ಶ್ರಮ ಮತ್ತು ಛಲವಿದ್ದರೆ ಸಾಧನೆ ಸಾಧ್ಯ: ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ
Success is possible with hard work and determination: Deputy Commissioner Somalinga Gennur
ಶ್ರಮ ಮತ್ತು ಛಲವಿದ್ದರೆ ಸಾಧನೆ ಸಾಧ್ಯ: ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ
ತಾಳಿಕೋಟೆ 24: ಪಟ್ಟಣದ ಶ್ರೀಘನಮಠೇಶ್ವರ ಶಿಕ್ಷಣ ಮಹಾವಿದ್ಯಾಯದಲ್ಲಿ 2024-25 ನೇ ಸಾಲಿನ ಬಿ.ಇಡಿ. ನಾಲ್ಕನೇ ಸೆಮಿಸ್ಟರ್ನಪ್ರ ಶಿಕ್ಷಣಾರ್ಥಿಗಳ ಬೀಳ್ಕೊಡುವ ಹಾಗೂ ದೀಪದಾನ ಸಮಾರಂಭ ನಡೆಸಲಾಯಿತು. ಈ ಸಮಯದಲಿ ್ಲಮುಖ್ಯಅತಿಥಿಗಳಾದ ಮಾನ್ಯಶ್ರೀ ಸೋಮಲಿಂಗಗೆಣ್ಣೂರ, ಅಪರಜಿಲ್ಲಾಧಿಕಾರಿಗಳು ಮಾತನಾಡಿ ತಮ್ಮ ಬಾಲ್ಯಜೀವನದ ಘಟನೆಯನ್ನು ತಿಳಿಸುತ್ತಾಪ್ರ-ಶಿಕ್ಷಣಾರ್ಥಿಗಳಿಗೆ ಮೂಡನಂಬಿಕೆಗಳಿಗೆ ಜೋತುಬೀಳದೆ ಸ್ವಪ್ರಯತ್ನದಿಂದ ಮುಂದೆಬನ್ನಿರಿ ಎಂದುತಿಳಿಸಿದರು. ಮಾನವ ಜೀವನದಲ್ಲಿ ಸಾಧನೆ ಅಂದರೆ ಕೇವಲ ಗುರಿಯನ್ನು ತಲುಪುವುದು ಅಲ್ಲ ಶ್ರಿ ಅದನ್ನು ತಲುಪುವ ಪ್ರಯತ್ನದಲ್ಲಿಯೂ ಅರ್ಥವಿದೆ. ಸಾಧನೆಗೆ ಶ್ರಮ, ನಂಬಿಕೆ ಮತ್ತು ಛಲ ಎಂಬ ಮೂರು ಅಡಿಪಾಯಗಳಿವೆ. ಇವುಗಳ ಮಧ್ಯೆ “ಛಲ” ಅತ್ಯಂತ ಶಕ್ತಿಶಾಲಿ. ಛಲವಿದ್ದರೆ ಅಸಾಧ್ಯವೆನ್ನುವುದೇ ಸಾಧ್ಯವಾಗುತ್ತದೆ.ಎಂದುಪ್ರ-ಶಿಕ್ಷಣಾರ್ಥಿಗಳಿಗೆಅರ್ಥೈಸಿದರು.
ತಾಳಿಕೋಟಿ ತಾಲೂಕಿನ ದಂಡಾಧಿಕಾರಿಗಳಾದ ಮಾನ್ಯ ಶ್ರೀ ಡಾ.ವಿನಯಾಹೂಗಾರ ಇವರು ಕೂಡಾಪ್ರ-ಶಿಕ್ಷಣಾರ್ಥಿಗಳಿಗೆ ಭವಿಷ್ಯತ್ತಿನ ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರಿ ಎಂದು ಶುಭಹಾರೈಸಿದರು. ಅಧ್ಯಕ್ಷರಾದ ಡಾ. ಎಸ್.ಎಂ.ಸಜ್ಜನ ಅವರು ಮಾತನಾಡಿ ಸಂಸ್ಥೆಯು ಸದಾ ವಿದ್ಯಾರ್ಥಿಗಳ ಛಲವನ್ನು ಪ್ರೋತ್ಸಾಹಿಸಿ, ಅವರಿಗೆ ಅಗತ್ಯವಾದ ವೇದಿಕೆಯನ್ನು ಒದಗಿಸುತ್ತಿದೆ. ಛಲದಿಂದ ಶ್ರಮಿಸಿದವರು ಯಶಸ್ಸನ್ನು ಅನಿವಾರ್ಯವಾಗಿ ಕಾಣುತ್ತಾರೆ ಎಂಬ ನಂಬಿಕೆ ನಮ್ಮದು.ಎಂದುತಿಳಿಸಿದರು. ಈ ಸಮಯದಲ್ಲಿ ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ,ಆರ್.ಎಸ್.ದೇಸಾಯಿ, ದೈಹಿಕಶಿಕ್ಷಕರಾದ ಶಿವಾನಂದ ಸುಣದಳ್ಳಿ, ಪಿಯುಕಾಲೇಜ್ ಪ್ರಾಚಾರ್ಯರಾದಬಿ.ಎಸ್ ಮಾಲಿಪಾಟೀಲ್ ಸಿಬಿಎಸ್‌ಇ ಪ್ರಾಚಾರ್ಯರಾದ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯರಾದ ಜಿ.ಎನ್.ಪಾಟೀಲ,ಸರ್ವಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 