಿದೆ. ಈ ಪ್ರಾಧಿಕಾರದಿಂದಲೂ 50 ಕೋಟಿ ಹಣವನ್ನು ತಂದು ಶಿಶುವಿನಹಾಳವನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಲಾಗುತ್ತದೆ. ಶರೀಫರ ಹೆಸರಲ್ಲಿ 31 ಕೋಟಿ ವೆಚ್ಚದ ವಸತಿ ಶಾಲೆಯನ್ನು ಅದೇ ಗ್ರಾಮದಲ್ಲಿ ಪ್ರಾರಂಭಿಸುತ್ತೇವೆ. ಇಂದಿನ ಬಜೇಟ್ಟಿನಲ್ಲಿ ಕ್ಷೇತ್ರಕ್ಕೆ ಒಂದು ಕಾರ್ಮಿಕರ ವಸತಿ ಶಾಲೆ, ಒಂದು ಮೈನಾರಿಟಿ ಶಾಲೆ ಮತ್ತು ನೂರಾರು ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಮುಗಳನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಿದಾರೆ.
ನಾನು ಒಬ್ಬ ಸಣ್ಣ ಶಾಸಕನಾಗಿ ಕ್ಷೇತ್ರದಲ್ಲಿ ಶಿಸುನಾಳ ಪ್ರತಿಷ್ಠಾನ ಘೋಷಿಸುವ, 400 ದೇವಸ್ಥಾನ ಅಭಿವೃದ್ಧಿಗೊಳಿಸುವ, 310 ಕೋಟಿ ವೆಚ್ಚದಲ್ಲಿ ಸವಣೂರ ಕುಡಿಯುವ ನೀರಿನ ಯೋಜನೆಯನ್ನು ತರುವಲ್ಲಿ ಮತ್ತು ಕನಕದಾಸರ ಅತ್ಯಂತ ಪ್ರಿಯವಾದ ಗುಡ್ಡದ ಚನ್ನಾಪುರವನ್ನು 15 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಗೊಳಿಸುವ ಭಾಗ್ಯ ಸಿಕ್ಕಿದ್ದು, ನಮ್ಮ ಅಭಿವೃದ್ದಿ ಕಾರ್ಯವನ್ನು ಟೀಕಿಸುವವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ದ ಎಂದು ಹೇಳಿದರು.
ನಾನು ಮೊದಲ ಬಾರಿಗೆ ಶಾಸಕನಾಗಿದ್ದು, ಅನುಧಾನವನ್ನು ತರುವಲ್ಲಿ ಸಾಕಷ್ಟು ಸಚಿವರನ್ನು ಬೇಟಿಯಾಗಿ ಬೇಡಿಕೆಗಳನ್ನು ಸಲ್ಲಿಸಿ ಕ್ಷೇತ್ರಕ್ಕೆ ಅನುದಾನ ತರುತ್ತಿದ್ದೇನೆ. ಈ ಹಿಂದೆ ಇದೆ ಕ್ಷೇತ್ರದ ಶಾಸಕರು ಮುಖ್ಯಮಂತ್ರಿಯಾಗಿದ್ದು, ಅವರ ಬೆರಳ ತುದಿಯಲ್ಲಿ ಸಾಕಷ್ಟು ಅಭಿವೃದ್ದಿ ಮಾಡುವ ಅವಕಾಶವಿತ್ತು ಆದರೆ ಇಲ್ಲಿಯ ಜನರ ಸೇವೆಯನ್ನು ಮಾಡುವ ಭಾಗ್ಯ ನನಗೆ ಸಿಕ್ಕಿರುವುದು ಸಂತೋಷವನ್ನು ನೀಡುತ್ತಿದ್ದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಶಿಶುನಾಳಧೀಶನ ಭಕ್ತರು, ಸಾರ್ವಜನಿಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 