ಸಂಭ್ರಮದಿಂದ ಜರುಗಿದ ಶ್ರೀ ಚಿದಂಬರೇಶ್ವರ ಶೈವಾಗ ಮೋಕ್ತ ರಥೋತ್ಸವ
Sri Chidambareshwara Shaivaga Mokta Rathotsava celebrated with great enthusiasm
ಸವದತ್ತಿ 12: ರಾಮಾಪೂರಸೈಟ್ ಶ್ರೀ ಚಿದಂಬರೇಶ್ವರ ಶೈವಾಗ ಮೋಕ್ತ ರಥೋತ್ಸವವು ಅತೀ ಸಂಭ್ರಮದಿಂದ ಜರುಗಿತು. ಇಲ್ಲಿನ ರಾಮಾಪೂರಸೈಟದ ಶ್ರೀ ಚಿದಂಬರೇಶ್ವರ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಜೆ ಸಂಭ್ರಮದಿಂದ ಜಾತ್ರಾ ಮಹೋತ್ಸವ ಅಂಗವಾಗಿ ಬೆಳ್ಳಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜೆ ಕಾರ್ಯಕ್ರಮ ನಡೆದವು ಭಕ್ತರು ದೇವರಿಗೆ ಕಾಯಿ,ಕಪೂರ, ಉತ್ತತಿ, ಬಾಳೆ ಹಣ್ಣು, ನೈವೇದ್ಯ ಸಲ್ಲಿಸಿ ದರ್ಶನ ಪಡೆದರು.
ಮಹಾಸ್ವಾಮಿಗಳ ಚತುರ್ಥಪುತ್ರ ವಾಕ್ ಸಿದ್ಧಿ ಪಡೆದ ಪೂಜ್ಯ ತಪಸ್ವಿಗಳು, ಬಾಪೂ ದೀಕ್ಷಿತರು,ಪ್ರಾರಂಭಿಸಿದ ಶ್ರೀ ಚಿರಂಬರೇಶ್ವರ ಅವತಾರ ಜಯಂತಿ ಶೈವಾಗ ಮೋಕ್ತ ಮಹೋತ್ಸವವು 204 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಚಿದಂಬರೇಶ್ವರ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ಪ್ರಸನ್ನ ದೀಕ್ಷಿತ ಮತ್ತು ನಟೇಶ ದಿಕ್ಷಿತ ದಂಪತಿಗಳು ಚಾಲನೆ ನೀಡಿದರು.ನಂತರ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಜರುಗಿತು.
ಮಹಾರಥೋತ್ಸವ ಕಾರ್ಯಕ್ರಮದಲ್ಲಿ ದಂಡಪಾಣಿ ದೀಕ್ಷಿತರು, ಬ್ರಹ್ಮಾನಂದ ಆಶ್ರಮದ ಶಿವಾನಂದ ಮಹಾಸ್ವಾಮಿಗಳು, ಪ್ರಸನ್ನ ದೀಕ್ಷಿತರು,ಇವರ ನೇತೃತ್ವದಲ್ಲಿ ನಡೆದ ಮಹಾರಥೋತ್ಸವಅತ್ಯಂತ ವಿಜೃಂಭಣೆಯಿಂದ ಜರುಗಿತು. ಈ ವೇಳೆ ಶಾಸಕ ವಿಶ್ವಾಸ ವೈದ್ಯ,ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ಬಸವರಾಜ ಕಾರದಗಿ, ಮತ್ತು ಸ್ಥಳೀಯ ಗಣ್ಯರು, ಯುವಕರು, ಮಕ್ಕಳು, ಮಹಿಳೆಯರು ಉಪಸ್ಥಿತರಿದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 