ವೆಬ್ಸೈಟ್ ಆರಂಭಿಸಿದ ಮೊದಲ ಜಿಲ್ಲಾಡಳಿತ

ಧಾರವಾಡ 03: ಕೋವಿಡ್-19 ಲಾಕ್ಡೌನ್ ಅವಧಿಯಲ್ಲಿ  ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಅಗತ್ಯ ಸೇವೆಗಳ ಪೂರೈಕೆ ಕುರಿತು ಒಂದೇ ವೇದಿಕೆಯ ಮೂಲಕ ಜಿಲ್ಲಾಡಳಿತವನ್ನು ಸಂಪಕರ್ಿಸಿ ಅದರ ನೆರವು ಪಡೆಯಲು ಅನುಕೂಲವಾಗುವಂತೆ ಧಾರವಾಡ ಜಿಲ್ಲಾಡಳಿತ ರೂಪಿಸಿರುವ ನೂತನ ತಿತಿತಿ.ಣಠಿಠಿಠಡಿಣಜಚಿಡಿತಿಚಿಜ.ಟಿ ವೆಬ್ಸೈಟ್ನ್ನು ಬೃಹತ್ ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಲೋಕಾರ್ಪಣೆ ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ವೆಬ್ಸೈಟ್ ಅನಾವರಣಗೊಳಿಸಿದ ಸಚಿವರು ಕಾಯಿಪಲ್ಯ, ಕಿರಾಣಿ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳನ್ನು ಗ್ರಾಹಕರ ಮನೆಗಳಿಗೆ ಪೂರೈಸುವ ವ್ಯಾಪಾರಿಗಳು ಈ ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಅವಳಿ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ವ್ಯಾಪಾರಿಗಳಿಗೂ ಈ ಅವಕಾಶ ವಿಸ್ತರಿಸಲಾಗಿದೆ. ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಗ್ರಾಹಕರು ಆನ್ಲೈನ್ ವೆಬ್ಸೈಟ್ ಅಥವಾ ವಾಟ್ಸ್ಆಪ್ ಮೂಲಕ ತಮ್ಮ ಅಗತ್ಯ ವಸ್ತುಗಳ ಪೂರೈಕೆಗೆ ಆದೇಶ ನೀಡಬಹುದು. ಆದೇಶ ನೀಡಿದ 36 ಗಂಟೆಗಳೊಳಗೆ ವಸ್ತುಗಳು ಗ್ರಾಹಕರ ಮನೆ ಬಾಗಿಲಿಗೆ ತಲುಪುತ್ತವೆ. ತುತರ್ು ಸಂದರ್ಭದಲ್ಲಿ ಸಂಪಕರ್ಿಸಬೇಕಾದ ವಿವರಗಳು ಇಲ್ಲಿ ಲಭ್ಯ ಇವೆ. ಸುದ್ದಿ, ಹಿಮ್ಮಾಹಿತಿ ದೊರೆಯುತ್ತವೆ. ಹೊಸ ಹೊಸ ಮಾಹಿತಿಗಳನ್ನು ಇಲ್ಲಿ ಅಪ್ಡೇಟ್ ಮಾಡಲಾಗುತ್ತದೆ ಎಂದು ವಿವರಿಸಿದರು. ಕೋವಿಡ್-19ನ್ನು ತಡೆಯಲು ಲಾಕ್ಡೌನ್ ಅವಧಿಯಲ್ಲಿ ಸಾರ್ವಜನಿಕರಿಗೆ ಅಗತ್ಯ ಸೇವೆ ಒದಗಿಸಲು ಜಿಲ್ಲೆಯೊಂದು ವೆಬ್ಸೈಟ್ ಆರಂಭಿಸಿರುವ ಕಾರ್ಯದಲ್ಲಿ ಧಾರವಾಡ ಮೊದಲ ಸ್ಥಾನದಲ್ಲಿದೆ. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಧಾರವಾಡ ಬಿಆರ್ಟಿಎಸ್ನ ಜನರಲ್ ಮ್ಯಾನೇಜರ್ ಗಣೇಶ ರಾಠೋಡ್, ಶಗುಫ್ತಾ ಮುಲ್ಲಾ, ಮಂಜುನಾಥ ಮತ್ತಿತರರ ತಂಡ ಈ ವೆಬ್ಸೈಟ್ನ್ನು ರೂಪಿಸಿ, ನಿರ್ವಹಿಸುತ್ತಿದೆ.