ವರುಣ ಕೃಪೆಗಾಗಿ ದೇವರಿಗೆ ವಿಶೇಷ ಪೂಜೆ
Special prayers to God for the grace of rain
ವರುಣ ಕೃಪೆಗಾಗಿ ದೇವರಿಗೆ ವಿಶೇಷ ಪೂಜೆ
ಲೋಕದರ್ಶನ ವರದಿ
ಯಲಬುರ್ಗಾ 16 : ಮಂಕಾದ ಮುಂಗಾರು ಮತ್ತು ಕೈಕೊಟ್ಟ ಹಿಂಗಾರು ಮಳೆಯಿಂದ ಜನಜೀವನ ತತ್ತರಿಸಿದೆ. ಬಿತ್ತನೆ ಮಾಡಿದ ಬೆಳೆಗಳು ಒಣಗಲಾರಂಭಿಸಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಅನ್ನದಾತನ ಬದುಕು ಉಳಿಸಲು "ರೈತ ಸಂರಕ್ಷಣಾ ಸಮಿತಿ ಯಲಬುರ್ಗಾ- ಕುಕನೂರು" ವತಿಯಿಂದ ಮಳೆಗಾಗಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ಪಟ್ಟಣದ ಶ್ರೀಮೊಗ್ಗಿಬಸವೇಶ್ವರ ದೇವಸ್ಥಾನದಲ್ಲಿ ಯಲಬುರ್ಗಾ ಮತ್ತು ಕುಕುನೂರ ತಾಲೂಕುಗಳಲ್ಲಿ ಮಳೆ ಯಾಗದೆ ತೀವ್ರ ಬರಗಾಲ ಉಂಟಾಗಿರುವ ಹಿನ್ನೆಲೆಯಲ್ಲಿ, ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಹಾಗೂ "ರೈತ ಸಂರಕ್ಷಣಾ ಸಮಿತಿ ಯಲಬುರ್ಗಾ- ಕುಕನೂರು" ವತಿಯಿಂದ ಮಳೆಗಾಗಿ ವಿಶೇಷ ದೇವರಿಗೆ ವಿಶೇಷ ಪೂಜೆ ನಡೆಯಿತು. ನಂತರ 101 ಕಾಯಿಯನ್ನು ಒಡೆದು ದೇವರಿಗೆ ಪ್ರಾರ್ಥಿಸಲಾಯಿತು. ಈ ವೇಳೆ ಡಾ.ಶಿವನಗೌಡ ದಾನರಡ್ಡಿ, ಹಂಪಯಗಯಸ್ವಾಮಿ ಹಿರೇಮಠ, ಶರಣಪ್ಪ ಗಾಂಜಿ, ಶರಣಪ್ಪ ಅರಕೇರಿ, ಮಲ್ಲು ಜಕ್ಕಲಿ, ಮಹಾಂತೇಶ ಗಾಣಿಗೇರ, ಸಂಗಮೇಶ ಗುತ್ತಿ, ಶಿವಾನಂದ ಬಣಕಾರ, ಈಶ್ವರ ಅಟಮಾಳಗಿ , ಮಂಜುನಾಥ ಬೇಲೆರಿ, ಸಾವಿತ್ರಿ ಗೊಲ್ಲರ್, ಶರಣಮ್ಮ ಪೂಜಾರ ಸೇರಿ ಪಕ್ಷದ ಕಾರ್ಯಕರ್ತರು, ರೈತಮಿತ್ರರು ಇದ್ದರು .
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 