ಹೂವಿನ ಹಡಗಲಿ

ಸಿದ್ದೇಶ್ವರ ಸ್ವಾಮಿಯ ತೇರು ಗಾಲಿಗೆ ವಿಶೇಷ ಪೂಜೆ

ಸಿದ್ದೇಶ್ವರ ಸ್ವಾಮಿಯ ತೇರು ಗಾಲಿಗೆ ವಿಶೇಷ ಪೂಜೆ

  ಹೂವಿನಹಡಗಲಿ 19: ತಾಲೂಕಿನ ಹೊಳಗುಂದಿ ಸುಕ್ಷೇತ್ರ ಸಿದ್ದೇಶ್ವರ ಸ್ವಾಮಿಯ ರಥೋತ್ಸವ ನಿಮಿತ್ತ  ಅಮವಾಸ್ಯೆ ದಿನ ಶುಕ್ರವಾರ ಬೆಳಿಗ್ಗೆ 9ಗಂಟೆಗೆ ತೇರು ಗಾಲಿ ಹೊರಕ್ಕೆ ಹಾಕಲಾಯಿತು. ಅಳವಂಡಿ  ಹಿರೇಮಠ ದ ಮರಳಾರಾದ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ದೇವಸ್ಥಾನ ಸಮಿತಿ ಯಿಂದ ತೇರು ಗಡ್ಡಿಗೆ ವಿಶೇಷ ಪೂಜೆ ನಂತರ ವಾದ್ಯ ಮೇಳದೊಂದಿಗೆ ತೇರುಗಾಲಿ ಹೊರಕ್ಕೆ ಹಾಕಲಾಯಿತು.ಅಮವಾಸ್ಯೆ ನಿಮಿತ್ತ ಸಿದ್ದೇಶ್ವರ ಸ್ವಾಮಿಗೆ ಅಭಿಷೇಕ್, ಬಿಲ್ವಾರ್ಚನೆ, ಮಂಗಳಾರತಿ ಪೂಜೆ ನೆರವೇರಿತು.ಹೊಸ ವರುಷದಲ್ಲಿ ಜ.2ರಂದು ಸಿದ್ದೇಶ್ವರ ಸ್ವಾಮಿಯ ರಥೋತ್ಸವ, 3ರಂದು ಅಗ್ನಿ ಕಾರ್ಯ ಕ್ರಮ ಜರುಗಲಿದೆ ಜತೆಗೆ ಈಬಾರಿ ದೇಗುಲ ಜೀರ್ಣೋದ್ಧಾರ ನಡೆಯುತ್ತಿರುವದರಿಂದ ಹೆಚ್ಚಿನ ಭಕ್ತಾಧಿಗಳು ದೇಣಿಗೆ ನೀಡಬೇಕೆಂದು ದೇಗುಲ ಸಮಿತಿ ಕೋರಿದೆ. 


ಸುದ್ದಿ ಓದಿ