ಪೇಟಿಎಂನಲ್ಲಿ ಬೆರಳ ತುದಿಯಲ್ಲಿ ಫಾಸ್ಟ್ ಟ್ಯಾಗ್ ಪಡೆಯಲು ಅವಕಾಶ
PAYTM
ಬೆಂಗಳೂರು, ನ.28 - ಡಿಸೆಂಬರ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಪೇಟಿಎಂ ತನ್ನ ವೇದಿಕೆ ಮೂಲಕ ಫಾಸ್ಟ್ ಟ್ಯಾಗ್ ಮಾರಾಟಕ್ಕೆ ಚಾಲನೆ ನೀಡಿದೆ. ವಿತರಣಾ ವೆಚ್ಚವನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮನ್ನಾ ಮಾಡಿದೆ. ಕೇವಲ 400 ರೂ ಪಾವತಿ ಮಾಡುವುದರ ಮೂಲಕ ಪೇಟಿಎಂ ಫಾಸ್ಟ್ ಟ್ಯಾಗ್ ಖರೀದಿಸಬಹುದು.
ಪಾವತಿಸಿದ 400 ರೂ.ನಲ್ಲಿ 250 ರೂ ಭದ್ರತಾ ಶುಲ್ಕ ಮತ್ತು 150 ರೂ ಮಿನಿಮಮ್ ಬ್ಯಾಲೆನ್ಸ್ ಆಗಿರುತ್ತದೆ. ಗ್ರಾಹಕರ ಖಾತೆಯಲ್ಲಿ ಈ ಹಣ ಇರುತ್ತದೆ. ಗ್ರಾಹಕರು ಪೇಟಿಎಂ ಆ್ಯಪ್ ಹಾಗು ವೆಬ್ ಸೈಟ್ ಮೂಲಕವು ಸಹ ಪೇಟಿಎಂ ಫಾಸ್ಟ್ ಟ್ಯಾಗ್ ಅನ್ನು ಖರೀದಿಸಬಹುದು.
ಉಚಿತವಾಗಿ ನಿಮ್ಮ ಮನೆ ಬಾಗಿಲಿದೆ ಫಾಸ್ಟ್ ಟ್ಯಾಗ್ ಅನ್ನು ತಲುಪಿಸಲಾಗುತ್ತದೆ. ವಾಹನದ ನೋಂದಣಿ ಪತ್ರ ಸ್ಕ್ಯಾನ್ ಮಾಡಿ ಸಲ್ಲಿಸಿದ ನಂತರ ಈ ಫಾಸ್ಟ್ ಟ್ಯಾಗ್ ಅನ್ನು ಆ್ಯಕ್ಟಿವೇಟ್ ಮಾಡಲಾಗುವುದು. ಯುಪಿಐ ಅಥವಾ ಬ್ಯಾಂಕ್ ಅಕೌಂಟ್ ಬಳಸಿ ಪೇಟಿಎಂ ವ್ಯಾಲೆಟ್ ಮೂಲಕ ಫಾಸ್ಟ್ ಟ್ಯಾಗ್ ಅನ್ನು ರಿಚಾರ್ಜ್ ಮಾಡಿಕೊಳ್ಳಬಹುದು.
ಪೇಟಿಎಂ ಫಾಸ್ಟ್ ಟ್ಯಾಗ್ ಬಳಸಿದರೆ 2019-20 ರ ಅವಧಿಯಲ್ಲಿ ಎಲ್ಲಾ ಟೋಲ್ ಗೇಟ್ ಗಳಲ್ಲಿ ಶೇಕಡ 2.5 ರಷ್ಟು ಕ್ಯಾಶ್ ಬ್ಯಾಕ್ ಕೂಡ ಲಭ್ಯವಾಗಲಿದೆ. ಉಚಿತ ಸಿನಿಮಾ ಟಿಕೆಟ್ ಗೆಲ್ಲುವ ಅವಕಾಶ ಕೂಡ ಇದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 