ಶಾಲಾ ನೂತನ ಎಸ್‌ಡಿಎಮ್‌ಸಿ ಅಧ್ಯಕ್ಷ ಸುಭಾಶ ದುರ್ವೆ ಆಯ್ಕೆ
Subhash Durve elected as new SDMC president of school
ಶಾಲಾ ನೂತನ ಎಸ್‌ಡಿಎಮ್‌ಸಿ ಅಧ್ಯಕ್ಷ ಸುಭಾಶ ದುರ್ವೆ ಆಯ್ಕೆ
ಕಲಾದಗಿ (ತಾ.ಬಾಗಲಕೋಟಿ)07: ಕಲಾದಗಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನೂತನ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸುಭಾಷ್ ದುರ್ವೆ, ಉಪಾಧ್ಯಕ್ಷರಾಗಿ ಲಕ್ಷ್ಮಿ ಮಾದರ ಆಯ್ಕೆಯಾದರು.
ಸದಸ್ಯರಾಗಿ ಕೆ.ದೇವಮಾನೆ, ವಿದ್ಯಾ ಮುಧೋಳ, ಯಲ್ಲವ್ವ ಗಡ್ಡಿ ವಿಜಯ ಕಾಳೆ, ಪರಶುರಾಮ ಚವಾಣ, ಚಾಮುಂಡಿ ಕಾಳೆ ಕಸ್ತೂರಿ ತೋಗುಣಿಸಿ, ಶಕೀಲ್ ಬಡಂಗ್, ರಾಜೇಸಾಬ ಮುಜಾವರ, ಕಾಮಿಲ್ ಮಕಾನದಾರ,ಜರೀನಾ ದಾಡಿವಾಲೆ, ಮುಜಾಫರ ಖಾಜಿ, ದುಂಡಪ್ಪ ನಾಯ್ಕರ, ಜ್ಯೋತಿ ಹೊಸಮನಿ, ಸಾವಿತ್ರಿ ಬೋಸಲೆ, ವೈಶಾಲಿ ಸಾಳುಂಕೆ ನೂತನ ಸದಸ್ಯರಾಗಿ ಆಯ್ಕೆಯಾದರು. ನೂತನ ಎಸ್ಡಿಎಂಸಿಗೆ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರ ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಗ್ರಾಮ ಪಂಚಾಯತಿ ಉಪಾಧ್ಯಕ್ಷ ಫಕೀರ್ಪ ಮಾದರ ಸದಸ್ಯರಾದ ಶ್ಯಾಮ್ ಕಾಳೆ, ಭೀಮಶಿ ಕರಡಿಗುಡ್ಡ, ಬಾಬು ತೇಲಿ, ಶಾಲಾ ಮುಖ್ಯ ಶಿಕ್ಷಕ ಸಿ.ಎಲ್. ಹೂಗಾರ, ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 