ಮಕ್ಕಳಿಗೆ ಶಿಕ್ಷಣದ ಜೊತೆಗೆ ಭವಿಷ್ಯದಲ್ಲಿ ಎಲ್ಲ ರೀತಿಯ ಅನುಕೂಲಕರ ದೊರಕಿಸುವುದು ಬಿಎಎಸ್ ಶಿಕ್ಷಣ ಸಂಸ್ಥೆ ಗುರಿ
ಮುದ್ದೇಬಿಹಾಳ 11 : ಮಕ್ಕಳಿಗೆ ಶಿಕ್ಷಣದ ಜೊತೆಗೆ ಭವಿಷ್ಯದಲ್ಲಿ ಎಲ್ಲ ರೀತಿಯ ಅನುಕೂಲಕರ ದೊರಕಿಸಿಕೊಡುವಲ್ಲಿ ಬಿಎಎಸ್ ಶಿಕ್ಷಣ ಸಂಸ್ಥೆ ಗುರಿಯನ್ನು ಹೊಂದಿದೆ. ಗುಣಮಟ್ಟದ ಶಿಕ್ಷಣವು ಪ್ರತಿಯೊಬ್ಬ ವಿದ್ಯಾವಂತ ಮಕ್ಕಳಿಗೆ ದೊರಕಬೇಕು ಎನ್ನುವ ನಿಟ್ಟಿನಲ್ಲಿ ಬಿಎಎಸ್ ಟ್ಯಾಲೆಂಟ್ ಅವಾರ್ಡ ಪರೀಕ್ಷೆಯನ್ನು ಸಂಸ್ಥೆಯು ನಡೆಸಿದ್ದ ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕು ಎಂದು ಶಾಲಾ ಪ್ರೀನ್ಸಿಪಾಲ್ ರಶಿಕಾ ನಾಯ್ಕ, ಉಪ ಪ್ರಿನ್ಸಿಪಾಲ್ ಅಲ್ಮಾನ ಕೆ ಹೇಳಿದರು.ತಾಲೂಕಿನ ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಎಎಸ್ ಶಾಲೆಯಲ್ಲಿ ಈಗಾಗಲೇ ಉನ್ನತಮಟ್ಟದ ಶಿಕ್ಷಣ ನೀಡುವಲ್ಲಿ ನಮ್ಮ ಶಾಲಾ ವ್ಯವಸ್ಥಾಪಕರು ಎಲ್ಲರೀತಿಯ ಅನುಕೂಲ ಮಾಡಿಕೊಟ್ಟಿದ್ದಾರೆ.
ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಸಿಬಿಎಸ್ಸಿ ಶಾಲೆಯನ್ನು ತೆರೆದು ಪ್ರತಿಯೊಬ್ಬ ಗ್ರಾಮೀಣ ಮಕ್ಕಳಿಗೆ ಉನ್ನತಮಟ್ಟದ ಶಿಕ್ಷಣ ದೊರಕಿಸಿಕೊಡಬೇಕು ಎನ್ನುವುದೇ ಸಂಸ್ಥೆಯ ಮುಖ್ಯಗುರಿಯಾಗಿದೆ ಎಂದು ಅವರು ಹೇಳಿದರು.ಬಿಎಎಸ್ ಟ್ಯಾಲೆಂಟ್ ಅವಾರ್ಡ ಪರೀಕ್ಷೆ:ಫೆ.22 ಭಾನುವಾರ ಬೆಳಿಗ್ಗೆ 10 ಗಂಟೆಗೆ ಪರೀಕ್ಷೆ ನಡೆಯಲಿದ್ದು ಅರ್ಜಿ ಸಲ್ಲಿಸಲು ಫೆ.21 ಕೊನೆಯ ದಿನಾಂಕವಾಗಿದೆ. ಅರ್ಜಿಗಳನ್ನು ನಮ್ಮ ಶಾಲೆಯ ಅಧಿಕೃತ ವೆಬ್ಬಸೈಟ್ ಮೂಲಕ ಸಲ್ಲಿಸಬಹುದಾಗಿದ್ದು ಅಲ್ಲದೇ ಅರ್ಜೀಗಳ ನೊಂಧಣಿಗಾಗಿ 9035054453,9035054454,7760333143,9035054450 ದೂರವಾಣಿಗೆ ಕರೆಮಾಡಿ ನೊಂಧಣಿ ಮಾಡಬಹುದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಬಿರಾದಾರ ತಿಳಿಸಿದರು.
ರೀಯಾಯಿತಿ ಜೊತೆಗೆ ಗೌರವ:ಬಿಎಎಸ್ ಟ್ಯಾಲೆಂಟ್ ಅವಾರ್ಡ ಪರೀಕ್ಷೆಯಲ್ಲಿ ಭಾಗಿಯಾಗಿ ರ್ಯಾಂಕ್ ಪಡೆಯುವ ಮಕ್ಕಳಿಗೆ ಶಾಲಾ ಫೀ ಜೊತೆಗೆ ಪ್ರತಿ ವಿಭಾಗದಲ್ಲೂ 10 ಸಾಧಕರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ. ಪರೀಕ್ಷೆಯಲ್ಲಿ 1 ರಿಂದ 10 ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಶಾಲಾ ಫಿಯಲ್ಲಿ ಶೇ.20ರಷ್ಟು, 11 ರಿಂದ 20ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಶೇ.15ರಷ್ಟು ರೀಯಾಯಿತಿ, 21 ರಿಂದ 30 ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಹಾಗೂ 31 ರಿಂದ 40ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಶಾಲಾ ಫೀನಲ್ಲಿ ಶೇ,5ರಷ್ಟು ರೀಯಾಯಿತಿಯು ದೊರಕಲಿದೆ ಎಂದು ಶಾಲಾ ಆಢಳಿತಾಧಿಕಾರಿ ಪ್ರಭುಗೌಡ ಬಿರಾದಾರ ಹೇಳಿದರು.