ಅನುವಾದದ ಅಂತಿಮ ಗುರಿ ಅನುಸೃಷ್ಟಿ: ಡಾ.ಆರ್.ಕೆ. ಕುಲಕರ್ಣಿ
The Ultimate Goal of Translation is Recreation: Dr. R.K. Kulkarni
ವಿಜಯಪುರ 08 : ಅನುವಾದವೆಂದರೆ ಕೇವಲ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ತರ್ಜುಮೆ ಮಾಡುವುದಲ್ಲ; ಅದು ಅನುಸೃಷ್ಟಿಯ ಸೃಜನಶೀಲ ಕ್ರಿಯೆಯಾಗಿದೆ ಎಂದು ಹಿರಿಯ ವಿದ್ವಾಂಸ ಡಾ.ಆರ್.ಕೆ. ಕುಲಕರ್ಣಿ ಅಭಿಪ್ರಾಯಪಟ್ಟರು. ನಗರದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಡಾ.ಚನ್ನಪ್ಪ ಕಟ್ಟಿ ಅವರ ‘ಐರಿಶ್ ಜನಪದ ಕತೆಗಳು’ ಮತ್ತು ‘ಪ್ರತಿನುಡಿ’ ಕೃತಿಗಳನ್ನು ಲೋಕಾರೆ್ಣಗೊಳಿಸಿ ಅವರು ಮಾತನಾಡಿದರು. ವಿಶ್ವದಾದ್ಯಂತದ ಜನಪದ ಕತೆಗಳು ಸಾಮಾನ್ಯ ಆಶಯಗಳನ್ನು ಹೊಂದಿದ್ದು, ‘ಐರಿಶ್ ಜನಪದ ಕತೆಗಳು’ ಇದನ್ನು ಸಮರ್ಥಿಸುತ್ತವೆ ಎಂದರು. ಪ್ರತಿನುಡಿ ಕೃತಿಯ ಪರಿಚಯ ಮಾಡಿದ ವಿಶ್ರಾಂತ ಪ್ರಾಚಾರ್ಯ ಡಾ.ಜಿ.ಆರ್.ಕುಲಕರ್ಣಿ, ಕಟ್ಟಿ ಅವರ ವ್ಯಾಪಕ ಅಧ್ಯಯನ ಹಾಗೂ ಸಮಚಿತ್ತದ ವಿಮರ್ಶೆಗೆ ಈ ಕೃತಿ ಉತ್ತಮ ಮಾದರಿಯಾಗಿದೆ ಎಂದು ಹೇಳಿದರು. ನೆಲೆ ಪ್ರಕಾಶನದ ಸಂಸ್ಥಾಪಕ ಸದಸ್ಯ ಡಾ.ಎಂ.ಎಂ.ಪಡಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್.ಮದಭಾವಿ ಅಧ್ಯಕ್ಷತೆ ವಹಿಸಿದ್ದರು. ಚಿದಂಬರ ಬಂಡಗರ ಸ್ವಾಗತಿಸಿದರು. ದೇವೂ ಮಾಕೊಂಡ ವಂದಿಸಿದರು. ಡಾ.ಎಸ್.ಕೆ.ಕನ್ನೂರ ಕಾರ್ಯಕ್ರಮ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 